ಹಲೋ ಸ್ನೇಹಿತರೇ, ಕರ್ನಾಟಕ ಒನ್ ಪೋರ್ಟಲ್ ಒಂದು Online ಪ್ಲಾಟ್‌ಫಾರ್ಮ್ ಆಗಿದ್ದು, ಒಂದೇ ಪೋರ್ಟಲ್ ಅಡಿಯಲ್ಲಿ ನಾಗರಿಕ-ಕೇಂದ್ರಿತ ಸೇವೆಗಳನ್ನು ಸುಲಭಗೊಳಿಸಲು ಕರ್ನಾಟಕ ಸರ್ಕಾರದಿಂದ ಸ್ಥಾಪಿಸಲ್ಪಟ್ಟಿದೆ. ಈಗ ನಿಮ್ಮ ಊರಿನಲ್ಲಿಯೂ ಫ್ರಾಂಚೈಸಿ ಪಡೆಯಿರಿ.
ಕರ್ನಾಟಕ ಸರ್ಕಾರವು ನೀಡುವ ಎಲ್ಲಾ ಸೇವೆಗಯನ್ನು ಪ್ರವೇಶಿಸಲು ಜನರು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬಹುದು. ಈ ಸೇವೆಗಳನ್ನು ಕರ್ನಾಟಕ ಸರ್ಕಾರ ಒದಗಿಸುವ ಸರ್ಕಾರದಿಂದ ನಾಗರಿಕರಿಗೆ (G2C) ಸೌಲಭ್ಯದ ಅಡಿಯಲ್ಲಿ ಸಂಯೋಜಿಸಲಾಗಿದೆ. ಕರ್ನಾಟಕ ಒನ್ ಯೋಜನೆಯು ಯಾವುದೇ ಸಮಯದಲ್ಲಿ, ಎಲ್ಲಿಯಾದರೂ, ನಾಗರಿಕ-ಕೇಂದ್ರಿತ ಸೇವೆಗಳಿಗೆ ಒಂದೇ ಇಂಟರ್ಫೇಸ್ ನೀಡುವ ಗುರಿಯನ್ನು ಹೊಂದಿದೆ. ವಿವಿಧ ವಿತರಣಾ ಚಾನೆಲ್‌ಗಳು & IT ಸಂಪನ್ಮೂಲಗಳನ್ನು ಬಳಸಿಕೊಂಡು ಸಮಗ್ರ, ಪ್ರಾಯೋಗಿಕ, ಸುರಕ್ಷಿತ, ಸುಸ್ಥಿರ & ನಾಗರಿಕ ಸ್ನೇಹಿ ರೀತಿಯಲ್ಲಿ ಈ ಸೌಲಭ್ಯಗಳನ್ನು government & ಖಾಸಗಿ ವ್ಯವಹಾರಗಳು ಒದಗಿಸುತ್ತವೆ.
Contents
ಕರ್ನಾಟಕ ಒನ್ ನಿಂದ ಪಡೆಯಬಹುದಾದ ಸೇವೆಗಳು :
ಕರ್ನಾಟಕ ಒನ್ ರಾಜ್ಯ ಸರ್ಕಾರದ ಸಾಕಷ್ಟು ಸೇವೆಗಳನ್ನು ಒದಗಿಸುತ್ತದೆ.
- ಆಧಾರ್‌ಗಾಗಿ ಸೇವೆಗಳು.
- ಆಯುಷ್ಮಾನ್ ಭಾರತ್ (ಆರೋಗ್ಯ ಇಲಾಖೆ ಸೇವೆಗಳು)
- ಚುನಾವಣಾ ಆಯೋಗಗಳಿಗೆ ಸೇವೆ.
- ನಾಡಕಚೇರಿ (ಕಂದಾಯ ಇಲಾಖೆ).
- ಫ್ಯಾನ್‌ಗಳು, ಟ್ಯೂಬ್‌ಗಳು & ಬಲ್ಬ್‌ಗಳ ಮಾರಾಟ
- ಇ-ಸ್ಟಾಂಪಿಂಗ್.
- ಪುರಸಭೆಯ ಸಹಯೋಗ ಸೇವೆಗಳು.
- ಆಹಾರ ಆಧಾರಿತ ಸೇವೆಗಳು.
- ನಾಗರಿಕ ಸರಬರಾಜು.
- ಎಕ್ಸೈಡ್ ಜೀವ ವಿಮಾ ಪ್ರೀಮಿಯಂ ಪಾವತಿ (ವಿಮೆ).
- ಸಾರಿಗೆ.
- ನಗರಾಭಿವೃದ್ಧಿ ಪ್ರಾಧಿಕಾರ (BUDA ಗಾಗಿ ಶುಲ್ಕ ವಿತರಣೆ).
- ಸರ್ಕಾರಿ ಇಲಾಖೆಯ ಅರ್ಜಿ ನಮೂನೆ ಬಿಡುಗಡೆ.
- ಉದ್ಯೋಗ ಎಚ್ಚರಿಕೆಗಳಿಗಾಗಿ ನೋಂದಣಿ.
- ಪೊಲೀಸ್ ಇಲಾಖೆ ಒದಗಿಸುವ ಸೇವೆಗಳು.
- ಉಪಯುಕ್ತತೆಗಳು (ವಿದ್ಯುತ್, ನೀರು ಮತ್ತು ದೂರವಾಣಿ).
- ಪಾಸ್ಪೋರ್ಟ್ ನೆರವು.
- ಹೆಚ್ಚುವರಿ ಮೂರನೇ ವ್ಯಕ್ತಿಯ ಸೇವೆಗಳು.
ಇದನ್ನು ಓದಿ: ವಿದ್ಯಾರ್ಥಿಗಳಿಗೆ ₹35,000 ಪ್ರೋತ್ಸಾಹಧನ! ಅರ್ಜಿ ಸಲ್ಲಿಸಲು 2 ದಿನ ಮಾತ್ರ ಬಾಕಿ
ಕರ್ನಾಟಕ ಒನ್ ಕೇಂದ್ರ ತೆರೆಯಲು ಅರ್ಜಿ ಆಹ್ವಾನ:
ಇದೀಗ ರಾಜ್ಯದಲ್ಲಿ ಒಟ್ಟು 135ಕ್ಕೂ ಹೆಚ್ಚಿನ ಕರ್ನಾಟಕ ಒನ್ ಕೇಂದ್ರ ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ನೀವು ಕೂಡಾ ಏನಾದರೂ ನಿಮ್ಮ ಸ್ವಂತ ದುಡಿಮೆಗಾಗಿ ನಿರೀಕ್ಷಿಸುತ್ತಿದ್ದೀರ, ಕರ್ನಾಟಕ ಒನ್ ಫ್ರಾಂಚೈಸಿ (Karnataka one franchise) ಅನ್ನು ಪಡೆದುಕೊಳ್ಳುವುದು ಉತ್ತಮ ಬೆಳೆವಣಿಯ ಆಯ್ಕೆ ಎಂದು ಹೇಳಬಹುದಾಗಿದೆ.
ಯಾವುದೇ ದೂರದ ತಾಲೂಕು ಹಾಗೂ ಜಿಲ್ಲಾ ಆಡಳಿತ ಕಚೇರಿಗೆ ಹೋಗದೆ ಸ್ಥಳೀಯ ಸೇವಾ ಕೇಂದ್ರದಲ್ಲಿ ಸರ್ಕಾರಿ ಸೇವೆ ಪಡೆದುಕೊಳ್ಳಲು ಇಂದು ಅವಕಾಶವನ್ನು ಮಾಡಿಕೊಡುತ್ತದೆ. ಇದೀಗ 135 ಕರ್ನಾಟಕ ಒನ್ ಕೇಂದ್ರ ತೆರೆಯಲು ಅರ್ಜಿ ಆಹ್ವಾನಿಸಲಾಗಿದೆ ಆಸಕ್ತರು ಫ್ರಾಂಚೈಸಿಯನ್ನು (Franchise) ಪಡೆದುಕೊಳ್ಳಬಹುದಾಗಿದೆ.
ಫ್ರಾಂಚೈಸಿ ಪಡೆದುಕೊಳ್ಳಲು ಯಾರೆಲ್ಲಾ ಅರ್ಹರಾಗಿದ್ದಾರೆ.
ಕರ್ನಾಟಕದ ನಿವಾಸಿಯಾಗಿರಬೇಕು.
ಯಾವುದೇ ಕಂಪನಿ ಅಥವಾ ಎನ್‌ಜಿಓ ಪಾಲುದಾರಿಕೆ ಮೂಲಕ ಸಲ್ಲಿಸಿದ ಅರ್ಜಿ ಪರಿಗಣಿಸಲಾಗುವುದಿಲ್ಲ.
ಡಿಪ್ಲೋಮೋ (Diploma), ಐಟಿಐ (ITI) ಅಥವಾ ತತ್ಸಮಾನ ತಾಂತ್ರಿಕ ಕೋರ್ಸ್ನಲ್ಲಿ ಉತ್ತೀರ್ಣರಾಗಿರಬೇಕು. ಹೆಚ್ಚಿನ ವಿದ್ಯಾರ್ಹತೆ ಪಡೆದುಕೊಂಡಿರುವವರಿಗೆ ಮೊದಲ ಆದ್ಯತೆ ಇರುತ್ತದೆ.
ಅರ್ಜಿದಾರನಿಗೆ ಕನ್ನಡ & ಇಂಗ್ಲೀಷ್ 2 ಭಾಷೆಯನ್ನು ಓದಲು ಬರೆಯಲು ಮತ್ತು ಕಂಪ್ಯೂಟರ್ನಲ್ಲಿ ಟೈಪ್ ಮಾಡಲು ಗೊತ್ತಿರಬೇಕು. ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕಾಗುತ್ತದೆ.
ಫ್ರಾಂಚೈಸಿ ಪಡೆಯಲು ಬೇಕಾಗಿರುವ ದಾಖಲೆಗಳು:
- ವಿದ್ಯಾರ್ಹತೆ ಪ್ರಮಾಣ ಪತ್ರ.
- ಆಧಾರ್ ಕಾರ್ಡ್ ( aadhar card)
- ಪ್ಯಾನ್ ಕಾರ್ಡ್( pan card)
- ಬ್ಯಾಂಕ್ ಖಾತೆಯ ವಿವರರ̤
- ಮೊಬೈಲ್ ಸಂಖ್ಯೆ.
- ಪಾಸ್ ಪೋರ್ಟ್ ಅಳತೆಯ ಫೋಟೋ.
- ಅರ್ಜಿ ಶುಲ್ಕ 100 ರೂ.ಗಳು.
ಕರ್ನಾಟಕ ಒನ್ ಕೇಂದ್ರ ಫ್ರಾಂಚೈಸಿಗೆ ಅರ್ಜಿ ಸಲ್ಲಿಸುವ ವಿಧಾನ:
- ಕರ್ನಾಟಕ ಒನ್ ಫ್ರಾಂಚೈಸಿ ಪಡೆದುಕೊಳ್ಳಲು https://karnatakaone.gov.in/ ಈ ವೆಬ್ ಸೈಟ್ ಭೇಟಿ ನೀಡಿ.
- ಅಗತ್ಯ ಇರುವ ಎಲ್ಲ ಮಾಹಿತಿ & ದಾಖಲೆಗಳನ್ನು ಭರ್ತಿ ಮಾಡಿ.
- ಅರ್ಜಿ ಶುಲ್ಕವನ್ನು ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ ನೆಟ್ ಬ್ಯಾಂಕಿಂಗ್ ಮೂಲಕ ಪಾವತಿ ಮಾಡಬಹುದಾಗಿದೆ.
- ಶುಲ್ಕ ಪಾವತಿ ಮಾಡಿದ ನಂತರ ನಿಮ್ಮ ಅರ್ಜಿ ಸ್ವೀಕಾರವಾಗುತ್ತದೆ.
- ಅರ್ಜಿಯ ಸ್ಥಿತಿ ತಿಳಿದುಕೊಳ್ಳಲು ಅರ್ಜಿ ಸಲ್ಲಿಸಿದ ನಂತರ ಸ್ವೀಕೃತಿ ಪ್ರತಿ ಪಡೆದುಕೊಳ್ಳಿ.
ಇತರೆ ವಿಷಯಗಳು
384 KAS ಹುದ್ದೆಗೆ ಅಧಿಸೂಚನೆ: ಅರ್ಹತೆ, ವೇತನ, ಪರೀಕ್ಷೆ ಮಾದರಿ ಸಂಪೂರ್ಣ ಮಾಹಿತಿ ಇಲ್ಲಿಂದ ಚೆಕ್ ಮಾಡಿ
ಕಿಸಾನ್ ನಿಧಿ ಕಂತಿನ ಹೊಸ ದಿನಾಂಕ!! 16 ನೇ ಕಂತಾಗಿ ₹2000 ಬದಲಿಗೆ ₹4000 ಸಿಗುತ್ತದೆ
FAQ
1. ಒಟ್ಟು ಎಷ್ಟು ಫ್ರಾಂಚೈಸಿ ತೆರೆಯಲು ಅನುಮತಿ?
135 ಫ್ರಾಂಚೈಸಿ ತೆರೆಯಲು ಅನುಮತಿ.
2. ಅರ್ಜಿದಾರರಿಗೆ ಯಾವೆಲ್ಲಾ ಭಾಷೆಗಳು ತಿಳಿದಿರಬೇಕು?
ಕನ್ನಡ ಮತ್ತು ಇಂಗ್ಲೀಷ್.