rtgh
Headlines

ಗೃಹಲಕ್ಷ್ಮಿ ಆಫರ್: ಈ ಬಾರಿ ಒಂದೇ ತಿಂಗಳಿನಲ್ಲಿ 4 ಸಾವಿರ ಜಮಾ!!

Gruha lakshmi Installment
Share

ಹಲೋ ಸ್ನೇಹಿತರೆ, ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪ್ರತೀ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯಂತಹ ದೊಡ್ಡ ಕೊಡುಗೆಯನ್ನು ನೀಡಿದೆ. ಫಲಾನುಭವಿ ಮಹಿಳೆಯರಿಗೆ ಪ್ರತಿ ತಿಂಗಳು ₹2000 ವನ್ನು ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ. ಈಗಾಗಲೇ 8 ಕಂತಿನ ಹಣ ನೀಡಲಾಗಿದ್ದು ಈಗ 9ನೇ ಕಂತಿನ ಸರದಿ ಈ ಬಾರಿ 4000 ಸಾವಿರ ಖಾತೆಗೆ ಜಮಾ ಮಾಡಲಾಗುವುದು ಎಂದು ತಿಳಿಸಲಾಗಿದೆ. ಈ ಮಾಹಿತಿಯ ಬಗ್ಗೆ ಹೆಚ್ಚಾಗಿ ತಿಳಿಯಲು ಈ ಲೇಖನವನ್ನು ಕೊನೆವರೆಗೂ ಓದಿ.

Gruha lakshmi Installment

ಕಳೆದ 8 ತಿಂಗಳುಗಳಿಂದ ತಪ್ಪದೆ 2,000ಗಳನ್ನು ಪ್ರತೀ ಮಹಿಳೆಯರು ಪಡೆದುಕೊಳ್ಳುತ್ತಿದ್ದಾರೆ. ಹಲವರ ಖಾತೆಗೆ ಇನ್ನೂ ಹಣ ಬರದೆ ಇರುವ ಕಾರಣ ಅಂಥವರ ಖಾತೆಗೆ ಹಣ ವರ್ಗಾವಣೆ (DBT) ಮಾಡುವುದಕ್ಕಾಗಿ ಸರ್ಕಾರ ಬೇರೆ ಬೇರೆ ಉಪಕ್ರಮಗಳನ್ನು ಕೈಗೊಳ್ಳುತ್ತಿದೆ.

ಈ ಬಾರಿ ಒಂದೇ ತಿಂಗಳಿನಲ್ಲಿ ನಾಲ್ಕು ಸಾವಿರ ರೂಪಾಯಿ ರಿಲೀಸ್!

8 ಮತ್ತು 9ನೇ ಕಂತಿನ ಹಣ ಒಟ್ಟಿಗೆ 4,000 ಮಹಿಳೆಯರ ಖಾತೆಗೆ ಜಮಾ ಆಗಿದೆ ಎಂದು ವರದಿಯಾಗಿದೆ. ಏಪ್ರಿಲ್ ತಿಂಗಳಲ್ಲಿ 8ನೇ ಕಂತಿನ ಹಣ ಬಿಡುಗಡೆ ಮಾಡಲಾಗಿದ್ದು. ಇನ್ನು ಒಂಬತ್ತನೇ ಕಂತಿನ ಹಣವನ್ನು ಮೇ, ಮೊದಲ ವಾರದಲ್ಲಿ ಜಮಾ ಮಾಡುವ ನಿರೀಕ್ಷೆ ಇತ್ತು, ಆದರೆ ಕೆಲವು ಮಹಿಳೆಯರಿಗೆ ಮೇ ತಿಂಗಳ ಹಣ ಅಂದರೆ 9ನೇ ಕಂತಿನ ಹಣವು ಕೂಡ ಈಗಾಗಲೇ ಜಮಾ ಆಗಿದೆ ಮಾಡಲಾಗಿದೆ.

ಇದನ್ನು ಓದಿ: ತಿಂಗಳ ಮೊದಲ ದಿನವೇ LPG ಬೆಲೆಯಲ್ಲಿ ಭಾರೀ ಇಳಿಕೆ! ಮೇ 1 ರ ಹೊಸ ದರ ಪಟ್ಟಿ

ಆಗಸ್ಟ್ 30 2023 ರಂದು ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಯಿತು ಅಂದಿನಿಂದ ಪ್ರತಿ ತಿಂಗಳು 20 ನೇ ತಾರೀಖಿನ ಒಳಗೆ ಹಣ ವರ್ಗಾವಣೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಚುನಾವಣೆಯ ಇರುವ ಹಿನ್ನಲೆ ಮಹಿಳೆಯರಿಗೆ ಯಾವುದೇ ತೊಂದರೆ ಆಗಬಾರದೆಂದು ರಾಜ್ಯ ಸರ್ಕಾರ ಮಹಿಳೆಯರ ಖಾತೆಗೆ ನಿರೀಕ್ಷೆಗೂ ಮೊದಲೇ ಹಣ ಜಮಾ ಮಾಡಿರುವುದು ಕಂಡುಬಂದಿದೆ.

ಈಗಾಗಲೇ 1.27 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿದ್ದು ಇಲ್ಲಿಯವರೆಗೆ 3000 ಕೋಟಿಗೂ ಅಧಿಕ ಹಣವನ್ನು ಗೃಹಲಕ್ಷ್ಮಿ ಯೋಜನೆಗೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಸಿಎಂ ಸಿದ್ದರಾಮಯ್ಯ ಅವರು ಈ ಬಗ್ಗೆ ಸ್ಪಷ್ಟವಾಗಿ ಮಾಹಿತಿ ನೀಡಿದ್ದು ಮುಂದಿನ ದಿನದಲ್ಲಿ ಅನುದಾನದ ಹಣವನ್ನು ಇನ್ನಷ್ಟು ಜಾಸ್ತಿ ಮಾಡುವ ಸಾಧ್ಯತೆ ಇದೆ.

ಸಾಕಷ್ಟು ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಹಣ ಇನ್ನೂ ಬಂದಿಲ್ಲ. ಇದಕ್ಕೆ ಮುಖ್ಯ ಕಾರಣವೆಂದರೆ ಬ್ಯಾಂಕಿನ ದಾಖಲೆಗಳು ಸರಿ ಇಲ್ಲದೆ ಇರುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ. ಆದರೆ ಇದಕ್ಕೆ ಸಾಕಷ್ಟು ಪರಿಹಾರವನ್ನು ಕೂಡ ಈಗಾಗಲೇ ಸೂಚಿಸಲಾಗಿದೆ.

ಅಂಗನವಾಡಿ ಸಹಾಯಕಿಯರು ಮತ್ತು ಆಶಾ ಕಾರ್ಯಕರ್ತೆಯರ ಸಹಾಯದಿಂದ ಮಹಿಳೆಯರು ತಮ್ಮ ಖಾತೆಯಲ್ಲಿ ಇರುವ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ಸರ್ಕಾರ ತಿಳಿಸಿದೆ. ಇದುವರೆಗೆ ನಿಮ್ಮ ಖಾತೆಗೆ ಸಂಬಂಧಪಟ್ಟ ಸಮಸ್ಯೆ ಪರಿಹಾರ ಆಗದೆ ಇದ್ದಲ್ಲಿ ಹೊಸದಾಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಮತ್ತೊಂದು ಅವಕಾಶ ನೀಡಲಾಗಿದೆ.

ಇತರೆ ವಿಷಯಗಳು:

ಇನ್ಮುಂದೆ DL, RC ಅವಶ್ಯಕತೆ ಇಲ್ಲ..! ಈ ಎಲ್ಲಾ ದಾಖಲೆಗಳು ಒಂದ್ರಲ್ಲೇ

ಮೇ ತಿಂಗಳ ಹೊಸ ರೇಷನ್ ಕಾರ್ಡ್ ಲಿಸ್ಟ್! ಹೆಸರಿದ್ದವರಿಗೆ ಮಾತ್ರ ಈ ಸೌಲಭ್ಯ


Share

Leave a Reply

Your email address will not be published. Required fields are marked *