ಹಲೋ ಸ್ನೇಹಿತರೇ, ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಜವಾಹರ್ ನವೋದಯ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ 6 ರಿಂದ 2nd ಪಿಯುಸಿ ವರೆಗೆ ಉಚಿತ ಶಿಕ್ಷಣ ನೀಡಲು ನವೋದಯ ವಿದ್ಯಾಲಯ ಸಮಿತಿಯು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದ. ಅರ್ಜಿ ಸಲ್ಲಿಸುವುದು ಹೇಗೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ತಿಳಿಯಿರಿ.
ಜವಾಹರ್ ನವೋದಯ ವಿದ್ಯಾಲಯದಲ್ಲಿ 6ನೇ ತರಗತಿಗೆ ಪ್ರವೇಶಾತಿ ಪಡೆಯಲು ಪ್ರಸ್ತುತ 5ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ, ಆಯ್ಕೆಯಾದವರಿಗೆ 7 ವರ್ಷಗಳ ಕಾಲ ಉಚಿತ ವಸತಿ ಸಹಿತ ಶಿಕ್ಷಣ ಸಿಗಲಿದೆ.
ಗ್ರಾಮೀಣ ಪ್ರದೇಶದ ಪ್ರತಿಭಾವಂತ ಮಕ್ಕಳಿಗೆ ಉತ್ತಮ ಗುಣಮಟ್ಟದ ಮತ್ತು ಸಂಸ್ಕೃತಿ, ಮೌಲ್ಯಾಧಾರಿತ ಉಚಿತ ಊಟ ವಸತಿಯೊಂದಿಗೆ ಶಿಕ್ಷಣವನ್ನು ನೀಡುವ ಉದ್ದೇಶದಿಂದ 1986ರಲ್ಲಿ ಕೇಂದ್ರ ಸರ್ಕಾರದ ಈ ವಸತಿ ಶಾಲೆಗಳನ್ನು ಪ್ರಾರಂಭಿಸಲಾಗಿದೆ. ಆಯ್ಕೆಯಾದವರು ಈ ಶಾಲೆಗಳಲ್ಲಿ 6 ರಿಂದ 12ನೇ ತರಗತಿ ವರೆಗೂ ಉಚಿತ ಊಟ ವಸತಿಯುತ ಸೌಲಭ್ಯಗಳೊಂದಿಗೆ ವ್ಯಾಸಂಗವನ್ನು ಮುಂದುವರಿಸಬಹುದು.
ಭಾರತದ ಒಟ್ಟು 27 ರಾಜ್ಯಗಳು ಹಾಗೂ 8 ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರತಿ ಜಿಲ್ಲೆಯಲ್ಲಿಯೂ1 ಅಥವಾ ಒಂದಕ್ಕಿ೦ತ ಹೆಚ್ಚು ಈ ನವೋದಯ ಶಾಲೆಗಳಿವೆ. ಅಂದರೆ ದೇಶಾದ್ಯಂತ ಒಟ್ಟು 653 ನವೋದಯ ವಿದ್ಯಾಲಯಗಳಿವೆ.
Contents
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶೇ.75 ಸೀಟು ಮೀಸಲು
ಪ್ರತಿ ಜಿಲ್ಲೆಯ ಆಯಾ ನವೋದಯ ವಿದ್ಯಾಲಯಗಳಲ್ಲಿ ಶೇಕಡಾ 75ರಷ್ಟು ಸೀಟುಗಳನ್ನು ಗ್ರಾಮೀಣ ವಿದ್ಯಾರ್ಥಿಗಳಿಗೆ ಮೀಸಲಿಡಲಾಗುವುದು. ಇನ್ನುಳಿದ ಸೀಟುಗಳನ್ನು ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಲಾಗುತ್ತದೆ. ಈ ಮೀಸಲಾತಿಯನ್ನು ಪಡೆಯಲು ವಿದ್ಯಾರ್ಥಿಗಳು 3-4 ಹಾಗೂ 5ನೇ ತರಗತಿಯನ್ನು ಗ್ರಾಮೀಣ ಪ್ರದೇಶದಲ್ಲಿಯೇ ವ್ಯಾಸಂಗ ಮುಗಿಸಿರಬೇಕು.
ಅರ್ಹತೆಗಳು
ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು ಪ್ರಸ್ತುತ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು, ವಿದ್ಯಾರ್ಥಿಯು 01-05-2013ರಿಂದ 01-07-2015ರ ಅವಧಿಯಲ್ಲಿ ಜನಿಸಿದ್ದರೆ ಮಾತ್ರ ಅಪ್ಲೇ ಮಾಡಬಹುದಾಗಿದೆ.
ಅರ್ಜಿ ಸಲ್ಲಿಸುವ ಜಿಲ್ಲೆಯಲ್ಲಿಯೇ ಸರ್ಕಾರಿ ಮತ್ತು ಮಾನ್ಯತೆ ಪಡೆದ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿರಬೇಕು. ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು 2024-25ರ ಶೈಕ್ಷಣಿಕ ಸಾಲಿನಲ್ಲಿ 5ನೇ ಕ್ಲಾಸ್ ವ್ಯಾಸಂಗ ಮಾಡುತ್ತಿರಬೇಕು.
ಆಯ್ಕೆ ಹೇಗೆ?
ವಿದ್ಯಾರ್ಥಿಗಳು ಕನ್ನಡ ಭಾಷೆ ಹಾಗೂ ಇಂಗ್ಲಿಷ್ ಭಾಷೆ ಸೇರಿದಂತೆ ಆಯಾ ರಾಜ್ಯ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗುತ್ತದೆ.
ಪ್ರತಿ ಜಿಲ್ಲೆಯ ನವೋದಯ ವಿದ್ಯಾಲಯ ಶಾಲೆಗಳಿಗೆ 80 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಯು ಪರೀಕ್ಷೆಗಾಗಿ ಯಾವ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡಿರುತ್ತಾನೋ, ಆ ಜಿಲ್ಲೆಯ ವಿದ್ಯಾಲಯಕ್ಕೆ ಮಾತ್ರ ಪ್ರವೇಶಾತಿಗೆ ಪರಿಗಣಿಸಲಾಗುತ್ತದೆ.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ :16-09-2024
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಅಪ್ಲೇ ಡೈರೆಕ್ಟ ಲಿಂಕ್ : Apply Now
ಇತರೆ ವಿಷಯಗಳು
ಸಾರ್ವಜನಿಕರ ಜೇಬಿಗೆ ಮತ್ತೆ ಕತ್ತರಿ: ಪೆಟ್ರೋಲ್ ಬೆಲೆ ಏರಿಕೆ ಬೆನ್ನಲ್ಲೇ ನೀರು, ಬಸ್ ಪ್ರಯಾಣ ದರವೂ ಹೆಚ್ಚಳ
ಮನೆಯಲ್ಲಿ ಈ ಗ್ಯಾಸ್ ಬಳಸಿದ್ರೆ ದಂಡ! ಕಠಿಣ ಕ್ರಮ ಜಾರಿ