rtgh
Headlines

ಕೋಟ್ಯಂತರ ರೈತರಿಗೆ ಸಿಹಿ ಸುದ್ದಿ: ಇನ್ನು 3 ದಿನಗಳಲ್ಲಿ ಖಾತೆಗೆ ಬೀಳಲಿದೆ 2000 ರೂಪಾಯಿ

PM Kisan Yojana 17th Installment
Share

ಹಲೋ ಸ್ನೇಹಿತರೇ, ಈ ಹಣವನ್ನು ಜೂನ್ 18 ರಂದು (ಮಂಗಳವಾರ) ರೈತರ ಖಾತೆಗೆ ಜಮಾ ಮಾಡಲಾಗುವುದು. ಅಂದರೆ ಇಂದಿನಿಂದ ಮೂರು ದಿನಗಳ ಬಳಿಕ ಅರ್ಹ ರೈತರ ಖಾತೆಗೆ ಹಣ ಜಮೆಯಾಗುತ್ತದೆ. ಎಷ್ಟು ಹಣ ಜಮೆಯಾಗಲಿದೆ ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.

PM Kisan Yojana 17th Installment

ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು 3ನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ ಕೂಡಲೇ ಕಿಸಾನ್ ಸಮ್ಮಾನ್ ನಿಧಿಯ ಕಂತು ಬಿಡುಗಡೆ ಮಾಡುವ ಸಂಬಂಧ ಕಡತಕ್ಕೆ ಸಹಿ ಹಾಕಿದ್ದರು. ಇದೀಗ ರೈತರ ಖಾತೆಗೆ ಕಂತಿನ ಹಣ ಯಾವಾಗ ಬರುತ್ತದೆ ಎಂಬ ಮಾಹಿತಿಯೂ ಬೆಳಕಿಗೆ ಬಂದಿದೆ. ಮುಂಬರುವ ವಾರದಲ್ಲಿ ಪ್ರಧಾನಿ ಮೋದಿಯವರು ಪಿಎಂ ಕಿಸಾನ್ ಯೋಜನೆಯ 17ನೇ ಕಂತನ್ನು ಬಿಡುಗಡೆ ಮಾಡಲಿದ್ದಾರೆ. ಈ ಹಣವನ್ನು ಜೂನ್ 18 ರಂದು ರೈತರ ಖಾತೆಗೆ ಜಮಾ ಮಾಡಲಾಗುವುದು. ಅಂದರೆ ಇಂದಿನಿಂದ 3 ದಿನಗಳ ಬಳಿಕ ಅರ್ಹ ರೈತರ ಖಾತೆಗೆ ಹಣ ಬರಲಿದೆ.

ಜೂನ್ 18 ರಂದು ವಾರಣಾಸಿಗೆ ಭೇಟಿ ನೀಡಲಿದ್ದಾರೆ ಪ್ರಧಾನಿ

ಕೇಂದ್ರದಲ್ಲಿ ಸತತ 3ನೇ ಬಾರಿಗೆ ಸರ್ಕಾರ ರಚಿಸಿದ ನಂತರ ಪ್ರಧಾನಿ ಮೋದಿ ಅವರು ಜೂನ್ 18 ರಂದು, ತಮ್ಮ ಸಂಸದೀಯ ಕ್ಷೇತ್ರ ವಾರಣಾಸಿಗೆ ಮೊದಲ ಬಾರಿಗೆ ಭೇಟಿ ನೀಡಲಿದ್ದಾರೆ. 1 ದಿನದ ಭೇಟಿಯಲ್ಲಿ ಪ್ರಧಾನಿ ರೈತರ ಸಮಾವೇಶ ಉದ್ದೇಶಿಸಿ 17ನೇ ಕಂತಿನ ಬಿಡುಗಡೆ ಮಾಡಲಿದ್ದಾರೆ. ಇದರ ಅಡಿಯಲ್ಲಿ 9.3 ರೈತರ ಖಾತೆಗಳಿಗೆ 20,000 ಕೋಟಿ ರೂ.ಯನ್ನು ಖಾತೆಗೆ ಬಿಡುಗಡೆ ಮಾಡಲಿದ್ದಾರೆ.  

ಏನಿದು ಪಿಎಂ ಕಿಸಾನ್ ಯೋಜನೆ? : 

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಕೇಂದ್ರ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಇದರ ಸಂಪೂರ್ಣ ವೆಚ್ಚವನ್ನು ಸರಕಾರವೇ ಭರಿಸುತ್ತದೆ. ಯೋಜನೆಯನ್ನು 1 ಡಿಸೆಂಬರ್ 2018 ರಂದು ಪ್ರಾರಂಭಿಸಲಾಯಿತು. ಇದು ರೈತರಿಗೆ ನೇರವಾಗಿ ಪ್ರಯೋಜನವನ್ನು ನೀಡುವ ಅತಿದೊಡ್ಡ ಯೋಜನೆಗಳಲ್ಲಿ ಒಂದಾಗಿದೆ. ರೈತರಿಗೆ ಕೃಷಿಗೆ ಆರ್ಥಿಕ ನೆರವು ನೀಡುವುದು ಈ ಯೋಜನೆಯ ಉದ್ದೇಶವಾಗಿದೆ. ಯೋಜನೆಯ ಮೂಲಕ, ಅರ್ಹ ಭೂಮಿ ಹೊಂದಿರುವ ರೈತ ಕುಟುಂಬಗಳಿಗೆ ವಾರ್ಷಿಕ 6,000 ರೂ.ಗಳ ಆರ್ಥಿಕ ನೆರವು ನೀಡಲಾಗುತ್ತದೆ. ಈ ಹಣವನ್ನು ವರ್ಷವಿಡೀ ತಲಾ 2,000 ರೂ.ಗಳಂತೆ 3 ಕಂತುಗಳಲ್ಲಿ ನೀಡಲಾಗುತ್ತದೆ.

ಆನ್‌ಲೈನ್‌ನಲ್ಲಿ ಫಲಾನುಭವಿ ಸ್ಥಿತಿಯನ್ನು ಪರಿಶೀಲಿಸುವುದು ಹೇಗೆ?

> ಮೊದಲು ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ಹೋಗಿ.
> ಈಗ ಬೆನೆಫಿಶಿಯರಿ ಸ್ಟೇಟಸ್ ಇರುವ ಆನ್‌ಲೈನ್ ಪುಟಕ್ಕೆ ಹೋಗಿ.
> ನಂತರ ನಿಮ್ಮ ಆಧಾರ್ ಸಂಖ್ಯೆ ಅಥವಾ ಖಾತೆ ಸಂಖ್ಯೆಯನ್ನು ನಮೂದಿಸಿ.
> ಈಗ ಇಲ್ಲಿ ‘ಗೆಟ್ ಡೇಟಾ ‘ ಬಟನ್ ಮೇಲೆ ಕ್ಲಿಕ್ ಮಾಡಿ.
> ಇದರ ನಂತರ ಬೆನೆಫಿಶಿಯರಿ ಸ್ಟೇಟಸ್  ಮೇಲೆ ಕ್ಲಿಕ್ ಮಾಡಿ.
> ಇದರ ನಂತರ ಪೇಮೆಂಟ್ ಸ್ಟೇಟಸ್ ಕ್ಲಿಕ್ ಮಾಡಿ.
> ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ಬೆನೆಫಿಶಿಯರಿ ಸ್ಟೇಟಸ್ ನಿಮ್ಮ ಸ್ಕ್ರೀನ್ ಮೇಲೆ ಕಾಣಿಸುತ್ತದೆ.

ಇತರೆ ವಿಷಯಗಳು

ಸಾರಿಗೆ ಇಲಾಖೆಯಲ್ಲಿ 9000 ಹುದ್ದೆಗಳ ಭರ್ತಿಗೆ ಕರೆ.! ಆಸಕ್ತರು ತಪ್ಪದೇ ಈ ಜಾಬ್‌ಗೆ ಅಪ್ಲೇ ಮಾಡಿ

ಹಸು, ಕುರಿ, ಕೋಳಿ ಸಾಕಾಣಿಕೆಗೆ ಸಿಗಲಿದೆ ಸಬ್ಸಿಡಿ ಸಾಲ! ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ


Share

Leave a Reply

Your email address will not be published. Required fields are marked *