ಹಲೋ ಸ್ನೇಹಿತರೇ, ಈಗಾಗಲೇ ನೇರ ಲಾಭ ವರ್ಗಾವಣೆ(DBT) ಮೂಲಕ ಅರ್ಹ ಫಲಾನುಭವಿಗಳಿಗೆ 10 ಕಂತುಗಳ ಹಣವನ್ನು ಯಶಸ್ವಿಯಾಗಿ ವಿತರಣೆ ಮಾಡಲಾಗಿದೆ. ಒಟ್ಟು 20,000 ರೂ.ವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗಿದೆ.
ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿಗಳ ಪೈಕಿ ಗೃಹಲಕ್ಷ್ಮಿ ಯೋಜನೆಯೂ ಒಂದು. ಗೃಹಲಕ್ಷ್ಮಿ ಯೋಜನೆಯು ಮಹಿಳಾ ಸಬಲೀಕರಣದ ಭಾಗವಾಗಿ ಕಾಂಗ್ರೆಸ್ ಸರ್ಕಾರವು ಜಾರಿಗೆ ತಂದಿರುವ ಯೋಜನೆಯಾಗಿದೆ. ಈ ಯೋಜನೆಯಡಿ ಪ್ರತಿಯೊಂದು ಮನೆಯ ಯಜಮಾನಿಯರ ಖಾತೆಗೆ ಪ್ರತಿ ತಿಂಗಳು ₹2,000 ಜಮಾ ಮಾಡಲಾಗುತ್ತದೆ. ಇದು ಮಹಿಳೆಯರಿಗೆ ಆರ್ಥಿಕ ಬೆಂಬಲದ ಮೂಲಾಧಾರವಾದ್ದು, ಕೋಟ್ಯಂತರ ಮಹಿಳೆಯರಿಗೆ ನೆರವು ನೀಡಲಾಗುತ್ತಿದೆ.
ಕರ್ನಾಟಕದಲ್ಲಿ ವ್ಯಾಪಕ ಜನಪ್ರಿಯತೆಯನ್ನು ಗಳಿಸಿರುವ ಈ ಯೋಜನೆಯು ನೇರ ಲಾಭ ವರ್ಗಾವಣೆ(DBT) ಮೂಲಕ ಅರ್ಹ ಫಲಾನುಭವಿಗಳಿಗೆ ತಲುಪುತ್ತದೆ. ಈಗಾಗಲೇ 10 ಕಂತುಗಳ ಹಣವನ್ನು ಯಶಸ್ವಿಯಾಗಿ ವಿತರಿಸಲಾಗಿದ್ದು, ಒಟ್ಟು 20 ಸಾವಿರ ರೂ.ವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಿದ ಬಳಿಕ ಜಾರಿಗೆ ಬಂದ ಈ ಯೋಜನೆ ಲೋಕಸಭಾ ಚುನಾವಣೆವರೆಗೂ ಚೆನ್ನಾಗಿಯೇ ಜಾರಿಯಾಗಿತ್ತು. ಆದರೆ ಕೆಲವು ಕಾರಣಗಳಿಂದ ಕಳೆದ 2 ತಿಂಗಳಿನಿಂದ ಈ ಯೋಜನೆಯ ಹಣ ಫಲಾನುಭವಿಗಳಿಗೆ ತಲುಪಿಲ್ಲ. ಹೀಗಾಗಿ ಕೋಟ್ಯಂತರ ಮಹಿಳೆಯರಿಗೆ ಆತಂಕ ಉಂಟಾಗಿದ್ದು, ಹಣ ಬಿಡುಗಡೆ ಮಾಡದ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕಳೆದ 2 ತಿಂಗಳಿನಿಂದ ಈ ಯೋಜನೆಯ ಹಣ ತಲುಪದ ಕಾರಣ ಯಾವಾಗ ಹಣ ಬರುತ್ತದೆ ಅಂತಾ ಮಹಿಳೆಯರು ಕಾತುರದಿಂದ ಕಾಯುತ್ತಿದ್ದಾರೆ.
ಕೆಲವರು ಇನ್ಮುಂದೆ ನಮಗೆ ಹಣ ಬರುತ್ತೋ ಇಲ್ವೋ ಅಂತಾ ಚಿಂತಿಸುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಹಣ ಯಾವಾಗ ಬರುತ್ತದೆ ಅಂತಾ ಕಾಯುತ್ತಿರುವ ಮಹಿಳೆಯರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಈ ಕಾಯುವಿಕೆ ಈಗ ಅಂತ್ಯವಾಗಿದೆ. ಸ್ವತಃ ಸರ್ಕಾರವೇ ಈ ಬಗ್ಗೆ ಬಿಗ್ ಅಪ್‌ಡೇಟ್ ನೀಡಿದ್ದು, ಜೂನ್ ಮತ್ತು ಜುಲೈತಿಂಗಳ 2 ತಿಂಗಳ ಕಂತಿನ ಹಣವನ್ನು ಒಟ್ಟಿಗೆ ₹4,000 ವನ್ನು ಇದೇ ಆಗಸ್ಟ್ ಮೊದಲ ವಾರದಲ್ಲಿ ಯಜಮಾನಿಯರ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ರಾಜ್ಯ ಮಹಿಳಾ & ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದು, ಈ ಯೋಜನೆ ಯಾವುದೇ ಕಾರಣಕ್ಕೂ ಸ್ಥಗಿತಗೊಳ್ಳುವುದಿಲ್ಲ. ಮೇ ತಿಂಗಳಿನವರೆಗೆ ಸರಿಯಾಗಿಯೇ ಹಣ ಪಾವತಿಯಾಗಿದೆ. ಆದರೆ ಕಾರಣಾಂತರಗಳಿಂದ ಜೂನ್ & ಜುಲೈ ತಿಂಗಳ ಹಣ ಪಾವತಿಯಾಗಿಲ್ಲ. ಎಲ್ಲಾ ರೀತಿಯ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಆಗಸ್ಟ್ ಮೊದಲ ವಾರದೊಳಗೆ ಎಲ್ಲಾ ಮಹಿಳೆಯರ ಖಾತೆಗಳಿಗೆ ಹಣ ಜಮಾ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ. ಕೋಟ್ಯಂತರ ಮಹಿಳೆಯರಿಗೆ ಆರ್ಥಿಕ ನೆರವು ನೀಡಲು ನಮ್ಮ ಸರ್ಕಾರವು ಬದ್ಧವಾಗಿದೆ. ಮಹಿಳೆಯರು ಯಾವುದೇ ಕಾರಣಕ್ಕೂ ಆತಂಕಪಡುವ ಅಗತ್ಯವಿಲ್ಲವೆಂದು ಹೇಳಿದ್ದಾರೆ.
ಇತರೆ ವಿಷಯಗಳು
ಕನ್ನಡಿಗರಿಗೆ ಸಿಹಿ ಸುದ್ದಿ: ರೈಲ್ವೆ ಪರೀಕ್ಷೆ ಇನ್ಮುಂದೆ ಕನ್ನಡದಲ್ಲೇ ಬರೆಯಲು ಅವಕಾಶ!
44,228 ಪೋಸ್ಟ್‌ಮ್ಯಾನ್ ಹುದ್ದೆಗೆ SSLC ಪಾಸಾದವರ ನೇಮಕ.! ಅರ್ಜಿಗೆ ಕೊನೆ 2 ದಿನ ಬಾಕಿ