ಹಲೋ ಸ್ನೇಹಿತರೇ, ರಾಜ್ಯ ಸರ್ಕಾರದ ಗೃಹ ಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಬಳಸುತ್ತಿರುವವರಿಗೆ ವಿದ್ಯುತ್ ಇಲಾಖೆ ಬರೆ ಎಳೆದಿದೆ. ಯಾವ ರೀತಿ ಬರೆ ಎಳೆಯಲಿದೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.
ಯೋಜನೆಯ ಸೌಲಭ್ಯ ಪಡೆದು, ನಿಗದಿತ ಯುನಿಟ್‌ಗಿಂತ ಅಧಿಕ ವಿದ್ಯುತ್ ಬಳಸುತ್ತಿರುವ ಗ್ರಾಹಕರಿಂದ ಹೆಚ್ಚುವರಿ ಭದ್ರತಾ ಠೇವಣಿಯನ್ನು ವಸೂಲಿ ಮಾಡಲಾಗುತ್ತಿದೆ. ಸರ್ಕಾರದಿಂದ ಹೆಚ್ಚುವರಿಯಾಗಿ ನೀಡುತ್ತಿರುವ 10 ಯುನಿಟ್ ವಿದ್ಯುತ್ ಬಳಸಿದವರು ಕೂಡ ಎಎಸ್‌ಡಿ ಪಾವತಿಸಬೇಕಾಗಿದೆ. ಆದರೆ ಈಗಾಗಲೇ ಸಂಗ್ರಹಿಸಿದ ಠೇವಣಿ ಬಡ್ಡಿ ಹಣವನ್ನು ಮರುಪಾವತಿಸುವ ಬಗ್ಗೆ ಪ್ರಸ್ತಾಪವೇ ಇಲ್ಲ.
ಧಾರವಾಡ: ಗೃಹಜ್ಯೋತಿ ವಿದ್ಯುತ್ ಯೋಜನೆ ಸೌಲಭ್ಯ ಪಡೆದು ನಿಗದಿತ ಯುನಿಟ್‌ಗಿಂತ ಹೆಚ್ಚು ವಿದ್ಯುತ್ ಬಳಸಿದವರಿಗೆ ಈಗ ಹೆಚ್ಚುವರಿ ಭದ್ರತಾ ಠೇವಣಿ (ASD) ಬರೆ ಬಿದ್ದಿದೆ. ಇಲ್ಲಿ ಸರ್ಕಾರದ ಮಾಸಿಕ 10 ಯುನಿಟ್ ಹೆಚ್ಚುವರಿ ಉಚಿತ ವಿದ್ಯುತ್ ಬಳಸಿದ ಗ್ರಾಹಕರೂ ASD ಪಾವತಿಸುವುದು ಅನಿವಾರ್ಯ.
ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳು ಗ್ರಾಹಕರು ಬಳಸಿದ ವಿದ್ಯುತ್ ಪ್ರಮಾಣ ಲೆಕ್ಕ ಹಾಕಿ ಜುಲೈ ತಿಂಗಳ ವಿದ್ಯುತ್ ಬಿಲ್‌ನಲ್ಲಿ ಹೆಚ್ಚುವರಿ ಭದ್ರತಾ ಠೇವಣಿಯ ಮೊತ್ತವನ್ನು ಉಲ್ಲೇಖಿಸಿವೆ. ಒಬ್ಬೊಬ್ಬ ಗೃಹ ವಿದ್ಯುತ್ ಈಗ ಗೃಹ ಬಳಕೆದಾರನಿಂದ 250 ರಿಂದ 1000 ರೂ.ಗೂ ಅಧಿಕ ಮೊತ್ತದ ASD ನಿಗದಿಗೊಳಿಸಿವೆ. ಆದರೆ, ಈಗಾಗಲೇ ಸಂಗ್ರಹಿಸಿದ ಠೇವಣಿಯ ಬಡ್ಡಿ ಹಣವನ್ನು ಗ್ರಾಹಕರಿಗೆ ಮರು ಪಾವತಿಸುವ ಬಗ್ಗೆ ಪ್ರಸ್ತಾಪಿಸದಿರುವುದು ಚರ್ಚೆಗಳಿಗೆ ಆಸ್ಪದ ಮಾಡಿದೆ.
ಸರಾಸರಿ ವಿದ್ಯುತ್ ಪ್ರಮಾಣ ಲೆಕ್ಕ
ವಿದ್ಯುತ್ ಸಂಪರ್ಕ ಪಡೆದ ಗ್ರಾಹಕ 12 ತಿಂಗಳಲ್ಲಿ ಬಳಸಿದ ಸರಾಸರಿ ವಿದ್ಯುತ್ ಪ್ರಮಾಣ ಲೆಕ್ಕ ಹಾಕಿ ಅದರಲ್ಲಿ 2 ತಿಂಗಳ ಬಿಲ್ ಮೊತ್ತವನ್ನು ವಿದ್ಯುತ್ ಸರಬರಾಜು ಕಂಪನಿಗಳು ಭದ್ರತಾ ಠೇವಣಿ ಪಡೆದುಕೊಳ್ಳಲಿವೆ. ಆದರೆ, ಗೃಹಜ್ಯೋತಿ ಯೋಜನೆ ಲಾಭವನ್ನು ಫಲಾನುಭವಿಗಳಿಗೆ ಮುಟ್ಟಿಸುವಾಗ ಒಂದು ವರ್ಷದ ಸರಾಸರಿ ವಿದ್ಯುತ್ ಮೊತ್ತವನ್ನು ಪರಿಗಣಿಸಲಾಗಿತ್ತು. ಇದರ ಮೇಲೆ ಪ್ರತಿ ತಿಂಗಳು ಹೆಚ್ಚುವರಿಯಾಗಿ 10 ಯುನಿಟ್ ಉಚಿತ ವಿದ್ಯುತ್ ಅನ್ನು ಸರಕಾರ ನೀಡಿತ್ತು. ಹೀಗಾಗಿ, ಈ ಹೆಚ್ಚುವರಿ ಉಚಿತ ವಿದ್ಯುತ್ ಬಳಸಿದವರು ಈಗ ಎಎಸ್‌ಡಿ ಪಾವತಿಸಬೇಕಾಗಿದೆ.
ವಿದ್ಯುತ್ ಸರಬರಾಜು ಕಂಪನಿಗಳು ದಶಕದ ಹಿಂದೆ ಮೂರು ತಿಂಗಳ ಬಿಲ್ ಮೊತ್ತವನ್ನು ಭದ್ರತಾ ಠೇವಣಿಯಾಗಿ ಸಂಗ್ರಹಿಸುತ್ತಿದ್ದವು. ಆದರೆ, ಈ ಮೊತ್ತ ಬಡವರಿಗೆ ಹೊರೆ ಆಗಲಿದೆ ಎಂಬ ಕಾರಣಕ್ಕೆ ಅದನ್ನು 2 ತಿಂಗಳಿಗೆ ಇಳಿಕೆ ಮಾಡಲಾಗಿತ್ತು. ಹಾಗೆಯೇ ಈಗ ಪಡೆಯುತ್ತಿರುವ ಹೆಚ್ಚುವರಿ ಭದ್ರತಾ ಠೇವಣಿ ಗೃಹಬಳಕೆ ಗ್ರಾಹಕರಿಗೆ ಮಾತ್ರ ಸೀಮಿತವಾಗಿಲ್ಲ. ಕೈಗಾರಿಕೆ, ವಾಣಿಜ್ಯ ವಿದ್ಯುತ್ ಬಳಕೆದಾರರೂ ಪಾವತಿಸಬೇಕಾಗಿದೆ ಎಂದು ಹೆಸ್ಕಾಂ ಅಧಿಕಾರಿಗಳು ‘ವಿಕ’ ಕೈ ಮಾಹಿತಿ ನೀಡಿದ್ದಾರೆ.
ಮೈನಸ್ ಬಿಲ್ ಬಂದ್ರೂ ಹಣ ಇಲ್ಲ
ಗ್ರಾಹಕರ ಭದ್ರತಾ ಠೇವಣಿ ಹಣವನ್ನು ಅವರ ಖಾತೆಯಲ್ಲಿ ಜಮೆ ಇಡಲಾಗುತ್ತಿದೆ. ಇಲ್ಲಿಯವರೆಗೆ ಈ ಠೇವಣಿ ಮೊತ್ತಕ್ಕೆ ವಾರ್ಷಿಕ ಶೇ. 3.75 ಬಡ್ಡಿ ನೀಡಿ ಆಯಾ ತಿಂಗಳ ವಿದ್ಯುತ್ ಬಿಲ್‌ನಲ್ಲಿ ಹೊಂದಾಣಿಕೆ (ಮೈನಸ್) ಮಾಡಲಾಗುತ್ತಿತ್ತು. ಆದರೆ, ಈಗ ಗೃಹಜ್ಯೋತಿ ಯೋಜನೆ ಜಾರಿಯಲ್ಲಿರುವುದರಿಂದ ಠೇವಣಿ ಬಡ್ಡಿ ಹಣ ಬಹುತೇಕ ಗ್ರಾಹಕರಿಗೆ ಸಿಗುತ್ತಿಲ್ಲ. ಬಡ್ಡಿ ಮೊತ್ತವನ್ನು ಗ್ರಾಹಕರ ಖಾತೆಯಲ್ಲಿ ಜಮೆ ಇಡಲಾಗುತ್ತಿದ್ದು, ಅದನ್ನು ಮರುಪಾವತಿ ಮಾಡಿಕೊಳ್ಳಲು ಆಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳೇ ಗೊಂದಲದಲ್ಲಿದ್ದಾರೆ. ಒಬ್ಬೊಬ್ಬ ವಿದ್ಯುತ್ ಬಳಕೆದಾರನ (ನೂರು, ಸಾವಿರ ಲೆಕ್ಕದಲ್ಲಿ) ಬಡ್ಡಿ ಹಣ ಖಾತೆಯಲ್ಲಿ ಉಳಿದುಕೊಂಡಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇತರೆ ವಿಷಯಗಳು
ನೌಕರರು ಮತ್ತು ಪಿಂಚಣಿದಾರರಿಗೆ ಬಂಪರ್ ಗಿಫ್ಟ್: ಮೂಲವೇತನ ಶೇ. 58.50% ಏರಿಕೆ!
BSNL ಅಗ್ಗದ ರಿಚಾರ್ಜ್ ಪ್ಲಾನ್.! 185 ರೂ.ಗೆ 2GB ಹೈ ಸ್ಪೀಡ್ ಡೈಲಿ ಡೇಟಾ 395 ದಿನ ಆನಂದಿಸಿ