rtgh
Headlines

ಮಹಿಳೆಯರಿಗೆ ಕೇಂದ್ರದ ಹೊಸ ಸ್ಕೀಮ್! ಈ ಯೋಜನೆಯಡಿ ಸಿಗಲಿದೆ 60 ಸಾವಿರ ರೂ.

krishi sakhi yojana
Share

ಹಲೋ ಸ್ನೇಹಿತರೇ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎರಡು ಕೂಡ ಕೃಷಿಗೆ ಸಂಬಂಧಿಸಿದ ಹಾಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಲಿದ್ದು, ಈ ಯೋಜನೆಗಳ ಮೂಲಕ ಜನರಿಗೆ ಉದ್ಯೋಗದ ಅವಕಾಶವನ್ನು ಸಹ ನೀಡಲು ಮುಂದಾಗಿದೆ. ಇದೀಗ ಕೃಷಿ ಕ್ಷೇತ್ರದಲ್ಲಿ ಮಹಿಳೆಯರಿಗೆ ಅನುಕೂಲ ಆಗಲಿ ಎನ್ನುವ ಕಾರಣಕ್ಕಾಗಿ ಇದೀಗ ಮಹಿಳೆಯರಿಗೆ ಹೊಸ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಿದ್ದೇವೆ.

krishi sakhi yojana

ಕೃಷಿ ಕ್ಷೇತ್ರದಲ್ಲಿ ಮಾಡಲು ಸಾಕಷ್ಟು ಕೆಲಸಗಳಿಗೆ, ಮಹಿಳೆಯರಿಗೆ ಅವುಗಳ ಬಗ್ಗೆ ತರಬೇತಿ ನೀಡಿ, ಕೆಲಸ ಕಲ್ಪಿಸಿದರೆ ಅವರಿಗೂ ಜೀವನ ರೂಪಿಸಿಕೊಳ್ಳುವುದಕ್ಕೆ ಸಹಾಯ ಆಗುತ್ತದೆ. ಆ ಕಾರಣಕ್ಕೆ ಇದೀಗ ಕೇಂದ್ರ ಸರ್ಕಾರವು ಮಹಿಳೆಯರಿಗೆ ಉದ್ಯೋಗ ಕಲ್ಪಿಸಿಕೊಡುವ ಸಲುವಾಗಿ ಹೊಸ ಯೋಜನೆ ಒಂದನ್ನು ಜಾರಿಗೆ ತಂದಿದ್ದು, ಈ ಯೋಜನೆಯ ಮೂಲಕ ಹೊಸ ಕೆಲಸ ಕೂಡ ಸಿಗುವ ಹಾಗೆ ಮಾಡಲಾಗುತ್ತದೆ. ಈ ಯೋಜನೆಯ ಹೆಸರು ಸಖಿ ಯೋಜನೆ ಆಗಿದೆ.

ಸಖಿ ಯೋಜನೆಯನ್ನು ಲಕ್ಪತಿ ದೀದಿ ಯೋಜನೆಯ ಅಡಿಯಲ್ಲಿ ಜಾರಿಗೆ ತರಲಾಗಿದೆ. ಮಹಿಳೆಯರು ಆರ್ಥಿಕವಾಗಿ ಸಬಲವಾಗಿರಲಿ ಎಂದು ಅವರಿಗೆ ಆದಾಯ ಕಲ್ಪಿಸಿಕೊಡುವ ಉದ್ದೇಶದಿಂದ ಈ ಒಂದು ಯೋಜನೆಯನ್ನು ಜಾರಿಗೆ ತರಲಾಗಿದೆ. ಸಖಿ ಯೋಜನೆಯ ಮೂಲಕ ಮಹಿಳೆಯರಿಗೆ ಮಹಿಳೆಯರಿಗೆ ಕೌಶಲ್ಯ ತರಬೇತಿ ನೀಡಿ, ಕೃಷಿ ಸಖಿ ಪ್ರಮಾಣಪತ್ರವನ್ನು ಸಹ ನೀಡಲಾಗುತ್ತದೆ. ಇದರಿಂದ ಮಹಿಳೆಯರಿಗೆ ಹೆಚ್ಚಿನ ಅನುಕೂಲ ಆಗಲಿದೆ.

ಇದನ್ನೂ ಸಹ ಓದಿ : ರೈತರಿಗೆ ಭರ್ಜರಿ ಗುಡ್ ನ್ಯೂಸ್: ಧಾನ್ಯಗಳ ಬೆಂಬಲ ಬೆಲೆ ಏರಿಕೆ!

ಸಖಿ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಏನೆಲ್ಲಾ ತರಬೇತಿಗಳನ್ನು ಕೊಡಲಾಗುತ್ತದೆ:

  • ಕೃಷಿ ಕೆಲಸಗಳಿಗಾಗಿ ಭೂಮಿಯನ್ನು ತಯಾರಿ ಮಾಡುವುದು,
  • ಬೇರೆ ಕೃಷಿ ಚಟುವಟಿಕೆಗಳನ್ನು ಕಲಿಸುವುದು,
  • ಕೊಯ್ಲು ಮಾಡುವುದು ಹಾಗೂ ಇನ್ನಿತರ ಕೆಲಸಗಳನ್ನು ಮಹಿಳೆಯರಿಗೆ ಕಲಿಸಲಾಗುತ್ತದೆ.
  • ಈ ಯೋಜನೆಯ ಮುಖ್ಯ ಉದ್ದೇಶವೇ ರೈತರಿಗೆ ಕೃಷಿಯಲ್ಲಿ ಪರಿಣಿತಿ ನೀಡುವುದಾಗಿದೆ.

ಹಳ್ಳಿಯ ಮಹಿಳೆಯರು ಈ ಕೆಲಸಗಳನ್ನು ಕಲಿತು, ಪರಿಣಿತಿ ಹೊಂದಿದರೆ ಅವರುಗಳ ಮನೆಯಲ್ಲಿ ಆದಾಯ ಹೆಚ್ಚಾಗುತ್ತದೆ. ರೈತರ ಆದಾಯ ಹೆಚ್ಚಿಸುವುದು ಈ ಯೋಜನೆಯ ಮುಖ್ಯ ಉದ್ದೇಶ ಆಗಿದೆ.

ಮಹಿಳೆಯ ಆದಾಯ ಹೆಚ್ಚಾದರೆ ಅದು ಕುಟುಂಬಕ್ಕೆ ಸಹಾಯ ಮಾಡುತ್ತದೆ. ಕೃಷಿ ಕೆಲಸ ಮಾಡುವ ಮಹಿಳೆಯರಿಗೆ ಈ ಮೂಲಕ ವಾರ್ಷಿಕವಾಗಿ 60 ರಿಂದ 80 ಸಾವಿರ ರೂಪಾಯಿಗಳ ಆದಾಯ ಬರುವುದಕ್ಕೆ ಶುರುವಾಗುತ್ತದೆ. ಈ ಮೂಲಕ ಮಹಿಳೆಯರು ತಮ್ಮ ಕುಟುಂಬಗಳನ್ನು ನೋಡಿಕೊಳ್ಳಬಹುದು.

ಇತರೆ ವಿಷಯಗಳು:

ಮಹಿಳೆಯರಿಗೆ ಖುಷಿ ಸುದ್ದಿ! ಕೇಂದ್ರದಿಂದ ಉಚಿತವಾಗಿ ಸಿಗುತ್ತೆ ಹೊಲಿಗೆ ಮಿಷನ್

ಮದ್ಯ ಪ್ರಿಯರಿಗೆ ಸಿಹಿ ಸುದ್ದಿ: ಜುಲೈ 1 ರಿಂದ ಎಣ್ಣೆ ಬೆಲೆ ಇಳಿಕೆ!

ಗ್ರಾಹಕರಿಗೆ ಶಾಕ್‌ ! ಸಾಲಗಳ ಮೇಲಿನ ಬಡ್ಡಿ ಹೆಚ್ಚಳ


Share

Leave a Reply

Your email address will not be published. Required fields are marked *