rtgh
Headlines

ಮಳೆಯಿಂದಾದ ನಷ್ಟಕ್ಕೆ 775 ಕೋಟಿ ಅನುದಾನ.! ತಕ್ಷಣ ಪರಿಹಾರಕ್ಕೆ ಈ ಕಚೇರಿಗೆ ಬೇಟಿ ನೀಡಿ

heavy rain compensation
Share

ಹಲೋ ಸ್ನೇಹತರೇ, ರಾಜ್ಯದ್ಯಂತ ಕಳೆದ 2 ವಾರಗಳಿಂದ ವಾಡಿಕೆಗಿಂತ ಅಧಿಕ ಮಳೆಯಾಗಿರುವ ಪರಿಣಾಮ ಅನೇಕ ಜಿಲ್ಲೆಗಳಲ್ಲಿ ಸಾರ್ವಜನಿಕ ಅಸ್ತಿ & ರೈತರ ಬೆಳೆ ನಷ್ಟವಾಗಿದ್ದು ಇದಕ್ಕೆ ಪರಿಹಾರ ಒದಗಿಸಲು ಮೊದಲ ಹಂತದಲ್ಲಿ ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದೆ. ಈ ಹಣವನ್ನು ಎಲ್ಲಿ ಪಡೆಯಬೇಕು ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

heavy rain compensation

ರಾಜ್ಯದ್ಯಂತ ಕಳೆದ 2 ವಾರಗಳಿಂದ ವಾಡಿಕೆಗಿಂತ ಅಧಿಕ ಮಳೆಯಾಗಿರುವ ಪರಿಣಾಮ ಅನೇಕ ಜಿಲ್ಲೆಗಳಲ್ಲಿ ಸಾರ್ವಜನಿಕ ಅಸ್ತಿ & ರೈತರ ಬೆಳೆ ನಷ್ಟವಾಗಿದ್ದು ಇದಕ್ಕೆ ಪರಿಹಾರ ಒದಗಿಸಲು ಮೊದಲ ಹಂತದಲ್ಲಿ ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಲಾಗಿದೆ.

ಅತೀಯಾದ ಮಳೆಯಿಂದ ಬೆಳೆ & ಮನೆ-ಅಸ್ತಿ ನಷ್ಟಕ್ಕೆ ಒಳಗಾದ ಸಾರ್ವಜನಿಕರಿಗೆ ಸರ್ಕಾರದಿಂದ ಪರಿಹಾರವನ್ನು ನೀಡಲು ಮೊದಲ ಹಂತದಲ್ಲಿ ರೂ 775/- ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಕೃಷ್ಣ ಬೈರೇಗೌಡ ಮಾಹಿತಿ ಹಂಚಿಕೊಂಡಿದ್ದಾರೆ.

ಬೆಳೆ ಹಾನಿಗೆ ತಕ್ಷಣವೇ ಪರಿಹಾರ

ಅತಿವೃಷ್ಟಿಯಿಂದ ಹಾನಿಗೀಡಾಗಿರುವ ಪ್ರದೇಶಗಳಲ್ಲಿ ಪರಿಹಾರ ಕಾರ್ಯಕ್ಕೆ ರೂ 775/- ಕೋಟಿ ಒದಗಿಸಿದ್ದು ಇನ್ನು ಹೆಚ್ಚುವರಿಯಾಗಿ ರೂ 200/- ಕೋಟಿ ನೀಡಲು ಸಿದ್ದರಿದ್ದೇವೆ. ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡುವ ಜೊತೆಗೆ ಹೊಸ ಮನೆಯನ್ನು ಮಂಜೂರು ಮಾಡಲು ತೀರ್ಮಾನ ಮಾಡಲಾಗಿದೆ.

ಬೆಳೆ ಹಾನಿಗೆ ತಕ್ಷಣವೇ ಪರಿಹಾರ ನೀಡಲು ಸೂಚಿಸಲಾಗಿದೆ & SDRF ಮಾರ್ಗಸೂಚಿ ಅನ್ವಯ ಪರಿಹಾರ ಕೊಡಲಾಗುತ್ತದೆ ಎಂದು ಕಂದಾಯ ಸಚಿವರು ವಾರ್ತಾ ಇಲಾಖೆಯ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಯಾರಿಗೆಲ್ಲ ಸಿಗಲಿದೆ ಪರಿಹಾರದ ಹಣ?

ಪ್ರಸ್ತುತ ರಾಜ್ಯ ಸರ್ಕಾರದಿಂದ ಪರಿಹಾರ ನೀಡಲು ಬಿಡುಗಡೆ ಮಾಡಿರುವ ರೂ 775/- ಕೋಟಿ ಅನುದಾನವನ್ನು ಹೆಚ್ಚು ಮಳೆಯಿಂದ ಹಾಗೂ ಅತಿವೃಷ್ಟಿಯಿಂದ ಹಾನಿಗೀಡಾಗಿರುವ ಪ್ರದೇಶಗಳಲ್ಲಿ ಉಂಟಾದ ನಷ್ಟಕ್ಕೆ ವೆಚ್ಚ ಮಾಡಲಾಗುತ್ತಿದೆ ಮನೆ ಗೋಡೆ ಬಿದ್ದು ಹೊಗಿರುವುದು & ಸಂಪೂರ್ಣ ಮನೆ ಹಾನಿಗೊಳಗಾದ ಮಳೆ ನೀರಿನಿಂದ ಬೆಳೆ ಹಾನಿಯಾಗಿರುವವರು, ಜೀವ ಹಾನಿಗೊಳಗಾದವರಿಗೆ ಪರಿಹಾರ ಸಿಗಲಿದೆ.

ಪರಿಹಾರ ಪಡೆಯಲು ಎಲ್ಲಿ ಅರ್ಜಿ ಸಲ್ಲಿಸಬೇಕು?

ರಾಜ್ಯ ಸರ್ಕಾರದಿಂದ ಅತಿವೃಷ್ಟಿಯಿಂದ ಹಾನಿಗೀಡಾಗಿರುವ ಜಿಲ್ಲೆಗಳಲ್ಲಿ ಸಾರ್ವಜನಿಕರಿಗೆ ಅರ್ಥಿಕವಾಗಿ ನೆರವು ನೀಡಲು ಪರಿಹಾರವನ್ನು ಒದಗಿಸಲಾಗಿದೆ ಅರ್ಹ ಫಲಾನುಭವಿ ನಾಗರಿಕರು ಮನೆ ಹಾನಿಗೊಳಗಾದರೆ ನಿಮ್ಮ ಹಳ್ಳಿಯ ಗ್ರಾಮ ಪಂಚಾಯತಿಗೆ ಭೇಟಿ ಮಾಡಿ ಅರ್ಜಿ ಸಲ್ಲಿಸಿ ಪರಿಹಾರವನ್ನು ಪಡೆದುಕೊಳ್ಳಿ.

ಕೃಷಿ ಬೆಳೆ ಉದಾಹರಣೆಗೆ ಭತ್ತ, ಮೆಕ್ಕೆಜೋಳ್, ರಾಗಿ ಬೆಳೆಗಳು ಅತೀಯಾದ ಮಳೆಯಿಂದ ಹಾನಿಯಾದರೆ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ನೇರವಾಗಿ ಭೇಟಿ ಮಾಡಿ ಅರ್ಜಿದಾರರ ಆಧಾರ್ ಕಾರ್ಡ ಪ್ರತಿ, ಬ್ಯಾಂಕ್ ಪಾಸ್ ಬುಕ್, ಜಮೀನಿನ ಪಹಣಿ/RTC/ಸರ್ವೆ ನಂಬರ್ ಅನ್ನು ಒದಗಿಸಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಇದೇ ರೀತಿ ತೋಟಗಾರಿಕೆ ಬೆಳೆ ಹಾನಿಗೊಳಗಾದರೆ ತೋಟಗಾರಿಕೆ ಇಲಾಖೆಯನ್ನು ಭೇಟಿ ಮಾಡಿ ಅಪ್ಲೇ ಮಾಡಬೇಕು.

ಯಾವುದಕ್ಕೆ ಎಷ್ಟು ಪರಿಹಾರ ನೀಡಲಾಗುತ್ತದೆ?

  • ಮನೆ ಹಾನಿಗೆ ರೂ 5,00,000 ದವರೆಗೆ ಪರಿಹಾರ.
  • ತೋಟಗಾರಿಕೆ ಬೆಳೆಗೆ ಎಕರೆಗೆ – ರೂ 22,500.
  • ಕೃಷಿ ಬೆಳೆಗಳಿಗೆ -ರೂ 8,500 ರಿಂದ 13,500 ರವರೆಗೆ ಪರಿಹಾರವನ್ನು ಮಾರ್ಗಸೂಚಿ ಅನ್ವಯ ಅರ್ಜಿದಾರರ ದಾಖಲಾತಿಯನ್ನು & ಸ್ಥಳ ಪರಿಶೀಲನೆ ಮಾಡಿ ಅರ್ಹ ಫಲಾನುಭವಿಗಳಿಗೆ ಪರಿಹಾರವನ್ನು ಒದಗಿಸಲಾಗುತ್ತದೆ.

ಪರಿಹಾರ ನೀಡಲು ಡಿಜಿಟಲ್ ವ್ಯವಸ್ಥೆ:

ಅರ್ಹ ಫಲಾನುಭವಿಗಳಿಗೆ ನಷ್ಟದ ಪರಿಹಾರವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲು ಕಳೆದ 2 ವರ್ಷದಿಂದ ಕಂದಾಯ ಇಲಾಖೆಯಿಂದ Parihara ತಂತ್ರಾಂಶವನ್ನು ಬಳಕೆ ಮಾಡಲಾಗುತ್ತಿದ್ದು ಪ್ರಥಮ ಹಂತದಲ್ಲಿ ಈ ವೆಬ್ಸೈಟ್ ನಲ್ಲಿ ಅರ್ಜಿದಾರರ ಅರ್ಜಿಯನ್ನು ಅಪ್ಲೋಡ್ ಮಾಡಿ ನಂತರ ದಾಖಲಾತಿ & ಸ್ಥಳ ಪರೀಶಿಲನೆ ಮಾಡಿ ಅರ್ಹ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮೂಲಕ ಅರ್ಜಿದಾರರ ಬ್ಯಾಂಕ್ ಖಾತೆಗೆ ಪರಿಹಾರ ಹಣ ಜಮಾ ಮಾಡಲಾಗುತ್ತದೆ.

ಈ ಕ್ರಮದಿಂದಾಗಿ ಮದ್ಯವರ್ತಿ ಹಾವಳಿಯನ್ನು ತಪ್ಪಿಸಬಹುದು & ಅರ್ಹ ಫಲಾನುಭವಿಗಳಿಗೆ ಪರಿಹಾರದ ಹಣ ಕಡಿಮೆ ಅವಧಿಯಲ್ಲಿ ಅವರ ಬ್ಯಾಂಕ್ ಖಾತೆಗೆ ವರ್ಗಾವಣೆ ಅಗುತ್ತದೆ ಎಂದು  ಇಲಾಖೆ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ. 

ನೀವು ಸಲ್ಲಿಸಿದ ಅರ್ಜಿ ಯಾವ ಹಂತದಲ್ಲಿದೆ ಮೊಬೈಲ್‌ನಲ್ಲಿ ಚೆಕ್‌ ಮಾಡಿ

ಪರಿಹಾರ ಪಡೆಯಲು ನೀವು ಅರ್ಜಿ ಸಲ್ಲಿಸಿದ ಬಳಿಕ ನಿಮ್ಮ ಅರ್ಜಿ ಯಾವ ಹಂತದಲ್ಲಿದೆ ಎಂದು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಕಂದಾಯ ಇಲಾಖೆಯ ಅಧಿಕೃತ ಪರಿಹಾರ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಅರ್ಜಿದಾರರ ಅಧಾರ್ ಕಾರ್ಡ ಸಂಖ್ಯೆಯನ್ನು ಹಾಕಿ ನಿಮ್ಮ ಅರ್ಜಿ ಯಾವ ಹಂತದಲ್ಲಿದೆ ಎಂದು ಮನೆಯಲ್ಲೇ ಕುಳಿತು ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಬಹುದು.

ಮೊದಲಿಗೆ ಈ Parihara application status ಲಿಂಕ್ ಮೇಲೆ ಕ್ಲಿಕ್ ಮಾಡಿ ನಂತರ ಅರ್ಜಿದಾರರ ಮೊಬೈಲ್ ನಂಬರ್ ಮತ್ತು ಅಲ್ಲೇ ಕೆಳಗೆ ಕಾಣುವ ಕ್ಯಾಪ್ಚ್ ಕೋಡ್ ಅನ್ನು ಹಾಕಿ ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ OTP ಯನ್ನು ನಮೂದಿಸಿ “ಲಾಗಿನ್” ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸ್ಥಿತಿಯನ್ನು ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳಬಹುದು.

ಇತರೆ ವಿಷಯಗಳು

ಉಚಿತ ವಿದ್ಯುತ್‌ ಪಡೆಯುವವರಿಗೆ ಬಿಗ್‌ ಶಾಕ್..! ಪಾವತಿಸಬೇಕು ₹25,000 ಹೆಚ್ಚುವರಿ ಬಿಲ್

ಈ ಯೋಜನೆಯಡಿ ಇಂದು ಜಿಲ್ಲಾವಾರು ಪ್ರತಿ ರೈತರ ಖಾತೆಗೆ ಹಣ ಬಿಡುಗಡೆ


Share

Leave a Reply

Your email address will not be published. Required fields are marked *