rtgh
Headlines

ಮುಂಗಾರು ಬೆಳೆಗೆ ವಿಮೆ ರಕ್ಷೆ: ಈ ಬೆಳೆ ಬೆಳೆದಿದ್ದರೆ ನಿಮಗೂ ಸಿಗುತ್ತೇ ನೋಡಿ ದುಡ್ಡು

pm fasal bima yojana
Share

ಹಲೋ ಸ್ನೇಹಿತರೇ, ಪೂರ್ವ ಮುಂಗಾರು ದೊಡ್ಡ ಮಟ್ಟಿಗೆ ಅನುಕೂಲ ಮಾಡದಿದ್ದರೂ ರೈತರು ಕೃಷಿ ಚಟುವಟಿಕೆಗೆ ತೊಡಗಿದ್ದಾರೆ. ಇದರೊಂದಿಗೆ ಸರ್ಕಾರ ಸಹ ರೈತರು ಸಂಭವನೀಯ ನಷ್ಟದಿಂದ ಪಾರಾಗಲು ಮುಂಗಾರು ಬೆಳೆಗೆ ಪ್ರಧಾನ ಮಂತ್ರಿ ಫಸಲ್ ವಿಮೆ ಯೋಜನೆಯನ್ನು ಜಾರಿ ಮಾಡಿದ್ದು ರೈತರು ಇದರ ಸದುಪಯೋಗ ಪಡೆಯಬೇಕು ಎಂದು ಕೃಷಿ ಇಲಾಖೆ ಮನವಿ ಮಾಡಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ತಿಳಿಯಿರಿ.

pm fasal bima yojana

ಪ್ರಸಕ್ತ ವರ್ಷ ರೈತರು ಒಟ್ಟು 19 ಬೆಳೆಗಳಿಗೆ ವಿಮೆ ಮಾಡಬಹುದಾಗಿದ್ದು, ಅದನ್ನು ಪಡೆಯುವ ವಿಧಾನ, ಎಲ್ಲಿ ಪಡೆಯಬೇಕು ಎಂಬಿತ್ಯಾದಿಗಳ ಬಗ್ಗೆ ಇಲ್ಲಿದೆ ವಿವರ.

ತಡವಾದರೂ ಅಬ್ಬರಿಸುತ್ತಿರುವ ಪೂರ್ವ ಮುಂಗಾರು ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗೆ ಉತ್ತೇಜನ ನೀಡಿದೆ. ಜತೆಗೆ ಸರಕಾರ ಸಂಭವನೀಯ ನಷ್ಟದಿಂದ ಪಾರಾಗಲು ರೈತರಿಗೆ ಅನುಕೂಲವಾಗುವಂತೆ ಮುಂಗಾರು ಬೆಳೆಗೆ ಪ್ರಧಾನ ಮಂತ್ರಿ ಫಸಲ್‌ ವಿಮೆ ಯೋಜನೆ ಜಾರಿ ಮಾಡಿದೆ.

ಪ್ರಸಕ್ತ ಸಾಲಿನಲ್ಲಿ 19 ಬೆಳೆಗಳಿಗೆ ರೈತರು ಬೆಳೆ ವಿಮೆ ಮಾಡಬಹುದಾಗಿದ್ದು, ಟಾಟಾ ಎಐಜಿ ಜನರಲ್‌ ವಿಮಾ ಕಂಪನಿ ವಿಮೆಗೆ ಆಯ್ಕೆಯಾಗಿದೆ. ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿರುವ ಎಳ್ಳು, ಸೂರ್ಯಕಾಂತಿ, ಉದ್ದು, ಹೆಸರು, ಅಲಸಂದೆ, ನೆಲಗಡಲೆ, ಎಲೆಕೋಸು, ಆಲೂಗಡ್ಡೆ, ಟೊಮ್ಯಾಟೊ, ಜೋಳ ಸೇರಿದಂತೆ 19 ಬೆಳೆಗಳಿಗೆ ರೈತರು ಬೆಳೆ ವಿಮೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ. ಮುಂದಿನ ದಿನಗಳಲ್ಲಿ ಬೆಳೆ ನಷ್ಟದಿಂದ ಪಾರಾಗಲು ತಪ್ಪದೆ ಬೆಳೆ ವಿಮೆ ಮಾಡಿಕೊಳ್ಳುವಂತೆ ಕೃಷಿ ಇಲಾಖೆ ಮನವಿ ಮಾಡಿದೆ.

ಬೆಳೆ ಸಾಲ ಪಡೆದರೆ ವಿಮೆ ಕಡ್ಡಾಯ

ತಾಲೂಕುವಾರು ಮುಖ್ಯ ಬೆಳೆಗಳನ್ನು ಗ್ರಾಮ ಪಂಚಾಯಿತಿ ಮಟ್ಟಕ್ಕೆ & ಇತರೆ ಬೆಳೆಗಳನ್ನು ಹೋಬಳಿ ಮಟ್ಟಕ್ಕೆ ಅನುಸೂಚಿಸಿ, ಬೆಳೆ ವಿಮೆ ಅನುಷ್ಠಾನಗೊಳಿಸಲು ಸರ್ಕಾರ ಮಂಜೂರು ನೀಡಿದೆ. ಬೆಳೆ ಸಾಲ ಪಡೆಯುವ ರೈತರಿಗೆ ಬ್ಯಾಂಕ್‌ನಿಂದಲೇ ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಲಾಗುತ್ತಿದೆ. ಆದರೆ, ಬೆಳೆ ಸಾಲ ಪಡೆಯದ ರೈತರು ಸ್ವತಃ ವಿಮೆ ಮಾಡಿಸಿಕೊಳ್ಳಬೇಕು.

ರೈತರು ಅರ್ಜಿಯೊಂದಿಗೆ RTC, ಕಂದಾಯ ರಶೀದಿ, ಖಾತಾ ಪುಸ್ತಕ, ಪಾಸ್‌ಬುಕ್‌, ಆಧಾರ್‌ ಕಾರ್ಡ್‌ ಪ್ರತಿಯನ್ನು ನೀಡಿ ಬೆಳೆ ವಿಮೆ ಮಾಡಿಸಿಕೊಳ್ಳಬಹುದು. ವಿಮಾ ಪ್ರಸ್ತಾವನೆ ಸಲ್ಲಿಸಲು ಒಂದೊಂದು ಬೆಳೆಗಳಿಗೆ ಒಂದೊಂದು ದಿನಾಂಕದವರೆಗೆ ಅವಕಾಶ ಕಲ್ಪಿಸಲಾಗಿದೆ. ಎಳ್ಳು, ಸೂರ್ಯಕಾಂತಿಯಂತಹ ಮಳೆಯಾಶ್ರಿತ ಬೆಳೆಗಳಿಗೆ ಜುಲೈ 1 ಅಂತಿಮ ದಿನವಾದರೆ, ಭತ್ತ, ಹುರುಳಿಗೆ ಆಗಸ್ಟ್‌ 16ರವರೆಗೆ ಅವಕಾಶವಿದೆ.

ಬೆಳೆ ವಿಮೆಯ ವಿವರ
ಬೆಳೆವಿಮಾ ಮೊತ್ತ (ರೂ. ಹೆಕ್ಟೇರ್‌ಗೆ)ವಿಮಾ ಕಂತು(ರೂ. ಹೆಕ್ಟೇರ್‌ಗೆ)ಅಂತಿಮ ದಿನಾಂಕ
ಎಳ್ಳು (ಮಳೆಯಾಶ್ರಿತ)28,750575ಜು. 1
ಸೂರ್ಯಕಾಂತಿ40,750815ಜು. 1
ಉದ್ದು32,750655ಜು. 1
ಹೆಸರು33,250665ಜು. 1
ಅಲಸಂದೆ30,000600ಜು. 1
ನೆಲಗಡಲೆ54,5001090ಜು. 15
ಎಲೆಕೋಸು75,5003775ಜು. 15
ಆಲೂಗಡ್ಡೆ72,2503236.8ಜು. 15
ಟೊಮ್ಯಾಟೋ1,41,5006608.05ಜು. 15
ಜೋಳ38,250765ಜು. 15
ಮುಸುಕಿನ ಜೋಳ(ಮಳೆಯಾಶ್ರಿತ)56,5001130ಜು. 31
ಅರಿಶಿಣ1,42,2504409.75ಜು. 31
ರಾಗಿ (ಮಳೆಯಾಶ್ರಿತ)42,500850ಜು. 31
ರಾಗಿ (ನೀರಾವರಿ)50,7501015ಜು. 31
ಭತ್ತ (ನೀರಾವರಿ)93,2501865ಆ. 16
ಹುರುಳಿ20,500410ಆ. 16

ಎಲ್ಲಿ ಬೆಳೆ ವಿಮೆ ಮಾಡಿಸಬಹುದು?

ಬ್ಯಾಂಕ್‌ಗಳು, ಸಾಮಾಜಿಕ ಸೇವಾ ಕೇಂದ್ರಗಳು, ಮೈಸೂರು ಒನ್‌, ಕರ್ನಾಟಕ ಒನ್‌, ಗ್ರಾಮ ಒನ್‌ ಕೇಂದ್ರಗಳಲ್ಲಿ ನಿಗದಿತ ಸಮಯದೊಳಗೆ ವಿಮಾ ಕಂತು ಪಾವತಿಸಿ ಬೆಳೆ ವಿಮೆಗೆ ಪ್ರಸ್ತಾವನೆ ಸಲ್ಲಿಸಿ, ನೋಂದಣಿ ಮಾಡಿಸಿಕೊಳ್ಳಬಹುದು.

ಬೆಳೆ ವಿಮೆಗೆ ನೋಂದಾಯಿಸಲು ಎಫ್‌ಐಡಿ ಸಂಖ್ಯೆ ಹೊಂದಿರುವುದು ಕಡ್ಡಾಯ. ಒಂದು ವೇಳೆ SID ಸಂಖ್ಯೆ ಹೊಂದಿರದಿದ್ದಲ್ಲಿ ಹತ್ತಿರದ ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರಗಳು ಮತ್ತು ತೋಟಗಾರಿಕೆ ಇಲಾಖೆಯಲ್ಲಿಆಧಾರ್‌ ಸಂಖ್ಯೆ ಮತ್ತು ಆರ್‌ಟಿಸಿ ವಿವರಗಳನ್ನು ಸಲ್ಲಿಸಿ ಎಫ್‌ಐಡಿ ಸಂಖ್ಯೆ ಪಡೆಯಬಹುದು. ಮಾಹಿತಿಗೆ ಸಮೀಪದ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದು.

ಇತರೆ ವಿಷಯಗಳು

ಇಳಿಕೆಯಾದ ಈರುಳ್ಳಿ ಬೆಲೆ! ಗ್ರಾಹಕರ ಮೊಗದಲ್ಲಿ ಸಂತಸ

ಆಧಾರ್ ಕಾರ್ಡ್ ಇದ್ದರೆ ಸಾಕು ಉಚಿತವಾಗಿ ಸಿಗತ್ತೆ ಹೊಲಿಗೆ ಯಂತ್ರ! ಇಂದೇ ಅರ್ಜಿ ಸಲ್ಲಿಸಿ


Share

Leave a Reply

Your email address will not be published. Required fields are marked *