ಹಲೋ ಸ್ನೇಹಿತರೇ, ಈ ಪ್ರಸ್ತಾವನೆಯನ್ನು ಕಾರ್ಮಿಕ & ಉದ್ಯೋಗ ಸಚಿವಾಲಯ ಸಿದ್ಧಪಡಿಸಿದೆ. ಜುಲೈ 23 ರಂದು ಅಂದರೆ ಬಜೆಟ್ ದಿನದಂದು ಈ ವಿಷಯದ ಬಗ್ಗೆ ಘೋಷಣೆ ಹೊರ ಬೀಳಬಹುದು ಎನ್ನಲಾಗಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ನಮ್ಮ ಲೇಖನವನ್ನು ಓದಿ.
ಬೆಂಗಳೂರು: ಕೇಂದ್ರ ಸರ್ಕಾರ ಈ ವರ್ಷದ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲು ಸಿದ್ಧತೆ ನಡೆಸಿದೆ. ಹೊಸ ಬಜೆಟ್‌ನಲ್ಲಿ ಹಲವು ಘೋಷಣೆಗಳು ಹೊರಬೀಳಬಹುದು. ಈ ಬಜೆಟ್‌ನಲ್ಲಿ ಕೇಂದ್ರ ನೌಕರರಿಗೆ ಉತ್ತಮ ಸುದ್ದಿ ಸಿಗಬಹುದು. ನೌಕರರ ಭವಿಷ್ಯ ನಿಧಿಗೆ ಕೊಡುಗೆ ನೀಡಲು ಕೇಂದ್ರ ಸರ್ಕಾರವು ಕನಿಷ್ಠ ಮೂಲ ವೇತನವನ್ನು ಹೆಚ್ಚಿಸಬಹುದು ಎಂಬ ಭರವಸೆ ಇದೆ.
ಕನಿಷ್ಠ ಮೂಲ ವೇತನದಲ್ಲಿ ಹೆಚ್ಚಳ :
ಪ್ರಸ್ತುತ ಕನಿಷ್ಠ ಮೂಲ ವೇತನ 15000 ರೂಪಾಯಿಗಳು. ಆದರೆ,ಇದನ್ನು 25,000 ರೂಪಾಯಿಗಳಿಗೆ ಹೆಚ್ಚಿಸಬಹುದು ಎಂದು ಹೇಳಲಾಗುತ್ತಿದೆ. ಈ ಪ್ರಸ್ತಾವನೆಯನ್ನು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಸಿದ್ಧಪಡಿಸಿದೆ. ಜುಲೈ 23 ರಂದು ಅಂದರೆ ಬಜೆಟ್ ದಿನದಂದು ಈ ಸಂಬಂಧ ಘೋಷಣೆ ಹೊರ ಬೀಳಬಹುದು ಎನ್ನಲಾಗಿದೆ.
ಸಂಶೋಧನಾ ತಯಾರಿ :
ಸಚಿವಾಲಯವು 10 ವರ್ಷಗಳ ನಂತರ ಈ ಸಂಶೋಧನೆಯನ್ನು ನಡೆಸುತ್ತಿದೆ. ಉದ್ಯೋಗಿಗಳ ಸಾಮಾಜಿಕ ಭದ್ರತೆಯನ್ನು ಹೆಚ್ಚಿಸಲು ಈ ತಿದ್ದುಪಡಿಯನ್ನು ಮಾಡಲಾಗುತ್ತಿದೆ. ಈ ಮೊದಲು, ಕನಿಷ್ಠ ಮೂಲ ವೇತನವನ್ನು 10 ವರ್ಷಗಳ ಹಿಂದೆ ಅಂದರೆ 1 ಸೆಪ್ಟೆಂಬರ್ 2014 ರಂದು ಹೆಚ್ಚಿಸಲಾಯಿತು. ಇದಾದ ಬಳಿಕ ಕನಿಷ್ಠ ವೇತನದ ಮಿತಿಯನ್ನು 6500 ರೂಪಾಯಿಗಳಿಂದ 15000 ರೂಪಾಯಿಗಳಿಗೆ ಹೆಚ್ಚಿಸಲಾಯಿತು.
ಕೇಂದ್ರ ನೌಕರರ ಭವಿಷ್ಯ ನಿಧಿಯಲ್ಲಿ ಕನಿಷ್ಠ ವೇತನದ ಮಿತಿ ಪ್ರಸ್ತುತ 15,000 ರೂ.ಆಗಿದೆ. ಆದರೆ, ನೌಕರರ ರಾಜ್ಯ ವಿಮಾ ನಿಗಮವು 2017ನೇ ವರ್ಷದಿಂದಲೇ ಕನಿಷ್ಠ ಮಿತಿಯನ್ನು 21 ಸಾವಿರ ರೂ.ಗೆ ಹೆಚ್ಚಿಸಿದೆ.
ಉದ್ಯೋಗಿ & ಉದ್ಯೋಗದಾತ ಇಬ್ಬರೂ EPF ಖಾತೆಯಲ್ಲಿ ಪಡೆದ ಮೂಲ ವೇತನ & ತುಟ್ಟಿಭತ್ಯೆಗೆ ತಲಾ 12 ಪ್ರತಿಶತವನ್ನು ಕೊಡುಗೆ ನೀಡುತ್ತಾರೆ. ಇದರಲ್ಲಿ ಉದ್ಯೋಗಿಗಳ ಸಂಪೂರ್ಣ ಕೊಡುಗೆಯನ್ನು ಇಪಿಎಫ್‌ಒ ಖಾತೆಯಲ್ಲಿ ಠೇವಣಿ ಮಾಡಲಾಗುತ್ತದೆ. ಆದರೆ ಉದ್ಯೋಗದಾತರ ಕೊಡುಗೆಯ 8.33 ಪ್ರತಿಶತವನ್ನು ಉದ್ಯೋಗಿ ಪಿಂಚಣಿ ಯೋಜನೆಯಲ್ಲಿ ಠೇವಣಿ ಮಾಡಲಾಗುತ್ತದೆ. ಉಳಿದ 3.67 ಪ್ರತಿಶತವನ್ನು ಪಿಎಫ್ ಖಾತೆಯಲ್ಲಿ ಠೇವಣಿ ಮಾಡಲಾಗುತ್ತದೆ.
ಇತರೆ ವಿಷಯಗಳು
ಗೃಹಲಕ್ಷ್ಮಿ 11 & 12ನೇ ಕಂತಿನ ಹಣ ಖಾತೆಗೆ ಬಂದಿಲ್ವಾ? ಈ ಕೆಲಸ ಮಾಡಿ 4,000 ಒಟ್ಟಿಗೆ ಬರುತ್ತೆ
ಇಂದಿರಾ ಕ್ಯಾಂಟೀನ್ ನಲ್ಲಿ ಆಹಾರ ಸೇವೆಗಳು ಸ್ಥಗಿತ..!