ಹಲೋ ಸ್ನೇಹಿತರೇ, ಕರ್ನಾಟಕ ಲೋಕಸೇವಾ ಆಯೋಗವು 384 KAS ಹುದ್ದೆಗೆ ಅಧಿಸೂಚಿಸಿದೆ. ಶೀಘ್ರದಲ್ಲೇ ನೋಟಿಫಿಕೇಶನ್ ಬಿಡುಗಡೆ ಮಾಡಿ ಅರ್ಜಿ ಆಹ್ವಾನಿಸಲಾಗುವುದು. ಆದ್ದರಿಂದ ಹುದ್ದೆಗೆ ಅರ್ಹತೆ, ವೇತನ ಶ್ರೇಣಿ, ವಯಸ್ಸಿನ ಅರ್ಹತೆ, ಪರೀಕ್ಷೆ ಮಾದರಿ ಎಲ್ಲವನ್ನು ತಿಳಿಯಲು ಈ ಲೇಖನವನ್ನು ಓದಿ.
384 ಕರ್ನಾಟಕ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ಸಧ್ಯದಲ್ಲೆ ಅಧಿಸೂಚನೆ ಹೊರಬೀಳಲಿದೆ. ರಾಜ್ಯ ಸರ್ಕಾರದ ಗ್ರೂಪ್ A, ಗ್ರೂಪ್ B ಹುದ್ದೆಗಳಿಗೆ – ಉನ್ನತ ಹುದ್ದೆಗಳಿಗೆ ಸೇರಬೇಕು ಮತ್ತು ಸರ್ಕಾರಿ ಸೇವೆ ಮಾಡಬೇಕು, ಸರ್ಕಾರಿ ಸಂಬಳ ಪಡೆಯಬೇಕು ಎಂದು ಕನಸು ಕಟ್ಟಿಕೊಂಡ ಅಭ್ಯರ್ಥಿಗಳು ಈ ಲೇಖನ ತಪ್ಪದೇ ಓದಿ.
Contents
- 1 KAS ಅಥವಾ ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆ ಏಕೆ?
- 2 KAS ಹುದ್ದೆಗೆ 3 ಹಂತದ ಪರೀಕ್ಷೆಗಳು
- 3 KAS ಪೂರ್ವಭಾವಿ ಪರೀಕ್ಷೆ ಮಾದರಿ
- 4 KAS ಪ್ರಿಲಿಮ್ಸ್ ಪರೀಕ್ಷೆಯ ಪಠ್ಯಕ್ರಮ ಏನಿರುತ್ತದೆ?
- 5 ಪ್ರಿಲಿಮ್ಸ್‌ನಲ್ಲಿ ನೆಗೆಟಿವ್ ಅಂಕಗಳು
- 6 KAS ಮುಖ್ಯ ಪರೀಕ್ಷೆ ಮಾದರಿ
- 7 KAS ಮುಖ್ಯ ಪರೀಕ್ಷೆ ಪತ್ರಿಕೆಗಳು & ಅಂಕಗಳ ವಿವರ
- 8 KAS ಪರೀಕ್ಷೆ ಬರೆಯಲು ವರ್ಗಾವಾರು ವಯಸ್ಸಿನ ಅರ್ಹತೆಗಳು
- 9 ವರ್ಗಾವಾರು ಮೀಸಲಾತಿ / KAS ಪರೀಕ್ಷೆ ಪ್ರಯತ್ನಗಳು
- 10 KAS ಗೆಜೆಟೆಡ್ ಪ್ರೊಬೇಷನರಿ ವೇತನ ವಿವರ
- 11 ಇತರೆ ವಿಷಯಗಳು
- 12 FAQ
KAS ಅಥವಾ ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆ ಏಕೆ?
KPSC ಅಥವಾ ಕರ್ನಾಟಕ ಲೋಕಸೇವಾ ಆಯೋಗವು ಸರ್ಕಾರದ ಇಲಾಖೆಗಳು, ಸಚಿವಾಲಯಗಳಿಗೆ, ನಿಗಮ / ಮಂಡಳಿಗಳಿಗೆ ಗ್ರೂಪ್ A ಹಾಗೂ ಗ್ರೂಪ್ B ಸರ್ಕಾರಿ ಹುದ್ದೆಗಳನ್ನು ನೇಮಕ ಮಾಡಲು KAS ಪರೀಕ್ಷೆ ನಡೆಯಲಿದೆ. ಯಾವುದೇ ಪದವಿ / ತತ್ಸಮಾನ ವಿದ್ಯಾರ್ಹತೆ ಉಳ್ಳವರು ಈ ಪರೀಕ್ಷೆ ಬರೆಯಬಹುದಾಗಿದೆ. KAS ಪರೀಕ್ಷೆಗೆ ಏನೇನು ಓದಬೇಕು, KAS ಪರೀಕ್ಷೆಯ 3 ಹಂತದ ಪರೀಕ್ಷೆಗಳ ವಿವರಗಳು
KAS ಹುದ್ದೆಗೆ 3 ಹಂತದ ಪರೀಕ್ಷೆಗಳು
ಕರ್ನಾಟಕ ಲೋಕಸೇವಾ ಆಯೋಗವು KAS / ಗೆಜೆಟೆಡ್ ಪ್ರೊಬೇಷನರ್ ಪೋಸ್ಟ್‌ಗಳಿಗೆ ಈ ಕೆಳಗಿನ 3 ಹಂತದ ಪರೀಕ್ಷೆ ಇರಲಿದೆ.
ಪೂರ್ವಭಾವಿ ಪರೀಕ್ಷೆ : 2 ಪತ್ರಿಕೆಗಳಿದ್ದು, 400 ಅಂಕ
ಮುಖ್ಯ ಪರೀಕ್ಷೆ: 2 ಕಡ್ಡಾಯ ಪತ್ರಿಕೆಗಳು, 5 ಐಚ್ಛಿಕ ಪತ್ರಿಕೆಗಳು.
ವ್ಯಕ್ತಿತ್ವ ಪರೀಕ್ಷೆ : 50 ಅಂಕ
KAS ಪೂರ್ವಭಾವಿ ಪರೀಕ್ಷೆ ಮಾದರಿ
ಕರ್ನಾಟಕ ಆಡಳಿತ ಸೇವೆಗೆ ಪೂರ್ವಭಾವಿ 2 ಕಡ್ಡಾಯ ಪ್ರಶ್ನೆ ಪತ್ರಿಕೆಗಳನ್ನು ಹೊಂದಿದೆ.
2 ಪತ್ರಿಕೆ : ಸಾಮಾನ್ಯ ಅಧ್ಯಯನ
2 ಸಹ ಸಾಮಾನ್ಯ ಅಧ್ಯಯನ ಪತ್ರಿಕೆಗಳಾಗಿದ್ದು ಪಠ್ಯಕ್ರಮ ಬೇರೆ ಬೇರೆ ಇರಲಿದೆ.
200 ಅಂಕಗಳು. 100 ಪ್ರಶ್ನೆಗಳು, ಪ್ರತಿ ಪ್ರಶ್ನೆಗೆ 2 ಅಂಕ.
ಪ್ರತಿ ಪತ್ರಿಕೆಗೂ 2 ಗಂಟೆ. 2 ಪರೀಕ್ಷೆಗಳ ಪರೀಕ್ಷೆ ಒಂದೇ ದಿನ.
ಪೂರ್ವಭಾವಿ ಪರೀಕ್ಷೆಯಲ್ಲಿ ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಳೆಯಲಾಗುವುದು. ಪತ್ರಿಕೆ-2 ವಸ್ತು ನಿಷ್ಠ ಮಾದರಿಯದ್ದಾಗಿರುವುದು.
KAS ಪ್ರಿಲಿಮ್ಸ್ ಪರೀಕ್ಷೆಯ ಪಠ್ಯಕ್ರಮ ಏನಿರುತ್ತದೆ?
ಪತ್ರಿಕೆ-1 ಪಠ್ಯಕ್ರಮ : ರಾಷ್ಟ್ರ & ಅಂತರರಾಷ್ಟ್ರೀಯ ಪ್ರಾಮುಖ್ಯತೆ ಒಳಗೊಂಡ ಪ್ರಚಲಿತ ವಿದ್ಯಮಾನಗಳು, ರಾಜ್ಯಶಾಸ್ತ್ರ, ಭಾರತದ ಇತಿಹಾಸ, ಭಾರತದ ರಾಷ್ಟ್ರೀಯ ಚಳುವಳಿ, ಭೂಗೋಳ, ಆರ್ಥಿಕತೆ ಕುರಿತು ಪ್ರಶ್ನೆಗಳು.
ಪತ್ರಿಕೆ-2 ಪಠ್ಯಕ್ರಮ : ಮಾನಸಿಕ ಸಾಮರ್ಥ್ಯ, ರಾಜ್ಯದ ಪ್ರಚಲಿತ ಘಟನೆಗಳು, ಪರಿಸರ ಅಧ್ಯಯನ, ಸಾಮಾನ್ಯ ವಿಜ್ಞಾನ & ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳು.
ಇದನ್ನೂ ಓದಿ: ಸುಪ್ರೀಂ ಕೋರ್ಟ್ ನೇಮಕಾತಿ 2024: ಕ್ಲರ್ಕ್ ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ
ಪ್ರಿಲಿಮ್ಸ್‌ನಲ್ಲಿ ನೆಗೆಟಿವ್ ಅಂಕಗಳು
ಕೆಎಎಸ್ ಪರೀಕ್ಷೆ ದೇಶದ UPSC ಪರೀಕ್ಷೆಯಂತೆಯೇ ಕಠಿಣ ಪರೀಕ್ಷೆ ಎಂದರೆ ತಪ್ಪಾಗಲಾರದು.
ಪ್ರತಿ ತಪ್ಪು ಉತ್ತರಕ್ಕೆ 0.25 -ve ಅಂಕ ಇರಲಿದೆ.
KAS ಮುಖ್ಯ ಪರೀಕ್ಷೆ ಮಾದರಿ
KAS ಪರೀಕ್ಷೆಯಲ್ಲಿನ ಐಚ್ಛಿಕ ವಿಷಯಗಳ ಪತ್ರಿಕೆ 6 & ಪತ್ರಿಕೆ 7 ಕೈಬಿಡಲಾಗಿದೆ. ಒಟ್ಟು 1,750 ಅಂಕಗಳಿಗೆ ನಡೆಯ ಮುಖ್ಯ ಪರೀಕ್ಷೆಯನ್ನು 2020ರ ತಿದ್ದುಪಡಿಯ ನಂತರದಲ್ಲಿ 1,250 ಅಂಕಗಳಿಗೆ ನಡೆಸಲು ತೀರ್ಮಾನಿಸಲಾಯಿತು ಹಾಗೂ 200 ಅಂಕಗಳಿಗೆ ನಡೆಸಲಾಗುತ್ತಿದ್ದ ವ್ಯಕ್ತಿತ್ವ ಪರೀಕ್ಷೆಯನ್ನು (ಸಂದರ್ಶನ) 50 ಅಂಕಗಳಿಗೆ ಇಳಿಕೆ ಮಾಡಲಾಯಿತು.
ಸೂಚನೆ
KAS ಮೇನ್ಸ್ ಪರೀಕ್ಷೆಯಲ್ಲಿ ಕಡ್ಡಾಯ ಕನ್ನಡ & ಕಡ್ಡಾಯ ಇಂಗ್ಲಿಷ್ ಭಾಷಾ ಪರೀಕ್ಷೆಯನ್ನು ಒಳಗೊಂಡಿದೆ, ಪ್ರತಿ ಪತ್ರಿಕೆ 150 ಅಂಕ, ಈ ಪತ್ರಿಕೆಯಲ್ಲಿ ಶೇಕಡ 35 ಅಂಕ ಗಳಿಸಿದರೆ ಸಾಕು. ಈ 2 ಪತ್ರಿಕೆಗಳಲ್ಲಿ ನಿಗದಿತ ಅಂಕಗಳನ್ನು ಗಳಿಸದ ಅಭ್ಯರ್ಥಿಇತರೆ ಪತ್ರಿಕೆಗಳಲ್ಲಿ ಎಷ್ಟೇ ಹೆಚ್ಚು ಅಂಕ ಗಳಿಸಿದರೂ ವ್ಯಕ್ತಿತ್ವ ಪರೀಕ್ಷೆಗೆ & ಆಯ್ಕೆಗೆ ಅರ್ಹರಾಗಿರುವುದಿಲ್ಲ.
ಮುಖ್ಯ ಪರೀಕ್ಷೆಯ ಕಡ್ಡಾಯ ಕನ್ನಡ, ಕಡ್ಡಾಯ ಇಂಗ್ಲಿಷ್ 2 ಪತ್ರಿಕೆಗಳು SSLC ಪ್ರಥಮ ಭಾಷೆಯ ಮಟ್ಟದ್ದಾಗಿರುತ್ತದೆ.
KAS ಮುಖ್ಯ ಪರೀಕ್ಷೆ ಪತ್ರಿಕೆಗಳು & ಅಂಕಗಳ ವಿವರ
ಮುಖ್ಯ ಪರೀಕ್ಷೆ
1. ಕನ್ನಡ : 150 ಅಂಕ (2 ಗಂಟೆ ಪರೀಕ್ಷೆ ಅವಧಿ)
2. ಇಂಗ್ಲಿಷ್ : 150 ಅಂಕ (2 ಗಂಟೆ ಪರೀಕ್ಷೆ ಅವಧಿ)
ಇತರೆ ಪತ್ರಿಕೆಗಳು
ಪತ್ರಿಕೆ-1: ಪ್ರಬಂಧಗಳು – 250 ಅಂಕ
ಪತ್ರಿಕೆ-2: ಸಾಮಾನ್ಯ ಅಧ್ಯಯನ-1 (250 ಅಂಕ)
ಪತ್ರಿಕೆ-3: ಸಾಮಾನ್ಯ ಅಧ್ಯಯನ-2 (250 ಅಂಕ)
ಪತ್ರಿಕೆ-4: ಸಾಮಾನ್ಯ ಅಧ್ಯಯನ-3 (250 ಅಂಕ)
ಪತ್ರಿಕೆ-5: ಸಾಮಾನ್ಯ ಅಧ್ಯಯನ-4 (250 ಅಂಕ)
KAS ಪರೀಕ್ಷೆ ಬರೆಯಲು ವರ್ಗಾವಾರು ವಯಸ್ಸಿನ ಅರ್ಹತೆಗಳು
ಸಾಮಾನ್ಯ ವರ್ಗದ ಅಭ್ಯರ್ಥಿ : 35 ವರ್ಷ.
ಪ್ರವರ್ಗ-1, 2A, 2B, 3A, 3B ಅಭ್ಯರ್ಥಿಗೆ : 38 ವರ್ಷ.
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಅಭ್ಯರ್ಥಿಗೆ : 40 ವರ್ಷ.
ಅಂಗವಿಕಲ ಅಭ್ಯರ್ಥಿಗೆ : 10 ವರ್ಷ ವಯೋಮಿತಿ ಸಡಿಲಿಕೆ ನಿಯಮ ಇರಲಿದೆ.
ವಿಧವೆ ಅಭ್ಯರ್ಥಿಗಳಿಗೆ : 10 ವರ್ಷ ವಯೋಮಿತಿ ಸಡಿಲಿಕೆ ನಿಯಮ ಇರಲಿದೆ.
ಮಾಜಿ ಸೈನಿಕರಿಗೆ : ಸೇವೆ ಸಲ್ಲಿಸಿರುವಷ್ಟು ವರ್ಷಗಳಿಗೆ 3 ವರ್ಷಗಳನ್ನು ಸೇರಿಸಿದರೆ ಎಷ್ಟು ವರ್ಷಗಳಾಗುವುದೋ ಅಷ್ಟು ವರ್ಷ.
ವರ್ಗಾವಾರು ಮೀಸಲಾತಿ / KAS ಪರೀಕ್ಷೆ ಪ್ರಯತ್ನಗಳು
ಸಾಮಾನ್ಯ ವರ್ಗದ ಅಭ್ಯರ್ಥಿಗಳು 5 ಬಾರಿ ಪರೀಕ್ಷೆ ಬರೆಯಬಹುದು.
ಪ್ರವರ್ಗ-1, ಪ್ರವರ್ಗ-2A, ಪ್ರವರ್ಗ-2B, ಪ್ರವರ್ಗ-3A, ಪ್ರವರ್ಗ-3B ಅಭ್ಯರ್ಥಿಗಳು 7 ಬಾರಿ ಪರೀಕ್ಷೆ ಬರೆಯಬಹುದಾಗಿದೆ.
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ / ಪ್ರಯತ್ನಗಳ ಮಿತಿಯೇ ಇರುವುದಿಲ್ಲ.
KAS ಗೆಜೆಟೆಡ್ ಪ್ರೊಬೇಷನರಿ ವೇತನ ವಿವರ
KAS/ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ವೇತನ ಶ್ರೇಣಿ ರೂ.56,800- 90600 ಇದ್ದರೂ ಸಹ ಇದರಲ್ಲಿ 3 ಬಗೆಯ ವೇತನ ಇರಲಿದೆ. ಅದು BBMP, ಮಹಾನಗರ ಪಾಲಿಕೆ, ತಾಲ್ಲೂಕು & ಜಿಲ್ಲಾ ಕೇಂದ್ರಗಳಲ್ಲಿ ಕೆಲಸ ಮಾಡುವವರಿಗೆ HRA ವ್ಯತ್ಯಾಸದಿಂದ ಕೂಡಿರುತ್ತದೆ. ಇದರ ಆಧಾರದಲ್ಲಿ ವೇತನವು ವ್ಯತ್ಯಾಸವಿರಲಿದೆ.
KAS ಗ್ರೂಪ್ A ಅಧಿಕಾರಿ ಹುದ್ದೆಗೆ ವೇತನ ಶ್ರೇಣಿ ಲೆಕ್ಕಾಚಾರ
ಬೇಸಿಕ್ ಪೇ ರೂ..56,800 ವೇತನ
ತುಟ್ಟಿ ಭತ್ಯೆ ಶೇಕಡ.11.25 ಇರುತ್ತದೆ, ಅಂದರೆ 6,390.
ಮನೆ ಬಾಡಿಗೆ ಭತ್ಯೆ ಶೇಕಡ.8, ಶೇಕಡ.16, ಶೇಕಡ.24 ರ ದರದಲ್ಲಿ ರೂ.4,544 / 9,088/ 13,632 ಇರಲಿದೆ.
ಮೆಡಿಕಲ್ ಭತ್ಯೆ ರೂ.200 ಇರಲಿದೆ.
ತಾಹಶೀಲ್ದಾರ್, ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ತಾಲ್ಲೂಕು ಮಟ್ಟದ ಅಧಿಕಾರಿ, ಸಮಾಜ ಕಲ್ಯಾಣ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ, ವಿವಿಧ ಇಲಾಖೆಯ ಸಹಾಯಕ ನಿರ್ದೇಶಕರು, ಅಬಕಾರಿ ಇಲಾಖೆಯ ಆರಕ್ಷಕ ನಿರೀಕ್ಷಕರು, ಕಾರಾಗೃಹ ಇಲಾಖೆಯ ವಿವಿಧ ಗ್ರೂಪ್ ಬಿ ಹುದ್ದೆಗಳು, ಉಪನಿರೀಕ್ಷಕರು ಹೊರತುಪಡಿಸಿದ ವಿವಿಧ ಗ್ರೂಪ್ B ಹುದ್ದೆಗಳು ಇದ್ದು ಅವರಿಗೆ ವೇತನ ಶ್ರೇಣಿಯು ರೂ.43,100 -83,900.
ಇತರೆ ವಿಷಯಗಳು
ವಿದ್ಯಾರ್ಥಿಗಳಿಗೆ ₹35,000 ಪ್ರೋತ್ಸಾಹಧನ! ಅರ್ಜಿ ಸಲ್ಲಿಸಲು 2 ದಿನ ಮಾತ್ರ ಬಾಕಿ
ನಿರುದ್ಯೋಗಿ ಮಹಿಳೆಯರಿಗೆ ಸಿಹಿ ಸುದ್ದಿ!! ಅಂಗನವಾಡಿಯಲ್ಲಿ 6000+ ಖಾಲಿ ಹುದ್ದೆಗಳ ಬಂಪರ್ ನೇಮಕಾತಿ
FAQ
1.KAS ಹುದ್ದೆಗೆ ಎಷ್ಟು ಹಂತದ ಪರೀಕ್ಷೆಗಳು ಇರುತ್ತದೆ?
KAS ಹುದ್ದೆಗೆ 3 ಹಂತದ ಪರೀಕ್ಷೆಗಳು ಇರುತ್ತದೆ.
2.KAS ಪ್ರಿಲಿಮ್ಸ್‌ನಲ್ಲಿ ನೆಗೆಟಿವ್ ಅಂಕಗಳು ಎಷ್ಟು?
ಪ್ರತಿ ತಪ್ಪು ಉತ್ತರಕ್ಕೆ 0.25 -ve ಅಂಕ ಇರುತ್ತದೆ.