ಹಲೋ ಸ್ನೇಹಿತರೇ, ನಮ್ಮ ರಾಜ್ಯ ಸರ್ಕಾರ ಬಡವರ ಪರವಾಗಿ ಮತ್ತು ರೈತರ ಪರವಾಗಿ ಇರುವ ಸರ್ಕಾರ ಎಂದು ಹೇಳಿದರೆ ತಪ್ಪಲ್ಲ. ಹೌದು, ರಾಜ್ಯ ಸರ್ಕಾರವು 5 ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತರುವುದರ ಜೊತೆಗೆ ರೈತರಿಗೆ ಅನುಕೂಲ ಅಗುವಂಥ ಇನ್ನಷ್ಟು ಯೋಜನೆಗಳನ್ನು ಕೂಡ ಜಾರಿಗೆ ತಂದಿದೆ.
ಹೌದು, ಇದೀಗ ರಾಜ್ಯ ಸರ್ಕಾರವು ರೈತರನ್ನು ಪ್ರೋತ್ಸಾಹಿಸುವ ಸಲುವಾಗಿ ಮತ್ತೊಂದು ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು, ಆ ಯೋಜನೆ ಯಾವುದು? ಅದರಿಂದ ಏನೆಲ್ಲಾ ಉಪಯೋಗವಿದೆ ಎಂದು ತಿಳಿಯೋಣ. ರಾಜ್ಯ ಸರ್ಕಾರವು ನಮ್ಮ ರಾಜ್ಯದ ರೈತರು ಆರ್ಥಿಕವಾಗಿ ಸಬಲರಾಗಿರಬೇಕು, ಅವರಿಗೆ ಯಾವುದೇ ಕಷ್ಟ ಬರಬಾರದು ಎಂದು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ, ರೈತರು ಕೂಡ ಆ ಯೋಜನೆಗಳ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ.
ಅದರ ಜೊತೆಗೆ ಇದೀಗ ರಾಜ್ಯ ಸರ್ಕಾರವು ರೈತ ಮಹಿಳೆಯರಿಗೆ ಅನುಕೂಲ ಆಗುವ ಹಾಗೆ, ಅವರು ಹಣ ಸಂಪಾದನೆ ಮಾಡುವುದನ್ನು ಪ್ರೋತ್ಸಾಹಿಸಲು ಹೊಸದೊಂದು ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಹೌದು, ಈ ಯೋಜನೆಯ ಮೂಲಕ ರೈತ ಮಹಿಳೆಯರು ಉತ್ತಮವಾಗಿ ಹಣಗಳಿಸಬಹುದು.
ಇದು ರೈತ ಮಹಿಳೆಯರು ಕೃಷಿ ಚಟುವಟಿಕೆಗಳ ಜೊತೆಗೆ ಹೈನುಗಾರಿಕೆ ಶುರು ಮಾಡಲಿ ಎನ್ನುವುದಕ್ಕಾಗಿ ಪ್ರೋತ್ಸಾಹ ಕೊಡಲು ಜಾರಿಗೆ ತಂದಿರುವ ಯೋಜನೆ ಆಗಿದೆ. ಈ ಒಂದು ಯೋಜನೆಯ ಮೂಲಕ ಮಹಿಳೆಯರಿಗೆ ಬಡ್ಡಿ ಸಹಾಯಧನ ಸಿಗಲಿದ್ದು, ಹೈನುಗಾರಿಕೆಯಲ್ಲಿ ಆಸಕ್ತಿ ಇರುವ ಮಹಿಳೆಯರು ಈ ಯೋಜನೆಯ ಸದುಪಯೋಗಪಡಿಸಿಕೊಳ್ಳಬಹುದು. ಹಾಗಿದ್ದಲ್ಲಿ ಇದರಿಂದ ಏನೆಲ್ಲಾ ಉಪಯೋಗ ಸಿಗುತ್ತದೆ? ಇದೆಲ್ಲದರ ಬಗ್ಗೆ ಪೂರ್ತಿಯಾಗಿ ತಿಳಿದುಕೊಳ್ಳೋಣ..
ಇದನ್ನೂ ಸಹ ಓದಿ : ಹಿರಿಯ ನಾಗರಿಕರು ಪ್ರತಿ ತಿಂಗಳು ಪಡೆಯಬಹುದು ₹20,000! ಮನೆಯಲ್ಲಿ ಕುಳಿತು ಅಪ್ಲೇ ಮಾಡಿ
Contents
ಮಹಿಳೆಯರಿಗೆ ಕಡಿಮೆ ಬಡ್ಡಿಯಲ್ಲಿ ಸಾಲ:
ರಾಜ್ಯ ಸರ್ಕಾರವು ಈ ವರ್ಷದ ಅಂದರೆ 2024-25ನೇ ಸಾಲಿನ ಬಜೆಟ್ ಮಂಡನೆ ಮಾಡುವ ವೇಳೆ ಕೃಷಿ ಕೆಲಸ ಮಾಡುವ ರೈತ ಮಹಿಳೆಯರಿಗೆ ಹೈನುಗಾರಿಕೆ ಪ್ರೋತ್ಸಾಹ ಮಾಡುವ ಸಲುವಾಗಿ, ಅವರಿಗೆ ಹಸು ಮತ್ತು ಎಮ್ಮೆ ಖರೀದಿ ಮಾಡಲು ಸರ್ಕಾರದಿಂದ ಕಡಿಮೆ ಬಡ್ಡಿಗೆ ಸಾಲ ಕೊಡುವುದಾಗಿ ನಿರ್ಧಾರ ಕೈಗೊಂಡಿತ್ತು.
ಅದೇ ಯೋಜನೆಯ ಅಡಿಯಲ್ಲಿ ಮಹಿಳೆಯರು ಹಸು, ಎಮ್ಮೆ ಖರೀದಿ ಮಾಡಲು, ಸರಿಯಾಗಿ ಸಾಲ ಮರುಪಾವತಿ ಮಾಡುವ ಮಹಿಳೆಯರಿಗೆ 6% ಬಡ್ಡಿದರಕ್ಕೆ ಸಾಲ ಸೌಲಭ್ಯ ನೀಡಲಾಗುತ್ತದೆ. ಇದೀಗ ಈ ಕಾರ್ಯಕ್ರಮಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ.
ತಾಲೂಕುವಾರು ಮಟ್ಟದಲ್ಲಿ ಮಹಿಳೆಯರಿಗೆ ಈ ಒಂದು ಸಾಲ ಸೌಲಭ್ಯ ಪಡೆಯುವ ಅವಕಾಶ ಇದೆ. ಯಾವೆಲ್ಲಾ ಮಹಿಳೆಯರಿಗೆ ಹೈನುಗಾರಿಕೆಯಲ್ಲಿ ಆಸಕ್ತಿ ಇದೆಯೋ ಅವರುಗಳು ತಮ್ಮ ಹತ್ತಿರದ ಹಳ್ಳಿಯ ಸರ್ಕಾರಿ ಪಶುವೈದ್ಯರ ಆಸ್ಪತ್ರೆಗೆ ಭೇಟಿ ನೀಡಿ, ಅವರಿಂದ ಈ ಯೋಜನೆಯ ಬಗ್ಗೆ ಪೂರ್ತಿಯಾಗಿ ಮಾಹಿತಿ ಪಡೆದು, ಅರ್ಜಿ ಸಲ್ಲಿಸಬಹುದು.
ಈ ರೀತಿಯಾಗಿ ಸರ್ಕಾರದಿಂದ ಸಿಗುವಂಥ ಲಾಭ ಪಡೆಯಬಹುದು. ಇನ್ನೇಕೆ ತಡ ಸ್ವಂತ ಉದ್ಯಮ ಶುರು ಮಾಡಲು ಬಯಸುವ ಮಹಿಳೆಯರು ಈ ಯೋಜನೆಯ ಸೌಲಭ್ಯ ಪಡೆದುಕೊಳ್ಳಿ.
ಇತರೆ ವಿಷಯಗಳು:
ʻಆಯುಷ್ಮಾನ್ ಕಾರ್ಡ್ʼ ಫಲಾನುಭವಿಗಳ ಹೊಸ ಲಿಸ್ಟ್ ಬಿಡುಗಡೆ! ನಿಮ್ಮ ಹೆಸರಿದ್ಯಾ ಚೆಕ್ ಮಾಡಿ
1 ರಿಂದ 15 ವರ್ಷದ ಮಕ್ಕಳ ʻಆಧಾರ್ ಕಾರ್ಡ್ʼ ಮಾಡಿಸಲು ಹೊಸ ನಿಯಮ ಜಾರಿ!
60 ವರ್ಷ ಮೇಲ್ಪಟ್ಟ ಕಾರ್ಮಿಕರಿಗೆ ಮಾಸಿಕ ಪಿಂಚಣಿ ಸೌಲಭ್ಯ! ಕೂಡಲೇ ನೋಂದಣಿ ಮಾಡಿ