rtgh
Headlines

3 ಕೋಟಿ ಬಡವರಿಗೆ ಉಚಿತ ಮನೆ ಭಾಗ್ಯ! ಸಚಿವ ಸಂಪುಟದ ಮೊದಲ ನಿರ್ಧಾರ

pm awas yojana apply online
Share

ಹಲೋ ಸ್ನೇಹಿತರೇ, ನಮ್ಮ ದೇಶದ ಜನರಿಗೆ ಸ್ವಂತ ಸೂರು ಇರಬೇಕು ಎನ್ನುವ ಉದ್ದೇಶದಿಂದ ಪಿಎಂ ಮೋದಿ ಅವರು ಪಿಎಂ ಆವಾಸ್ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಈ ಯೋಜನೆಯು ಈಗಾಗಲೇ ಕೋಟ್ಯಾಂತರ ಜನರಿಗೆ ಸ್ವಂತ ಮನೆ ನಿರ್ಮಿಸಿ ಕೊಟ್ಟಿದೆ. ಒಂದು ವೇಳೆ ನೀವು ಸ್ವಂತ ಮನೆ ಮಾಡಿಕೊಳ್ಳುವ ಕನಸು ಹೊಂದಿದ್ದರೆ ಪಿಎಂ ಆವಾಸ್ ಯೋಜನೆಯ ಮೂಲಕ ಸಬ್ಸಿಡಿ ಸಾಲ ಪಡೆದು, ನಿಮ್ಮ ಕನಸಿನ ಮನೆಯನ್ನು ಕಟ್ಟಿಕೊಳ್ಳಬಹುದು.

pm awas yojana apply online

Contents

ಯಾರಿಗೆಲ್ಲ ಸಿಗಲಿದೆ ಈ ಯೋಜನೆಯ ಪ್ರಯೋಜನ

ಹಳ್ಳಿಯಲ್ಲಿ ಮತ್ತು ಸಿಟಿಯಲ್ಲಿ ಎರಡು ಕಡೆ ವಾಸ ಮಾಡುವವರು ಈ ಯೋಜನೆಯ ಸೌಲಭ್ಯ ಪಡೆದುಕೊಳ್ಳಬಹುದು. ಪಿಎಂ ಆವಾಸ್ ಯೋಜನೆಯಲ್ಲಿ ಮನೆ ಕಟ್ಟುವವರಿಗೆ ಸಬ್ಸಿಡಿ ಸಾಲ ಸಿಗುತ್ತದೆ, ಸಬ್ಸಿಡಿ ಮೊತ್ತ ಎಷ್ಟಿರುತ್ತದೆ ಎನ್ನುವುದು ನಿಮ್ಮ ಮನೆಯ ವಿಸ್ತೀರ್ಣ ಹಾಗೂ ಯಾವ ಮಟ್ಟದಲ್ಲಿ ಮನೆ ಕಟ್ಟಿಸುತ್ತಿದ್ದೀರಿ ಎನ್ನುವುದರ ಮೇಲೆ ಡಿಪೆಂಡ್ ಆಗಿರುತ್ತದೆ. ಈಗಾಗಲೇ 4 ಕೋಟಿಗಿಂತ ಹೆಚ್ಚಿನ ಜನರು ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದು, ನೀವು ಕೂಡ ಅಪ್ಲೈ ಮಾಡಿ.

ಪಿಎಂ ಮೋದಿ ಅವರಿಂದ ಗುಡ್ ನ್ಯೂಸ್

ಪಿಎಂ ನರೇಂದ್ರ ಮೋದಿ ಅವರು ಇತ್ತೀಚೆಗೆ 3ನೇ ಬಾರಿ ಪಿಎಮ್ ಆಗಿ ಆಯ್ಕೆಯಾಗಿ, ಅಧಿಕಾರ ಸ್ವೀಕರಿಸಿದ್ದಾರೆ. ಈ ವೇಳೆ ಮೋದಿ ಅವರು ಪಿಎಮ್ ಆವಾಸ್ ಯೋಜನೆಯ ಅಡಿಯಲ್ಲಿ ಸುಮಾರು 3 ಕೋಟಿ ಮನೆಗಳ ನಿರ್ಮಾಣಕ್ಕೆ ಅನುಮತಿ ನೀಡಿದ್ದಾರೆ. ಆವಾಸ್ ಯೋಜನೆಯಲ್ಲಿ ಈ ರೀತಿ ಇದ್ದು, ಅವು ಯಾವುವು ಎಂದರೆ.

1. ಪ್ರಧಾನಮಂತ್ರಿ ಆವಾಸ್ ಯೋಜನೆ ಗ್ರಾಮೀಣ (PMAY-G)
2. ಪ್ರಧಾನಮಂತ್ರಿ ಆವಾಸ್ ಯೋಜನೆ ನಗರ (PMAY-U)

ಇದನ್ನೂ ಸಹ ಓದಿ : ವೇತನ ಹೆಚ್ಚಳ ನಿರೀಕ್ಷೆಯಲ್ಲಿದ್ದ ನೌಕರರಿಗೆ ನಿರಾಸೆ.!

ಅರ್ಜಿ ಸಲ್ಲಿಕೆಗೆ ಅಗತ್ಯವಿರುವ ಅರ್ಹತೆಗಳು

ಈ ಯೋಜನೆಗೆ ಅರ್ಜಿ ಸಲ್ಲಿಸುವ ವ್ಯಕ್ತಿಯ ವಾರ್ಷಿಕ ಆದಾಯ 18 ಲಕ್ಷಕ್ಕಿಂತ ಕಡಿಮೆ ಇರಬೇಕು. ಅಂಥವರು ಅರ್ಜಿ ಸಲ್ಲಿಸಬಹುದು. ಜನರ ಆದಾಯವನ್ನು ಇಲ್ಲಿ 3 ರೀತಿಯಲ್ಲಿ ವಿಭಾಗಿಸಲಾಗಿದೆ. EWS ಅಂದರೆ ಅತ್ಯಂತ ಕಡಿಮೆ ಆದಾಯ ಹೊಂದಿರುವವರು, LIG ಅಂದರೆ ಕಡಿಮೆ ಆದಾಯ ಹೊಂದಿರುವವರು, MIG ಅಂದರೆ ಮಧ್ಯಮ ರೀತಿಯಲ್ಲಿ ಆದಾಯ ಹೊಂದಿರುವವರು. EWS ಗೆ ಸೇರುವವರ ಆದಾಯ 3 ಲಕ್ಷಗಳ ಒಳಗಿರುತ್ತದೆ, LIG ಗೆ ಸೇರುವವರ ಆದಾಯ 3 ರಿಂದ 6 ಲಕ್ಷಗಳ ಒಳಗೆ ಇರುತ್ತದೆ, MIG ಸೇರುವವರ ಆದಾಯ 6 ರಿಂದ 18 ಲಕ್ಷಗಳ ಒಳಗೆ ಇರುತ್ತದೆ.

ಅರ್ಜಿ ಸಲ್ಲಿಕೆಗೆ ನಿಯಮಗಳು:

  • ಅರ್ಜಿ ಸಲ್ಲಿಸುವ ವ್ಯಕ್ತಿ ನಮ್ಮ ದೇಶದವರೇ ಆಗಿರಬೇಕು ಹಾಗೆಯೇ ಅವರ ವಯಸ್ಸು 18 ವರ್ಷ ತುಂಬಿರಬೇಕು.
  • ಅರ್ಜಿ ಹಾಕುವವರ ಬಳಿ ಇನ್ನೆಲ್ಲಿಯೂ ಸ್ವಂತ ಮನೆ ಇರಬಾರದು.
  • ಅವರ ಮನೆಯವರಿಗೆ ಸರ್ಕಾರಿ ಕೆಲಸ ಇರಬಾರದು.
  • ತಮ್ಮದೇ ಸ್ವಂತ ಭೂಮಿ ಇದ್ದರೆ, ಅಲ್ಲಿ ಮನೆ ಕಟ್ಟಿಸುವುದಕ್ಕೆ ಕೂಡ ಸಾಲ ಪಡೆಯಬಹುದು.
  • ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವವರು ಸಹ ಈ ಯೋಜನೆಯ ಮೂಲಕ ಸ್ವಂತ ಮನೆ ಮಾಡಿಕೊಳ್ಳಬಹುದು.
  • ಪಿಎಂ ಆವಾಸ್ ಯೋಜನೆಯ ಅಡಿಯಲ್ಲಿ ನೀವು ಅರ್ಜಿ ಹಾಕುವ ಬ್ಯಾಂಕ್ ಇಂದ ಕಡಿಮೆ ಬಡ್ಡಿದರದಲ್ಲಿ ಹೋಮ್ ಲೋನ್ ಸಿಗುತ್ತದೆ. 20 ವರ್ಷಗಳಲ್ಲಿ ನೀವು ಸಾಲ ತೀರಿಸಬೇಕಾಗುತ್ತದೆ.

ಇತರೆ ವಿಷಯಗಳು:

ಸಾರಿಗೆ ಇಲಾಖೆಯಲ್ಲಿ 9000 ಹುದ್ದೆಗಳ ಭರ್ತಿಗೆ ಕರೆ.! ಆಸಕ್ತರು ತಪ್ಪದೇ ಈ ಜಾಬ್‌ಗೆ ಅಪ್ಲೇ ಮಾಡಿ

ಹಸು, ಕುರಿ, ಕೋಳಿ ಸಾಕಾಣಿಕೆಗೆ ಸಿಗಲಿದೆ ಸಬ್ಸಿಡಿ ಸಾಲ! ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ

ಪರೀಕ್ಷೆಯಿಲ್ಲದೆ NHAI ನಲ್ಲಿ ಕೆಲಸ ಪಡೆಯಲು ಸುವರ್ಣಾವಕಾಶ! ಸಿಗುತ್ತೆ ₹215000 ದವರೆಗೆ ವೇತನ


Share

Leave a Reply

Your email address will not be published. Required fields are marked *