rtgh
Headlines

ವಾಹನ ಸವಾರರಿಗೆ ಬಿಗ್ ರಿಲೀಫ್! ಮತ್ತೆ HSRP ನಂಬರ್ ಪ್ಲೇಟ್ ಅಳವಡಿಕೆ ಗಡುವು ವಿಸ್ತರಣೆ

hsrp number plate last date extended
Share

ಹಲೋ ಸ್ನೇಹಿತರೇ, ವಾಹನ ಸವಾರರಿಗೆ ಒಂದಿಷ್ಟು ರಿಲೀಫ್ ಸಿಕ್ಕಿದಂತಾಗಿದೆ ಏಕೆಂದರೆ ರಾಜ್ಯ ಸರ್ಕಾರ ರಾಜ್ಯದಲ್ಲಿರುವ ಎಲ್ಲ ಹಳೆಯ ವಾಹನಗಳಿಗೆ HSRP ನಂಬರ್ ಪ್ಲೇಟ್ ಕಡ್ಡಾಯ ಅಳವಡಿಕೆಗೆ ಆದೇಶ ನೀಡಿತ್ತು,ಆದರೆ ಸರ್ಕಾರ ವಾಹನ ಸವಾರರಿಗೆ ಮತ್ತೊಂದು ಆದೇಶ ಹೊರಡಿಸಿ ಒಂದಿಷ್ಟು ರಿಲೀಫ್ ನೀಡಿದೆ

hsrp number plate last date extended

ಹಾಗಾದರೆ ಏನಿದು ಹೊಸ ಆದೇಶ? ನಿಮ್ಮ ಮನೆಯಲ್ಲಿ ಹಳೆಯ ವಾಹನವಿದ್ದರೆ ಮತ್ತು ನೀವು ಅದರ ಮೇಲೆ ದಿನನಿತ್ಯ ಸವಾರ ಮಾಡುತ್ತಿದ್ದರೆ ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿ ಮಾಹಿತಿಯನ್ನು ಪಡೆದುಕೊಳ್ಳುವುದು ಅಗತ್ಯವಿದೆ.

ಈಗಾಗಲೇ ಹಲವು ಬಾರಿ ವಾಹನಗಳಿಗೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಅಳವಡಿಕೆ ಗಡುವನ್ನು ರಾಜ್ಯ ಸರ್ಕಾರ ವಿಸ್ತರಣೆ ಮಾಡಿತ್ತು. ಈಗ ಮತ್ತೊಮ್ಮೆ ವಾಹನ ಸವಾರರಿಗೆ ಬಿಗ್ ರಿಲೀಫ್ ಎನ್ನುವಂತೆ HSRP ನಂಬರ್ ಪ್ಲೇಟ್ ಅಳವಡಿಕೆ ಗಡುವು ಸೆಪ್ಟೆಂಬರ್ 15ರವರೆಗೆ ವಿಸ್ತರಣೆ ಮಾಡಿ ಆದೇಶಿಸಿದೆ.

ಇದನ್ನೂ ಸಹ ಓದಿ : ಫ್ರೀ ಬಸ್ ಯೋಜನೆಯಲ್ಲಿ ಟ್ವಿಸ್ಟ್! ಇನ್ಮುಂದೆ ಉಚಿತ ಬಸ್ ಪ್ರಯಾಣಿಕರಿಗೆ ಹೊಸ ರೂಲ್ಸ್

HSRP ನಂಬರ್ ಪ್ಲೇಟ್ ಅಳವಡಿಕೆ

ಅತೀ ಸುರಕ್ಷಿತ ನೋಂದಣಿ ಫಲಕ ಅಂದರೆ HSRP ನಂಬರ್ ಪ್ಲೇಟ್ ಕಡ್ಡಾಯ ಅಳವಡಿಕೆಗೆ ರಾಜ್ಯ ಸರ್ಕಾರ ಮೇ 31 ರ ವರೆಗೆ ಗಡುವು ನೀಡಿತ್ತು.ಆದರೆ ಇದೀಗ ಇದನ್ನು ವಿಸ್ತರಿಸಿ ಜೂನ್ 12 ರವರೆಗೆ ಮಾಡಲಾಗಿದೆ.ಈ ವಿಷಯದ ಬಗ್ಗೆ ಹೈಕೋರ್ಟ್ ನಲ್ಲಿ ಚರ್ಚೆಗಳು ನಡೆದಿದ್ದು ಸ್ವತಃ ರಾಜ್ಯ ಸರ್ಕಾರವೇ ಈ ವಿಷಯವನ್ನು ಕೋರ್ಟ್ ನಲ್ಲಿ ಹೇಳಿಕೊಂಡಿದೆ. ಹಾಗಾಗಿ HSRP ನಂಬರ್ ಪ್ಲೇಟ್ ಹಾಕಿಸಿಕೊಳ್ಳುವರಿಗೆ ಜೂನ್ 12 ರವರೆಗೆ ರಿಲೀಫ್ ಸಿಕ್ಕಂತಾಗಿದೆ.

ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಸಾರಿಗೆ ಇಲಾಖೆ ಈ ಮೊದಲು ನವೆಂಬರ್ 17,2023 ಗಡುವು ನೀಡಿತ್ತು.ಅದರ ನಂತರ 2024 ಫೆಬ್ರುವರಿ 17ರ ತನಕ ವಿಸ್ತರಣೆ ಮಾಡಿತು. ನಂತರ ಮತ್ತೆ ಇದನ್ನು ಮೇ 31ರ ತನಕ ವಿಸ್ತರಿಸಲಾಯಿತು.ಆದರೆ ಈದಿಗ ರಾಜ್ಯ ಸರ್ಕಾರ ಹೈಕೋರ್ಟ್ ಇದನ್ನು ಮತ್ತಷ್ಟು ವಿಸ್ತರಿಸಬೇಕು ಅನ್ನುವ ರಿಟ್ ಅರ್ಜಿ ಸಲ್ಲಿಸುವುದರಿಂದ ಇದನ್ನು ಜೂನ್ 12 ರವರೆಗೆ ವಿಸ್ತರಿಸಲಾಗಿದೆ. ಮತ್ತೆ HSRP ನಂಬರ್ ಪ್ಲೇಟ್ ಅಳವಡಿಕೆ ಗಡುವು ಸೆಪ್ಟೆಂಬರ್ 15 ರವರೆಗೆ ವಿಸ್ತರಣೆ ಮಾಡಿ ಆದೇಶಿಸಿದೆ.

ವಾಹನ ಸವಾರರು ತಮ್ಮ ಹಳೆಯ ವಾಹನಗಳಿಗೆ HSRP ನಂಬರ್ ಪ್ಲೇಟ್ ಸೆಪ್ಟೆಂಬರ್ 15 ರವರೆಗೆ ಅಳವಡಿಕೆ ಮಾಡದೆ ಇದ್ದರೆ ಅಂತಹ ವಾಹನಗಳಿಗೆ ಕಾನೂನಾತ್ಮಕವಾಗಿ ದಂಡ ವಿಧಿಸಲಾಗುವುದು ಅಂತಾ ರಾಜ್ಯ ಸರ್ಕಾರ ಆದೇಶ ನೀಡಿದೆ.

ಇತರೆ ವಿಷಯಗಳು:

ಕೃಷಿಕರೇ ಗಮನಿಸಿ! ಈ ಬೆಳೆಗಾರರು ಸಹಾಯಧನಕ್ಕಾಗಿ ಈಗಲೇ ಅರ್ಜಿ ಸಲ್ಲಿಸಿ

SBI ನಲ್ಲಿ ಉದ್ಯೋಗ ಪಡೆಯಲು ಸುವರ್ಣಾವಕಾಶ! 150 ಕ್ಕೂ ಹೆಚ್ಚು ಖಾಲಿ ಹುದ್ದೆಗಳ ಭರ್ತಿ

ಇಂದಿರಾ ಕ್ಯಾಂಟೀನ್‌ನಲ್ಲಿ ಇಂದಿನಿಂದ ಹೊಸ ಮೆನು! ಊಟ-ತಿಂಡಿಗಳ ಪಟ್ಟಿ ಇಲ್ಲಿದೆ


Share

Leave a Reply

Your email address will not be published. Required fields are marked *