rtgh
Headlines

ಗೃಹಲಕ್ಷ್ಮಿ ಯೋಜನೆಯಲ್ಲಿ ಮಹತ್ವದ ಬದಲಾವಣೆ! ಈ ಮಹಿಳೆಯರ ಹೆಸರು ಡಿಲೀಟ್

gruha lakshmi deleted list
Share

ಹಲೋ ಸ್ನೇಹಿತರೇ, ರಾಜ್ಯ ಸರ್ಕಾರವು ಎಲ್ಲಾ ಮಹಿಳೆಯರಿಗಾಗಿ ಜಾರಿಗೆ ತಂದ ಯೋಜನೆ ಗೃಹಲಕ್ಷ್ಮಿ ಯೋಜನೆ ಆಗಿದೆ. ಈ ಒಂದು ಯೋಜನೆಯ ಮೂಲಕ ರಾಜ್ಯದ ಮಹಿಳೆಯರಿಗೆ ಸಹಾಯ ಮಾಡುವ ಗುರಿಯನ್ನು ಸರ್ಕಾರ ಹೊಂದಿತ್ತು, ಪ್ರತಿ ತಿಂಗಳು ಮಹಿಳೆಯರ ಬ್ಯಾಂಕ್ ಖಾತೆಗೆ ₹2000 ರೂಪಾಯಿಗಳನ್ನು ಡಿಬಿಟಿ ಮೂಲಕ ವರ್ಗಾವಣೆ ಮಾಡುತ್ತಾ ಬರಲಾಗುತ್ತಿದೆ. ಈ ವರೆಗು 10 ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣ ಮಹಿಳೆಯರ ಬ್ಯಾಂಕ್ ಖಾತೆಯನ್ನು ತಲುಪಿದೆ..

gruha lakshmi deleted list

11 ಮತ್ತು 12ನೇ ತಿಂಗಳ ಹಣ ಬರುವುದಕ್ಕೆ ಇನ್ನು ಬಾಕಿ ಇದೆ. ನಡುವೆ ಚುನಾವಣೆ ಹಾಗೂ ಅದರ ಫಲಿತಾಂಶ ಬಂದ ಕಾರಣ ಇದರಿಂದ 11 ಮತ್ತು 12ನೇ ಕಂತಿನ ಹಣ ಮಹಿಳೆಯರನ್ನು ತಲುಪಿಲ್ಲ.

ಶೀಘ್ರದಲ್ಲೇ ಮಹಿಳೆಯರಿಗೆ ಹಣ ಜಮೆ ಆಗೋದು ಖಂಡಿತ ಆಗಿದೆ. ಮಹಿಳೆಯರು ಆತಂಕ ಪಡುವ ಅಗತ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಆಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಾಹಿತಿ ನೀಡಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಉತ್ತಮವಾದ ಫಲಿತಾಂಶ ಪಡೆಯದೇ ಹೋದ ಕಾರಣ ಈ ಗ್ಯಾರೆಂಟಿ ಯೋಜನೆಗಳು ರಾಜ್ಯದಲ್ಲಿ ನಿಂತು ಹೋಗಬಹುದು ಎನ್ನುವ ಅನುಮಾನ ಮತ್ತು ಊಹಾಪೋಹಗಳು ಕೂಡ ಶುರುವಾಗಿದ್ದವು.

ಇದನ್ನೂ ಸಹ ಓದಿ : ರಾಜ್ಯದ ಎಲ್ಲಾ ಶಾಲೆಗಳಲ್ಲಿ ವಾರದಲ್ಲಿ 2 ಗಂಟೆ ವಿಶೇಷ ಕಾರ್ಯಕ್ರಮ! ಶಿಕ್ಷಣ ಇಲಾಖೆ ಆದೇಶ

ಆದರೆ ಖುದ್ದು ಸಿದ್ದರಾಮಯ್ಯ ಅವರು ಈ ಬಗ್ಗೆ ಮಾತನಾಡಿ, 5 ವರ್ಷಗಳ ಕಾಲ ಯಾವುದೇ ಯೋಜನೆಗಳು ನಿಲ್ಲುವುದಿಲ್ಲ ಎಂದು ಭರವಸೆ ನೀಡಿದ್ದಾರೆ, ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕೂಡ ಇದೇ ಮಾತನ್ನಾಡಿದ್ದಾರೆ. ಹಾಗೆಯೇ ರಾಜ್ಯದ ಮಹಿಳೆಯರು ತಮಗೆ ಹಣ ಬರುವ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದು, ಗೃಹಲಕ್ಷ್ಮಿ ಯೋಜನೆಯ ಹಣದಿಂದ ಮನೆ ನಿರ್ವಹಣೆಗೆ ಸಹಾಯ ಆಗಿದೆ ಎಂದು ತಿಳಿಸಿದ್ದಾರೆ.

ಹಾಗೆಯೇ ಇನ್ನು ಕೂಡ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ನಿಂತಿಲ್ಲ, ಯಾರೆಲ್ಲಾ ಇನ್ನು ಅರ್ಜಿ ಸಲ್ಲಿಸಿಲ್ಲವೋ ಅಂಥವರು ಕೂಡಲೇ ಅರ್ಜಿ ಸಲ್ಲಿಸಬಹುದು. ನಿಮ್ಮ ಅರ್ಜಿಯನ್ನು ಕೂಲಂಕುಷವಾಗಿ ಪರಿಶೀಲಿಸಿ, ಎಲ್ಲಾ ದಾಖಲೆಗಳು ಸರಿ ಇದ್ದರೆ, ನಿಮಗೆ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ಸಿಗುತ್ತದೆ.

ಸರ್ಕಾರದಿಂದ ಈಗ ಮಹಿಳೆಯರಿಗೆ ಒಂದು ಖಡಕ್ ಎಚ್ಚರಿಕೆ ಕೂಡ ಬಂದಿದ್ದು, ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾರೆಲ್ಲಾ ನಕಲಿ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಿದ್ದಾರೋ, ಅಂಥವರ ಅರ್ಜಿಗಳನ್ನು ಪರಿಶೀಲಿಸಿ, ಅವರುಗಳಿಗೆ ಯೋಜನೆಯ ಹಣ ತಲುಪುತ್ತಿದ್ದರೆ, ಅದನ್ನು ಶೀಘ್ರದಲ್ಲೇ ಕ್ಯಾನ್ಸಲ್ ಮಾಡಲಾಗುತ್ತದೆ. ಸುಳ್ಳು ದಾಖಲೆಗಳನ್ನು ನೀಡಿರುವವರಿಗೆ ಇನ್ನುಮುಂದೆ ಯೋಜನೆಯ ಸೌಲಭ್ಯ ಸಿಗುವುದಿಲ್ಲ.

ಇತರೆ ವಿಷಯಗಳು:

ಇನ್ಮುಂದೆ ಈ ಯೋಜನೆಯಡಿ ಸಿಗಲಿದೆ 10 ಸಾವಿರ ರೂ. ಪಿಂಚಣಿ!

BPL ಕಾರ್ಡ್‌ ರದ್ದು.! ಅಧಿಕಾರಿಗಳಿಗೆ CM ಸಿದ್ದರಾಮಯ್ಯ ಸೂಚನೆ

ಎಲ್‌ಪಿಜಿ ಸಿಲಿಂಡರ್ 8 ತಿಂಗಳವರೆಗೆ 300 ರೂ ಅಗ್ಗ!


Share

Leave a Reply

Your email address will not be published. Required fields are marked *