ಹಲೋ ಸ್ನೇಹಿತರೇ, ವಾಸ್ತವ್ಯ ದಾಖಲೆಗೆ ರೇಷನ್ ಕಾರ್ಡ್ ಅತ್ಯಂತ ಪ್ರಮುಖ ದಾಖಲೆ ಆಗಿದೆ. ಕೇವಲ ಪಡಿತರ ಆಹಾರ ಪಡೆಯುವುದು ಅಷ್ಟೇ ಅಲ್ಲದೆ ಶಿಕ್ಷಣ ಹಾಗೂ ಆರೋಗ್ಯ ಸೇವೆಗಳಿಗೂ ಕೂಡ ಈಗ ರೇಷನ್ ಕಾರ್ಡ್ ಮಹತ್ವದ ದಾಖಲೆಯಾಗಿ ಬದಲಾವಣೆ ಆಗುತ್ತಿದೆ, ಆದರೂ ಹಲವಾರು ಜನರ ಬಳಿ ರೇಷನ್ ಕಾರ್ಡ್ ಇನ್ನು ಲಭ್ಯವಿಲ್ಲ. ಇದರ ಕುರಿತಾದ ಸಂಪೂರ್ಣ ಮಾಹಿತಿಗಾಗಿ ಈ ಲೇಖನವನ್ನು ಕೊನೆವರೆಗೂ ಓದಿ..
Contents
ಹೊಸ ರೇಷನ್ ಕಾರ್ಡ್:
ಇನ್ನು ಹಲವಾರು ಮಂದಿಯ ಬಳಿ ರೇಷನ್ ಕಾರ್ಡ್ ಇದ್ದರೂ ಕೂಡ ಅದು ಅಪ್ಡೇಟ್ ಆಗಿರುವುದಿಲ್ಲ, ಕುಟುಂಬದ ಹೊಸ ಸದಸ್ಯರ ಹೆಸರುಗಳು ಅಲ್ಲಿ ನಮೂದಾಗಿರುವುದಿಲ್ಲ ಅಥವಾ ಬೇರೆ ಕಡೆಗೆ ಹೋದ ಕುಟುಂಬದ ಸದಸ್ಯರ ಜನರ ಹೆಸರುಗಳು ಡಿಲೀಟ್ ಆಗಿರುವುದಿಲ್ಲ, ನಮ್ಮಲ್ಲಿರುವ ಎಲ್ಲ ದಾಖಲೆಗಳು ಸರಿಯಾಗಿ ಅಪ್ಡೇಟ್ ಆಗಿರೋದು ಬಹಳ ಮುಖ್ಯ.. ರೇಷನ್ ಕಾರ್ಡ್ ಅಂತೂ ಅಪ್ಡೇಟ್ ಆಗಿರೋದು ಬಹಳ ಮುಖ್ಯ.
ಇತ್ತೀಚಿಗೆ ರಾಜ್ಯ ಸರ್ಕಾರ ಆರಂಭಿಸಿದ ಹಲವು ಹೊಸ ಯೋಜನೆಗಳಿಗೂ ಕೂಡ ರೇಷನ್ ಕಾರ್ಡ್ ಅಥವಾ ಪಡಿತರ ಚೀಟಿಯ ಮೂಲಕವೇ ಸಹಾಯಧನ ನೀಡಲಾಗುತ್ತಿದೆ. ಇದರಲ್ಲಿ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಗಳು ಪ್ರಮುಖವಾಗಿವೆ. ಇಷ್ಟೆಲ್ಲಾ ಪ್ರಯೋಜನ ಇರುವ ರೇಷನ್ ಕಾರ್ಡ್ ಅನ್ನು ನೀವು ಇಲ್ಲಿಯ ತನಕ ಮಾಡಿಸಿಲ್ಲ ಎಂದಾದಲ್ಲಿ ನಿಮಗಾಗಿ ಒಂದು ವಿಶೇಷವಾದ ಮಾಹಿತಿ ಇಲ್ಲಿದೆ.
ಈ ರೀತಿ ರೇಷನ್ ಕಾರ್ಡ್ ಅಪ್ಡೇಟ್ ಮಾಡಿಸಿ:
ರೇಷನ್ ಕಾರ್ಡ್ ನಲ್ಲಿ ನಿಮ್ಮ ಹೆಸರು ಇಲ್ಲದೆ ಇದ್ದಲ್ಲಿ ನೀವೀಗ ಅದನ್ನು ಅಪ್ಡೇಟ್ ಮಾಡಿಸಿಕೊಳ್ಳಬಹುದು. ಈ ಸೇವೆ ಸಂಪೂರ್ಣವಾಗಿ ಉಚಿತ ಆಗಿದ್ದು ಆನ್ಲೈನ್ ಅಥವಾ ಆಫ್ಲೈನ್ ನ ಮೂಲಕ ನೀವು ಇದನ್ನು ಮಾಡಿಕೊಳ್ಳಬಹುದು.
NFSH.gov.in ವೆಬ್ಸೈಟ್ಗೆ ಭೇಟಿ ನೀಡಿ ಸರ್ವಿಸಸ್ ಎಂಬ ಲಿಂಕಿನ ಮೇಲೆ ಕ್ಲಿಕ್ ಮಾಡಿದಾಗ ನಿಮಗೆ ಈ ಆಯ್ಕೆಗಳು ತೆರೆದುಕೊಳ್ಳುತ್ತವೆ. ಇಲ್ಲಿ ನಿಮ್ಮ ರಾಜ್ಯ ಜಿಲ್ಲೆ ತಾಲೂಕು ಹಾಗೂ ಹೋಬಳಿಗಳ ವಿವರಗಳನ್ನು ಭರ್ತಿ ಮಾಡಿದಾಗ ಆಯಾ ರೇಷನ್ ಕಾರ್ಡ್ ನ ಅಡಿಯಲ್ಲಿ ಎಷ್ಟು ಸದಸ್ಯರು ಇದ್ದಾರೆ ಎಂಬ ಮಾಹಿತಿ ತಿಳಿದು ಬರುತ್ತದೆ.
ಇದನ್ನೂ ಸಹ ಓದಿ : 5, 8, 9ನೇ ತರಗತಿ ಫಲಿತಾಂಶಕ್ಕೆ ಹೊಸ ತಿರುವು!! ಸುಪ್ರೀಂ ಕೋರ್ಟ್ ಮಹತ್ವದ ಘೋಷಣೆ ಮಾಡಿದೆ
ಒಂದು ವೇಳೆ ನಿಮ್ಮ ಹೆಸರು ಅಲ್ಲಿ ಇಲ್ಲ ಎಂದಾದಲ್ಲಿ ಅಥವಾ ನಿಮ್ಮ ಕುಟುಂಬದ ಸದಸ್ಯರ ಹೆಸರನ್ನು ಸೇರಿಸಬೇಕು ಎಂದಾದಲ್ಲಿ ನೀವು ಅದನ್ನು ಮಾಡಬಹುದು. ಇದಕ್ಕಾಗಿ ನೀವು ಆಹಾರ ನಾಗರಿಕ ಸರಬರಾಜು ಇಲಾಖೆಗೆ ಭೇಟಿ ನೀಡಿ ನಿಮ್ಮ ಹೆಸರುಗಳನ್ನು ನಮೂದಿಸಿಕೊಳ್ಳಬಹುದು.
ಇನ್ನು ಇಲಾಖೆಗೆ ಭೇಟಿ ನೀಡದೆ ಆನ್ಲೈನ್ ಮೂಲಕವೇ ನಿಮ್ಮ ಹೆಸರನ್ನು ರೇಷನ್ ಕಾರ್ಡ್ ನಲ್ಲಿ ನಮೂದಿಸಿಕೊಳ್ಳಬೇಕು ಎಂದಾದಲ್ಲಿ ನೀವು ಹಾಗೆಯೂ ಮಾಡಬಹುದು ಆನ್ಲೈನ್ ನ ಮೂಲಕ https://ahara.kar.nic.in/home ವೆಬ್ಸೈಟ್ಗೆ ಭೇಟಿ ನೀಡಿ ಅಲ್ಲಿ ನಿಮ್ಮ ರೇಷನ್ ಕಾರ್ಡ್ ಹೆಸರನ್ನು ಅಥವಾ ಸಂಖ್ಯೆಯನ್ನು ನಮೂದಿಸಿದಾಗ ಅಲ್ಲಿ ನಿಮಗೆ ನಿಮ್ಮ ಹೆಸರನ್ನು ಸೇರಿಸುವ ಆಯ್ಕೆಗಳು ಲಭ್ಯವಾಗುತ್ತದೆ.
ಸರ್ಕಾರದ ಹಲವು ಯೋಜನೆಗಳು ಅನ್ನಭಾಗ್ಯದಿಂದ ಹಿಡಿದು ಗೃಹಲಕ್ಷ್ಮಿಯ ತನಕ ಇದೇ ರೇಷನ್ ಕಾರ್ಡ್ ನ ಮೂಲಕ ಜನರಿಗೆ ಸಿಗುತ್ತಿರುವ ಸಂದರ್ಭದಲ್ಲಿ ಹಾಗೂ ಇನ್ನೂ ಕೂಡ ಬರುವ ಹೊಸ ಯೋಜನೆಗಳು ರೇಷನ್ ಕಾರ್ಡ್ ನ ಮೂಲಕವೇ ಸಿಗುವ ಸಂದರ್ಭಗಳಲ್ಲಿ ನಿಮ್ಮ ಹೆಸರು ಖಂಡಿತ ರೇಷನ್ ಕಾರ್ಡ್ ನಲ್ಲಿ ಇರುವಂತೆ ನೀವು ನೋಡಿಕೊಳ್ಳಬೇಕು
ಹೀಗಾಗಿ ತಪ್ಪದೆ ಕೂಡಲೇ ನಿಮ್ಮ ಹೆಸರು ಇದೆಯೇ ಪರಿಶೀಲಿಸಿ ಇಲ್ಲವಾದಲ್ಲಿ ರೇಷನ್ ಕಾರ್ಡ್ ನಲ್ಲಿ ನಿಮ್ಮ ಹೆಸರನ್ನು ನಮೂದಿಸಿಕೊಳ್ಳಿ. ಹೆಚ್ಚಿನ ಮಾಹಿತಿಗೆ ನಿಮ್ಮ ಸಮೀಪದ ನ್ಯಾಯಬೆಲೆ ಅಂಗಡಿ ಅಥವಾ ಸೇವಾಕೇಂದ್ರಕ್ಕೆ ಭೇಟಿ ನೀಡಿ.
ಇತರೆ ವಿಷಯಗಳು:
ಪ್ರತಿ ಗ್ಯಾಸ್ ಖರೀದಿಯ ಮೇಲೆ 200 – 300 ರೂ ಸಬ್ಸಿಡಿ! ಬಿಡುಗಡೆಯಾದ ಹಣವನ್ನು ಈ ರೀತಿ ಚೆಕ್ ಮಾಡಿ
ಮುಂದಿನ 4 ದಿನಗಳ ಕಾಲ ಈ ಭಾಗಗಳಲ್ಲಿ ಭಾರೀ ಮಳೆಯ ಎಚ್ಚರಿಕೆ!
ಮತ್ತೊಂದು ಫ್ರಿ ಗ್ಯಾಸ್ ನಿಮ್ಮದಾಗಲಿದೆ!! BPL ಕಾರ್ಡ್ ಪ್ರತಿ ಫಲಾನುಭವಿಗಳಿಗೂ ಗ್ಯಾಸ್