rtgh
Headlines

ಹೊಸ APL-BPL ಕಾರ್ಡ್‌ ಗೆ ಅರ್ಜಿ ಸಲ್ಲಿಸಿದವರಿಗೆ ಗುಡ್‌ ನ್ಯೂಸ್‌!

New Ration Card Application
Share

APL, BPL ರೇಷನ್‌ ಕಾರ್ಡ್‌ ಗೆ ಅರ್ಜಿಯನ್ನು ಸಲ್ಲಿಸಿರುವವರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಶೀಘ್ರವೇ ಉಳಿಕೆ ಇರುವ ಕಾರ್ಡ್ ಗಳಲ್ಲಿ APL ,BPL ಕಾರ್ಡ್ ಗಳನ್ನು ಗುರುತಿಸಿ ವಿಲೇವಾರಿಯನ್ನು ಮಾಡಲು ಸಚಿವ ಕೆ.ಹೆಚ್.‌ ಮುನಿಯಪ್ಪ ಅವರು ಸೂಚನೆಯನ್ನು ನೀಡಿದ್ದಾರೆ.

New Ration Card Application

ಆಹಾರ ಇಲಾಖೆಯ ಪ್ರಗತಿಯ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಇಲಾಖೆಯಲ್ಲಿ ಪಡಿತರದಾರರಿಗೆ ಸರಬರಾಜು ಆಗುತ್ತಿರುವ ಅಕ್ಕಿ, ರಾಗಿ, ಜೋಳ, ಇವುಗಳ ಗುಣಮಟ್ಟದಿಂರಬೇಕು ಎಂದು ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು. ಉಗ್ರಾಣಗಳಲ್ಲಿ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು ಮತ್ತು ವಿಲೇವಾರಿಯ ಸಂದರ್ಭದಲ್ಲಿ ಉತ್ತಮವಾದ ಗುಣಮಟ್ಟದ ಆಹಾರ ಧಾನ್ಯ ಗಳನ್ನು ಸರಬರಾಜು ಮಾಡಬೇಕು. ಉಳಿಕೆ ಇರುವ ಕಾರ್ಡ್ ಗಳಲ್ಲಿ APL ,BPL ಕಾರ್ಡ್ ಗಳನ್ನು ಗುರುತಿಸಿ ವಿಲೇವಾರಿಯನ್ನು ಮಾಡಲು ಸೂಚನೆಯನ್ನು ನೀಡಿದರು.

DBT ಹಣವು ಪ್ರತಿ ತಿಂಗಳ ಅಂತ್ಯದ ಒಳಗೆ ಫಲಾನುಭವಿಗಳ ಖಾತೆಗೆ ಸಂದಾಯವಾಗುವಂತೆ ಕ್ರಮವನ್ನು ತೆಗೆದುಕೊಳ್ಳುಬೇಕು. ಇಲಾಖೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಲು ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಸರ್ಕಾರದ ಕಾರ್ಯದರ್ಶಿ ರಮಣದೀಪ್ ಚೌದರಿ, ಆಯುಕತ್ತರಾದ ವಾಸಿ ರೆಡ್ಡಿ ವಿಜಯ ಜೋತ್ನ, ಆಹಾರ ನಿಗಮ ನಿರ್ದೇಶಕರಾದ ಚಂದ್ರಕಾಂತ್, ಕಾನೂನು ಮಾಪನ ಇಲಾಖೆಯ ನಿಯಂತ್ರಕರಾದ ಅನಿತಾ ಲಕ್ಷ್ಮೀ, ಆಹಾರ ಆಯೋಗದ ಕಾರ್ಯದರ್ಶಿ ಸುಜಾತ ಹೊಸಮನಿ, ಸಚಿವರ ಆಪ್ತ ಕಾರ್ಯದರ್ಶಿ ಡಾ.ಹೆಚ್ ನಟರಾಜ್, ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Toll Fee: ವಾಹನ ಸವಾರರಿಗೆ ಗುಡ್‌ ನ್ಯೂಸ್‌!

ಜುಲೈ 1 ರಿಂದ ಸ್ಮಾರ್ಟ್ ಟ್ರಾಫಿಕ್ ವ್ಯವಸ್ಥೆಗೆ ಭರ್ಜರಿ ಚಾಲನೆ!


Share

Leave a Reply

Your email address will not be published. Required fields are marked *