ಹಲೋ ಸ್ನೇಹಿತರೇ, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಲ್ಲಿ ಒಂದಾಗಿರುವ, ಗೃಹಲಕ್ಷ್ಮಿ ಯೋಜನೆ ದಿನೇ ದಿನೇ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿದೆ. ಹೇಗಾದರೂ ಮಾಡಿ ನಮ್ಮ ಖಾತೆಗೂ ಹಣ ಬರುವಂತೆ ಆಗಬೇಕು ಎಂದು ಫಲಾನುಭವಿ ಮಹಿಳೆಯರು ಬಯಸುತ್ತಿದ್ದಾರೆ. ಈ ಜಿಲ್ಲೆಯ ಮಹಿಳೆಯರಿಗೆ 9 ನೇ ಕಂತಿನ ಹಣವನ್ನು ಖಾತೆಗೆ ಜಮಾ ಮಾಡಲಾಗಿದೆ. ಇದರ ಕುರಿತಾದ ಸಂಪೂರ್ಣ ಮಾಹಿತಿಗಾಗಿ ಈ ಲೇಖನವನ್ನು ಕೊನೆವರೆಗೂ ಓದಿ..
ಒಂದಷ್ಟು ಮಹಿಳೆಯರು ಹಣವನ್ನು ಪಡೆದುಕೊಂಡಿದ್ದರು ಇನ್ನೊಂದಿಷ್ಟು ಮಹಿಳೆಯರು ಅರ್ಜಿ ಸಲ್ಲಿಸಿದ ನಂತರವೂ ಹಣ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಾಕಷ್ಟು ಜನರಿಗೆ ಮೊದಲ ಕೆಲವು ಕಂತಿನ ಹಣ ಬಂದಿತ್ತು. ನಂತರದ ದಿನಗಳಲ್ಲಿ ಹಣ ಜಮಾ ಆಗಿಲ್ಲ. ಈ ಬಗ್ಗೆ ಸರ್ಕಾರ ಗಮನ ವಹಿಸಿದ್ದು ಪೆಂಡಿಂಗ್ ಇರುವ ಹಣವನ್ನು ಫಲಾನುಭವಿ ಮಹಿಳೆಯರ ಖಾತೆಗೆ ಬಿಡುಗಡೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ತಿಳಿಸಲಾಗಿದೆ.
Contents
ಈ ಜಿಲ್ಲೆಗಳಿಗೆ 9ನೇ ಕಂತಿನ ಹಣವು ಬಿಡುಗಡೆ:
ಗೃಹಲಕ್ಷ್ಮಿ ಯೋಜನೆಯ ಹಣ ಶೇಕಡ 80ರಷ್ಟು ಮಹಿಳೆಯರ ಖಾತೆಗೆ ಕಳೆದ 6ನೇ ಕಂತಿನಿಂದ ಬಂದು ತಲುಪುತ್ತಿದೆ ಆದರೆ ಇನ್ನೂ 20% ನಷ್ಟು ಮಹಿಳೆಯರು ಒಂದು ಕಂತಿನ ಹಣವನ್ನು ಕೂಡ ಪಡೆದುಕೊಳ್ಳಲು ಸಾಧ್ಯವಾಗಿಲ್ಲ.
ಬ್ಯಾಂಕ್ ಖಾತೆಗೆ ಸಂಬಂಧಪಟ್ಟ ಕೆಲವು ಪ್ರಮುಖ ಕೆಲಸಗಳನ್ನು ಮಾಡಿಕೊಳ್ಳುವುದರ ಮೂಲಕ ಪ್ರತಿಯೊಬ್ಬರ ಖಾತೆಗೂ ಹಣ ಜಮಾ ಆಗುತ್ತದೆ ಎಂದು ಸರ್ಕಾರ ಮಾಹಿತಿ ನೀಡಿತ್ತು ಅದರಂತೆ ತಮ್ಮ ಖಾತೆಗೆ ಸಂಬಂಧಪಟ್ಟ ಅಪ್ಡೇಟ್ ಮಾಡಿಕೊಂಡವರಿಗೆ ಪೆಂಡಿಂಗ್ ಇರುವ ಕಂತಿನ ಹಣ ವರ್ಗಾವಣೆ ಮಾಡಲಾಗುತ್ತಿದೆ.
ಗೃಹಲಕ್ಷ್ಮಿ ಯೋಜನೆಯ 9ನೇ ಕಂತಿನ ಹಣ ಸದ್ಯದಲ್ಲಿಯೇ ಈ ಕೆಲವು ಜಿಲ್ಲೆಗಳಿಗೆ ಮೊದಲ ಹಂತದಲ್ಲಿ ಬಿಡುಗಡೆ ಆಗಲಿದೆ. ಮೇ ತಿಂಗಳ ಮೊದಲ ವಾರದಲ್ಲಿ ಅಂದರೆ ಇನ್ನೂ 10 ದಿನಗಳ ಬಳಿಕ ಮಹಿಳೆಯರ ಖಾತೆಗೆ 9ನೇ ಕಂತಿನ ಹಣವು ಬಂದು ತಲುಪಲಿದೆ. ದಕ್ಷಿಣ ಕನ್ನಡ, ಮಂಡ್ಯ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಮೈಸೂರು, ಚಾಮರಾಜನಗರ, ಹಾಸನ ಈ ಮೊದಲಾದ ಜಿಲ್ಲೆಗಳಿಗೆ 9ನೇ ಕಂತಿನ ಹಣ ಬಹಳ ಬೇಗ ಬಿಡುಗಡೆ ಮಾಡಲಾಗುವುದು.
ಇದನ್ನೂ ಸಹ ಓದಿ : ರಾಜ್ಯದ ರೈತರಿಗೆ ಸಿಹಿ ಸುದ್ದಿ! ಸೂರ್ಯ ರೈತ ಯೋಜನೆಯಡಿ ಉಚಿತ ಸೋಲಾರ್ ಪಂಪ್‌ಸೆಟ್
ಇನ್ನು ಎರಡನೇ ಹಂತದಲ್ಲಿ ಬಳ್ಳಾರಿ, ಬಾಗಲಕೋಟೆ, ಹಾವೇರಿ, ಉತ್ತರ ಕನ್ನಡ, ಧಾರವಾಡ, ಶಿವಮೊಗ್ಗ ಮೊದಲಾದ ಜಿಲ್ಲೆಗಳಿಗೆ ಮೇ ತಿಂಗಳ ಎರಡನೇ ವಾರದಲ್ಲಿ ಹಣ ಬಿಡುಗಡೆ ಕಾರ್ಯ ಆರಂಭವಾಗಲಿದೆ. ಆದರೆ ಈಗ ಹಣ ಮಹಿಳೆಯರ ಖಾತೆಗೆ ವರ್ಗಾವಣೆ ಮಾಡುವ ವಿಧಾನ ಇನ್ನಷ್ಟು ಚುರುಕುಗೊಂಡಿದ್ದು, ಈ ಜಿಲ್ಲೆಗಳಿಗೂ ಮೇ ಮೊದಲ ವಾರದಲ್ಲೇ ಹಣ ಬರುವ ಸಾಧ್ಯತೆ ಇದೆ.
ನಿಮ್ಮ ಸಮಸ್ಯೆ ಪರಿಹಾರಕ್ಕೆ ಸರ್ಕಾರದ ಸಿಬ್ಬಂದಿಗಳ ನೇಮಕ:
ಮಹಿಳೆಯರು ತಮ್ಮ ಖಾತೆಗೆ ಹಣ ಬಾರದೆ ಇರುವುದಕ್ಕೆ ಹೆಚ್ಚು ಚಿಂತಿತರಾಗಿದ್ದಾರೆ ತಮ್ಮ ಎಲ್ಲ ದಾಖಲೆಗಳು ಸರಿ ಇದ್ರೂ ಹಣ ಬರುತ್ತಿಲ್ಲ ಎನ್ನುವ ಬೇಸರದಲ್ಲಿ ಇದ್ದಾರೆ ಆದರೆ ಸರ್ಕಾರ ಈಗ ಇದಕ್ಕೆ ಪರಿಹಾರವನ್ನು ಸೂಚಿಸಿದ್ದು, ಅಂಗನವಾಡಿ ಕಾರ್ಯಕರ್ತೆಯರು ಅಥವಾ ಗ್ರಾಮ ಪಂಚಾಯತ್ ಸಿಬ್ಬಂದಿಗಳು ನಿಮ್ಮ ಮನೆಗೆ ಬಂದು ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ನೇಮಕಾತಿಗೆ ಯಾಕೆ ಹಣ ಬರುತ್ತಿಲ್ಲ ಎಂಬುದನ್ನು ಪರಿಶೀಲಿಸಿ ಪರಿಹಾರವನ್ನು ಸೂಚಿಸುತ್ತಾರೆ
ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದು ಗೃಹಲಕ್ಷ್ಮಿ ಯೋಜನೆ ಬಹುತೇಕ ಸಕ್ಸಸ್ ಆಗಿದೆ. ನಿಮ್ಮ ಖಾತೆಗೂ ಕೂಡ ಹಣ ಬರಬೇಕು ಅಂದ್ರೆ ಅಗತ್ಯ ಇರುವ ಅಪ್ಡೇಟ್ ಮಾಡಿಕೊಳ್ಳಿ ಎಂದು ಮಾಹಿತಿ ನೀಡಿದ್ದಾರೆ.
ಇತರೆ ವಿಷಯಗಳು:
ಈಗ 200 ಅಲ್ಲ 300 ಯೂನಿಟ್ ಉಚಿತ ವಿದ್ಯುತ್ ಭಾಗ್ಯ!!
ಪ್ರೌಢಶಾಲಾ ಶಿಕ್ಷಕರ ಹುದ್ದೆ ಭರ್ತಿಗಾಗಿ ಅರ್ಜಿ ಆಹ್ವಾನ.! ಆಸಕ್ತರಿಗೆ ಅಪ್ಲೇ ಮಾಡಲು ಇಂದೇ ಕೊನೆ ಅವಕಾಶ
ಬೇಸಿಗೆ ರಜೆ ಕುರಿತು ಶಾಲಾ ಶಿಕ್ಷಣ ಇಲಾಖೆ ಹೊಸ ಅಪ್ಡೇಟ್!!