rtgh

SBI, PNB ಬ್ಯಾಂಕ್ ವಹಿವಾಟು ಬಂದ್! ರಾಜ್ಯ ಸರ್ಕಾರದ ಖಡಕ್‌ ಸೂಚನೆ

Karnataka Suspends Transactions with SBI PNB
Share

ಹಲೋ ಸ್ನೇಹಿತರೇ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್‌ ನಲ್ಲಿ ಯಾವುದೇ ವ್ಯವಹಾರ ನಡೆಸದಂತೆ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಎಲ್ಲಾ ಇಲಾಖೆಗಳು, ಮಂಡಳಿಗಳು, ನಿಗಮಗಳು, ಸಾರ್ವಜನಿಕ ವಲಯದ ಘಟಕಗಳು ಮತ್ತು ವಿಶ್ವವಿದ್ಯಾಲಯಗಳು ಎಲ್ಲಾ ಠೇವಣಿ ಮತ್ತು ಹೂಡಿಕೆಗಳನ್ನು ಹಿಂಪಡೆಯಲು ಮತ್ತು ಬ್ಯಾಂಕ್ ಜೊತೆ ಯಾವುದೇ ವ್ಯವಹಾರವನ್ನು ಕೂಡಲೇ ನಿಲ್ಲಿಸುವಂತೆ ಸುತ್ತೋಲೆ ಹೊರಡಿಸಿದೆ.

Karnataka Suspends Transactions with SBI PNB

ರಾಜ್ಯ ಸರ್ಕಾರದ ಇಲಾಖೆಗಳು, ಸಾರ್ವಜನಿಕ ವಲಯದ ಘಟಕಗಳು, ನಿಗಮಗಳು, ಮಂಡಳಿಗಳು, ಸ್ಥಳೀಯ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ಮತ್ತು ಇತರ ಸಂಸ್ಥೆಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಲ್ಲಾ ಶಾಖೆಗಳಲ್ಲಿ ಮಾಡಿದ ಎಲ್ಲಾ ಠೇವಣಿ/ಹೂಡಿಕೆಗಳನ್ನು ಹಿಂಪಡೆಯಬೇಕು ಎಂದು ಈ ಸುತ್ತೋಲೆಯ ಮೂಲಕ ತಿಳಿಸಲಾಗಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಭವಿಷ್ಯದಲ್ಲಿ ಯಾವುದೇ ಠೇವಣಿ/ಹೂಡಿಕೆಗಳನ್ನು ಮಾಡಬಾರದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಈ ಎರಡು ಬ್ಯಾಂಕ್‌ಗಳಲ್ಲಿನ ತಮ್ಮ ಖಾತೆಗಳನ್ನು ಮುಚ್ಚಲು ಮತ್ತು ಪ್ರಮಾಣೀಕೃತ ಕ್ಲೋಸರ್ ವರದಿಯನ್ನು ಸಲ್ಲಿಸಲು ಮತ್ತು ನಿಗದಿತ ಸ್ವರೂಪದಲ್ಲಿ ಠೇವಣಿ ಮತ್ತು ಹೂಡಿಕೆ ವರದಿಗಳ ವಿವರಗಳನ್ನು 2024ರ ಸೆಪ್ಟೆಂಬರ್ 20 ರೊಳಗೆ ಹಣಕಾಸು ಇಲಾಖೆಗೆ ಕಳುಹಿಸುವಂತೆ ಸರ್ಕಾರವು ಸರ್ಕಾರಿ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ.

ಇದನ್ನೂ ಸಹ ಓದಿ : ರಾಜ್ಯದ ಮಹಿಳೆಯರಿಗೆ 5 ಲಕ್ಷದ ಜೊತೆ ಬಂಪರ್‌ ಬೋನಸ್‌..!

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯೂ ಪಂಜಾಬ್ ನ್ಯಾಷನಲ್ ಬ್ಯಾಂಕ್ ರಾಜಾಜಿನಗರ ಶಾಖೆಯಲ್ಲಿ ಒಂದು ವರ್ಷ ಅವಧಿಯ ನಿಶ್ಚಿತ ಠೇವಣಿಯಲ್ಲಿ ಹೂಡಿಕೆ ಮಾಡಲು 2011ರಲ್ಲಿ ಚೆಕ್ ಮೂಲಕ 25 ಕೋಟಿ ರೂಪಾಯಿ ಪಾವತಿಸಿತ್ತು. ಇದರಲ್ಲಿ 13 ಕೋಟಿ ರೂಪಾಯಿ ನಗದೀಕರಣವಾಗಿತ್ತು. ಆದರೆ ಬ್ಯಾಂಕ್ ಅಧಿಕಾರಿಗಳಿಂದ ನಡೆದಿದೆ ಎನ್ನಲಾದ ವಂಚನೆ ಪ್ರಕರಣದಿಂದಾಗಿ 12 ಕೋಟಿ ರೂಪಾಯಿ ಇನ್ನು ಮರುಪಾವತಿಯಾಗಿಲ್ಲ. ಈ ಪ್ರಕರಣವು ನ್ಯಾಯಾಲಯಗಳಲ್ಲಿ 10 ವರ್ಷಗಳಿಂದಲೂ ವಿಚಾರಣೆ ಹಂತದಲ್ಲಿದೆ.

ಅದೇ ರೀತಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು 2013ರಲ್ಲಿ ಆಗಿನ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಅವೆನ್ಯೂ ರಸ್ತೆಯಲ್ಲಿನ ಬ್ಯಾಂಕ್ ಖಾತೆಯಲ್ಲಿ 10 ಕೋಟಿ ನಿಶ್ಚಿತ ಠೇವಣಿ ಇಟ್ಟಿತ್ತು. ಈ ಹಣ ಸಹ ಮರುಪಾವತಿ ಆಗದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ. ಹಣಕಾಸು ಕಾರ್ಯದರ್ಶಿ ಪಿ ಸಿ ಜಾಫರ್ (ಬಜೆಟ್ ಮತ್ತು ಸಂಪನ್ಮೂಲ) ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಇತರೆ ವಿಷಯಗಳು:

ಬೀದಿ ಬದಿ ವ್ಯಾಪಾರಿಗಳಿಗೆ ಗ್ಯಾರಂಟಿ ಇಲ್ಲದೇ ಸಾಲ! ಹೀಗೆ ಅಪ್ಲೇ ಮಾಡಿ

ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ! ಈ ಬ್ಯಾಂಕ್ ಜೊತೆಗಿನ ಎಲ್ಲಾ ವಹಿವಾಟುಗಳು ಬಂದ್

ಹೆಣ್ಣು ಮಕ್ಕಳ ಮುಂದಿನ ಭವಿಷ್ಯಕ್ಕೆ ಕೇಂದ್ರ ಸರ್ಕಾರದ ಯೋಜನೆ!


Share

Leave a Reply

Your email address will not be published. Required fields are marked *