ಹಲೋ ಸ್ನೇಹಿತರೇ, ರೈತರು ಕೃಷಿ ಮಾಡುವುದಕ್ಕೆ ಹಣದ ಅವಶ್ಯಕತೆ ಇರುತ್ತದೆ. ಕೃಷಿಯ ವಿವಿಧ ಹಂತದಲ್ಲಿ ರೈತರು ಹಣ ಖರ್ಚು ಮಾಡಬೇಕಾಗುತ್ತದೆ. ಆದರೆ ಎಲ್ಲಾ ಸಮಯದಲ್ಲಿ ಅವರ ಬಳಿ ಹಣ ಇರುವುದಿಲ್ಲ. ಹಣ ಹೊಂದಿಸುವುದಕ್ಕೆ ಕಷ್ಟಪಡುವ ರೈತರು, ಸಾಲದ ಮೊರೆ ಹೋಗಬೇಕಾಗುತ್ತದೆ.
ಕೆಲವು ಸಮಯದಲ್ಲಿ ಸಾಲ ಪಡೆಯುವುದಕ್ಕೆ ಇನ್ಯಾರನ್ನೋ ಕೇಳಿ, ಹೆಚ್ಚಿನ ಬಡ್ಡಿ ಕಟ್ಟಬೇಕಾಗಿ ಬರುತ್ತದೆ. ಅದರಿಂದ ರೈತರಿಗೆ ಸಾಲದ ಹೊರೆ ಅಂಟಿಕೊಳ್ಳುತ್ತದೆ. ಈ ರೀತಿ ಆಗಬಾರದು ಎಂದು ಸರ್ಕಾರವೇ ರೈತರಿಗೆ ಹೊಸದೊಂದು ಸೌಲಭ್ಯವನ್ನು ಜಾರಿಗೆ ತಂದಿದೆ.
ಇದು ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯ ಆಗಿದೆ. ಈ ಒಂದು ಸೌಲಭ್ಯವನ್ನು ರೈತರು ಪಡೆದು, ಕಿಸಾನ್ ಕ್ರೆಡಿಟ್ ಕಾರ್ಡ್ ಮಾಡಿಸಿಕೊಂಡರೆ ಅವರಿಗೆ ಕೃಷಿ ವಿಷಯಕ್ಕೆ ತುರ್ತು ಖರ್ಚು ಮಾಡಬೇಕಾದ ಪರಿಸ್ಥಿತಿ ಬಂದಾಗ ಯಾರ ಬಳಿಯೂ ಹಣ ಕೇಳುವ ಅಗತ್ಯ ಬರುವುದಿಲ್ಲ. ಬದಲಾಗಿ ಕ್ರೆಡಿಟ್ ಕಾರ್ಡ್ ಬಳಸಿ Loan ಪಡೆದುಕೊಳ್ಳಬಹುದು. ಇದು ರೈತರಿಗೆ ಹೆಚ್ಚಿನ ಅನುಕೂಲ ನೀಡುತ್ತದೆ.
ಇದನ್ನೂ ಸಹ ಓದಿ : ಅಂಚೆ ಇಲಾಖೆಯಲ್ಲಿ 44200 ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ..! 10th ಪಾಸ್ ಆಗಿದ್ರೆ ಸಾಕು
ರೈತರು ಈ ಒಂದು ಕಿಸಾನ್ ಕ್ರೆಡಿಟ್ ಕಾರ್ಡ್ ಮಾಡಿಸಿಕೊಂಡು ಪಡೆಯುವ ಸಾಲಕ್ಕೆ ಬಡ್ಡಿ ಕೂಡ ಬಹಳ ಕಡಿಮೆ ಇರುತ್ತದೆ. ಇದರಿಂದ ರೈತರು ಬಡ್ಡಿ ಮತ್ತು ಸಾಲದ ಹೊರೆಯಿಂದ ಮುಕ್ತಿ ಪಡೆಯಬಹುದು. ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯವನ್ನು ರಾಷ್ಟ್ರೀಯ ಕೃಷಿ ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಶುರು ಮಾಡಿದೆ. ನಮ್ಮ ದೇಶದ ಎಲ್ಲಾ ರೈತರು ಕೂಡ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಅದು ಹೇಗೆ ಎಂದು ಪೂರ್ತಿಯಾಗಿ ತಿಳಿಯೋಣ..
Contents
ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು ಬೇಕಾಗುವ ದಾಖಲೆಗಳು:
- ರೈತರ ಅಡ್ರೆಸ್ ಪ್ರೂಫ್
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ನಿಮ್ಮ ಜಮೀನಿನ ದಾಖಲೆಗಳು
- ಪಾಸ್ ಪೋರ್ಟ್ ಸೈಜ್ ಫೋಟೋ
ಇದಿಷ್ಟು ದಾಖಲೆಗಳು ಬೇಕಾಗುತ್ತದೆ. ಈ ಎಲ್ಲಾ ದಾಖಲೆಯನ್ನು ತೆಗೆದುಕೊಂಡು ಕೃಷಿ ಬ್ಯಾಂಕ್ ಗೆ ಹೋಗಿ, ಕಿಸಾನ್ ಕ್ರೆಡಿಟ್ ಕಾರ್ಡ್ ಗೆ ಅಪ್ಲೈ ಮಾಡಬಹುದು.
ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯುವ ವಿಧಾನ:
ನೀವು ರೈತರಾಗಿದ್ದು ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಬೇಕು ಎಂದರೆ, ಈ ಕ್ರೆಡಿಟ್ ಕಾರ್ಡ್ ನೀಡುವ ಬ್ಯಾಂಕ್ ಬ್ರಾಂಚ್ ಗೆ ಭೇಟಿ ನೀಡಿ ಅಥವಾ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. ಇಲ್ಲಿ ನೀವು ಕಿಸಾನ್ ಕ್ರೆಡಿಟ್ ಕಾರ್ಡ್ ಆಯ್ಕೆಯನ್ನು ಸೆಲೆಕ್ಟ್ ಮಾಡಿ, ಅರ್ಜಿ ಸಲ್ಲಿಸಬೇಕಾಗುತ್ತದೆ.
ಅರ್ಜಿ ಸಲ್ಲಿಸಿ 15 ದಿನಗಳ ವೇಳೆಗೆ ನಿಮಗೆ ಕಿಸಾನ್ ಕ್ರೆಡಿಟ್ ಕಾರ್ಡ್ ನಿಮ್ಮ ಕೈಸೇರುತ್ತದೆ. ಇದನ್ನು ಬಳಸಿ ತುರ್ತು ಪರಿಸ್ಥಿತಿಯಲ್ಲಿ Loan ಪಡೆಯಬಹುದು.
ಇತರೆ ವಿಷಯಗಳು:
ಶಾಲಾ ಮಕ್ಕಳಿಗೆ ವಾರದಲ್ಲಿ 4 ದಿನ ಮೊಟ್ಟೆ ವಿತರಣೆ; ಸಿಎಂ ಸಿದ್ದರಾಮಯ್ಯ
ಸರ್ಕಾರಿ ನೌಕರರಿಗೆ ಸಂತಸದ ಸುದ್ದಿ! ಬಜೆಟ್‌ನಲ್ಲಿ 8ನೇ ವೇತನ ಆಯೋಗದ ಪ್ರಸ್ತಾವನೆಗೆ ಅಸ್ತು
ರಾಜ್ಯದಲ್ಲಿ ಸೈಕ್ಲೋನ್ ಭೀತಿ, 6 ಜಿಲ್ಲೆಗಳಿಗೆ ಮತ್ತೆ ರೆಡ್ ಅಲರ್ಟ್