rtgh
Headlines

ಕಡಿಮೆ ಭೂಮಿ ಹೊಂದಿರುವ ರೈತರಿಗೆ ಸಿಹಿ ಸುದ್ದಿ!‌ 1 ಎಕರೆಗೆ ಸರ್ಕಾರ ಕೊಡ್ತಿದೆ 5 ಸಾವಿರ

Krishi Ashirwad Yojana
Share

ಹಲೋ ಸ್ನೇಹಿತರೇ, ಅನ್ನದಾತರಿಗೆ ಯಾವುದೇ ತೊಂದರೆಯಾಗಬಾರದು ಅಂತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗಾಗಿ ವಿವಿಧ ಯೋಜನೆಗಳನ್ನು ನಡೆಸುತ್ತಿವೆ. ರೈತರನ್ನು ಆರ್ಥಿಕವಾಗಿ ಸದೃಢರನ್ನಾಗಿಸುವುದು ಈ ಯೋಜನೆಗಳ ಉದ್ದೇಶವಾಗಿದೆ. ಪ್ರಧಾನ ಮಂತ್ರಿ ಕಿಸಾನ್ ನಿಧಿ ಯೋಜನೆಯನ್ನು ಕೇಂದ್ರ ಸರ್ಕಾರ ರೈತರಿಗಾಗಿ ಜಾರಿಗೆ ತಂದಿದೆ.

Krishi Ashirwad Yojana

Contents

ಕೃಷಿ ಆಶೀರ್ವಾದ ಯೋಜನೆ:

ಕೃಷಿ ಆಶೀರ್ವಾದ ಯೋಜನೆಯು ರಾಜ್ಯ ಸರ್ಕಾರ ನಡೆಸುತ್ತಿರುವ ಯೋಜನೆಯಾಗಿದ್ದು, ಈ ಯೋಜನೆಯ ಮೂಲಕ 5 ಎಕರೆ ಅಥವಾ ಅದಕ್ಕಿಂತ ಕಡಿಮೆ ಕೃಷಿ ಭೂಮಿ ಹೊಂದಿರುವ ರೈತರಿಗೆ ಪ್ರತಿ ಎಕರೆಗೆ 5000 ರೂಪಾಯಿಗಳ ಆರ್ಥಿಕವಾಗಿ ನೆರವನ್ನು ಒದಗಿಸಲಾಗುತ್ತದೆ. ಖಾರಿಫ್ ಹಂಗಾಮಿನ ಕೃಷಿಗೆ ಮೊದಲು ಈ ಹಣವನ್ನು ರೈತರ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ಕೃಷಿ ಆಶೀರ್ವಾದ ಯೋಜನೆಯಡಿ 5 ಎಕರೆ ಜಮೀನು ಹೊಂದಿರುವ ರೈತರು ಗರಿಷ್ಠ 25,000 ರೂ. ಪಡೆಯಬಹುದು. ರಾಜ್ಯದಲ್ಲಿ ಪಿಎಂ ಕಿಸಾನ್ ನಿಧಿಯ ಲಾಭ ಪಡೆಯುವ ರೈತರಿಗೆ ಕನಿಷ್ಠ 11,000 ರೂ. ಮತ್ತು ಗರಿಷ್ಠ 31,000 ರೂ. ಲಭ್ಯವಾಗುತ್ತದೆ.

ಇದನ್ನೂ ಸಹ ಓದಿ : ಮುಂದಿನ 2 ದಿನ ಈ ಬ್ಯಾಂಕ್‌ ಗಳಲ್ಲಿ ಮೊಬೈಲ್ ಬ್ಯಾಂಕಿಂಗ್ ಸೇವೆ ಸ್ಥಗಿತ..!

ಈ ಯೋಜನೆಗೆ ಸಂಬಂಧಿಸಿ ಕೆಲ ಷರತ್ತುಗಳಿದ್ದು, ಸಣ್ಣ ಮತ್ತು ಅತಿ ಸಣ್ಣ ರೈತರು ಮಾತ್ರ ಕೃಷಿ ಆಶೀರ್ವಾದ್ ಯೋಜನೆಯ ಲಾಭ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ. 5 ಎಕರೆ ಅಥವಾ ಅದಕ್ಕಿಂತ ಕಡಿಮೆ ಭೂಮಿಯನ್ನು ಸಾಗುವಳಿ ಮಾಡುವ ರೈತರಿಗೆ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ. 22 ಲಕ್ಷ 47 ಸಾವಿರ ರೈತರಿಗೆ ಸರ್ಕಾರದ ಈ ಯೋಜನೆಯ ಲಾಭವನ್ನು ಒದಗಿಸಲಾಗುತ್ತದೆ.

ಈ ಯೋಜನೆಗೆ ಅರ್ಹರಾದ ರೈತರು ಹಂಗಾಮಿನ ಕಟಾವಿಗೆ ಮೊದಲೇ ಸರ್ಕಾರದಿಂದ 5000 ರೂ. ಪಡೆಯಬಹುದಾಗಿದ್ದು, ಪಿಎಂ ಕಿಸಾನ್ ಅಡಿಯಲ್ಲಿ ಈಗಾಗಲೇ ವಾರ್ಷಿಕ 6000 ರೂ.ಗಳ ಅನುಕೂಲವನ್ನು ಪಡೆಯುತ್ತಿದ್ದಾರೆ. ಈ ಮೂಲಕ ವರ್ಷದಲ್ಲಿ ಒಟ್ಟು 11,000 ರೂ. ಪಡೆದಂತಾಗುತ್ತದೆ. ಅದರಂತೇ, ರಾಜ್ಯ ಸರ್ಕಾರದಿಂದ 5 ಎಕರೆ ಕೃಷಿ ಭೂಮಿ ಹೊಂದಿರುವ ರೈತನ ಖಾತೆಗೆ 25 ಸಾವಿರ ರೂ. ಲಭ್ಯವಾದರೆ, ಕೇಂದ್ರ ಸರ್ಕಾರದಿಂದ ಆರು ಸಾವಿರ ದೊರೆಯಲಿದ್ದು, ಹೀಗೆ ಒಟ್ಟು 31 ಸಾವಿರ ರೂ. ರೈತರ ಕೈ ಸೇರಲಿದೆ.

ಇತರೆ ವಿಷಯಗಳು:

ರೈತರ ಜಮೀನಿನಲ್ಲಿ ನೀರಾವರಿ ವ್ಯವಸ್ಥೆಗೆ 1.5 ಲಕ್ಷ ಸಹಾಯಧನ!

ಮುಂಗಾರು ಬೆಳೆಗೆ ವಿಮೆ ರಕ್ಷೆ: ಈ ಬೆಳೆ ಬೆಳೆದಿದ್ದರೆ ನಿಮಗೂ ಸಿಗುತ್ತೇ ನೋಡಿ ದುಡ್ಡು

ರಾಜ್ಯಾದ್ಯಂತ ಈ ಉದ್ಯೋಗಿಗಳಿಗೆ ಸ್ಯಾಮ್ಸಂಗ್ ಮೊಬೈಲ್ ವಿತರಣೆ!


Share

Leave a Reply

Your email address will not be published. Required fields are marked *