rtgh
Headlines

ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್‌ ಅಪ್ಡೇಟ್!‌ ಇನ್ಮುಂದೆ ಇವರಿಗೆ ಸಿಗಲ್ಲ ಫ್ರೀ ಕರೆಂಟ್

gruha jyothi update
Share

ಹಲೋ ಸ್ನೇಹಿತರೇ, ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್ ಸರ್ಕಾರ ನಮ್ಮ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಜನರಿಗೆ 5 ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತರುವುದಾಗಿ ತಿಳಿಸಿದ್ದ ಸರ್ಕಾರ ಅದೇ ರೀತಿ ನಡೆದುಕೊಂಡಿದ್ದು, ಚುನಾವಣೆ ಗೆದ್ದು ಸ್ವಲ್ಪ ದಿನ ಆಗುತ್ತಿದ್ದ ಹಾಗೆಯೇ ಒಂದೊಂದಾಗಿ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತರುವುದಕ್ಕೆ ಶುರು ಮಾಡಿತು. ಕೆಲವರು ಗ್ಯಾರಂಟಿ ಯೋಜನೆಗಳ ಬಗ್ಗೆ ವಿರೋಧ ವ್ಯಕ್ತಪಡಿಸಿದರು ಸಹ, ಎಲ್ಲಾ ಯೋಜನೆಗಳು ಕೂಡ ಕಾರ್ಯರೂಪಕ್ಕೆ ಬಂದಿದೆ.

gruha jyothi update

ಮೊದಲಿಗೆ ಶಕ್ತಿ ಯೋಜನೆಯನ್ನು ಜಾರಿಗೆ ತಂದ ಸರ್ಕಾರ ನಂತರ ಗೃಹಲಕ್ಷ್ಮಿ ಯೋಜನೆ, ಗೃಹಜ್ಯೋತಿ ಯೋಜನೆ, ಅನ್ನಭಾಗ್ಯ ಯೋಜನೆ ಜಾರಿಗೆ ತಂದಿತು. ಯುವನಿಧಿ ಯೋಜನೆಯು ಕೂಡ ಶುರುವಾಗಿದೆ. ಇತ್ತೀಚೆಗೆ ಲೋಕಸಭಾ ಎಲೆಕ್ಷನ್ ನಡೆದು, ಎಲೆಕ್ಷನ್ ಫಲಿತಾಂಶ ಹೊರಬಂದ ಬಳಿಕ ಗ್ಯಾರೆಂಟಿ ಯೋಜನೆಗಳೆಲ್ಲವು ನಿಲ್ಲುತ್ತದೆ ಎಂದೇ ಹೇಳಲಾಗಿತ್ತು. ಆದರೆ ಸರ್ಕಾರ ಆ ರೀತಿ ಏನನ್ನು ಕೂಡ ಮಾಡಿಲ್ಲ, ಗ್ಯಾರೆಂಟಿ ಯೋಜನೆಗಳನ್ನು ಮುಂದುವರೆಸಿಕೊಂಡೇ ಬಂದಿದೆ.

ಇನ್ಮುಂದೆ ಹೊಸ ರೂಲ್ಸ್:

ನಮಗೆಲ್ಲ ಗೊತ್ತಿರುವ ಹಾಗೆ ಗ್ಯಾರೆಂಟಿ ಯೋಜನೆಗಳನ್ನು ನಡೆಸಿಕೊಂಡು ಹೋಗುವ ಸಲುವಾಗಿ ಸರ್ಕಾರವು ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ. ಇದೆಲ್ಲವೂ ಸರ್ಕಾರಕ್ಕೆ ದೊಡ್ಡ ಹೊಣೆ ಇದ್ದ ಹಾಗೆ ಎಂದು ಹೇಳಿದರು ಸಹ ತಪ್ಪಾಗುವುದಿಲ್ಲ.

ಸರ್ಕಾರಕ್ಕೆ ಈ ಥರದ ಹೊಡೆತ ಇರುವುದರಿಂದ ಅದರ ಪರಿಣಾಮ ಕೂಡ ಜನರ ಮೇಲೆಯೇ ಬೀಳುತ್ತಿದೆ. ಒಂದು ಕಡೆ ಬೆಲೆ ಏರಿಕೆ ಜಾಸ್ತಿಯಾಗುತ್ತಿದೆ. ಮತ್ತೊಂದು ಕಡೆ ಸರ್ಕಾರ ಈಗ ಹೊಸ ರೂಲ್ಸ್ ಗಳನ್ನು ಜಾರಿಗೆ ತರುತ್ತಿದೆ.

ಇದನ್ನೂ ಸಹ ಓದಿ : ಬ್ಯಾಂಕ್‌ ಉದ್ಯೋಗಿಗಳಿಗೆ ಖುಷಿ ಸುದ್ದಿ! ರಜೆಯೋ.. ರಜೆ

ಗೃಹಜ್ಯೋತಿ ಯೋಜನೆಗೆ ಹೊಸ ರೂಲ್ಸ್:

ಗೃಹಜ್ಯೋತಿ ಯೋಜನೆಯ ಮೂಲಕ ಪ್ರತಿ ಮನೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಒಂದು ತಿಂಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ಎಂದು ಹೇಳಿದರು ಸಹ, ಪ್ರತಿ ಮನೆಗು ಅವರು ಪ್ರತಿ ತಿಂಗಳು ಎಷ್ಟು ವಿದ್ಯುತ್ ಬಳಸುತ್ತಿದ್ದರು ಎನ್ನುವುದರ ಮೇಲೆ ಲೆಕ್ಕ ಹಾಕಿ ಇಷ್ಟು ವಿದ್ಯುತ್ ಬಳಸಬಹುದು, ಹೆಚ್ಚುವರಿಯಾಗಿ 10% ಯೂನಿಟ್ ನಷ್ಟು ವಿದ್ಯುತ್ ಬಳಸಬಹುದು ಎಂದು ಹೇಳಲಾಯಿತು. ಇಷ್ಟು ದಿವಸ ಜನರು ಹೆಚ್ಚಾಗಿ ವಿದ್ಯುತ್ ಬಳಕೆ ಮಾಡಿದರೆ ಅದರ ಹಣವನ್ನು ಪಾವತಿ ಮಾಡಬೇಕು ಎಂದು ಸರ್ಕಾರ ತಿಳಿಸಿತು…

ಆದರೆ ಇದೀಗ ಸರ್ಕಾರಕ್ಕೆ ಆಗುತ್ತಿರುವ ಹೊಣೆಯ ಕಾರಣ ಹೊಸ ನಿರ್ಧಾರ ಒಂದನ್ನು ತೆಗೆದುಕೊಳ್ಳಲಾಗಿದೆ. ಅದೇನು ಎಂದರೆ ಇನ್ಮುಂದೆ ಗೃಹಜ್ಯೋತಿ ಯೋಜನೆ ಬಳಸುವವರು ಅವರ ಮನೆಗೆ ಇರುವ ಲಿಮಿಟ್ ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡಿದರೆ, ಅವರಿಗೆ ಗೃಹಜ್ಯೋತಿ ಯೋಜನೆಯ ಸೌಲಭ್ಯ ಸಿಗುವುದಿಲ್ಲ. ಸಂಪೂರ್ಣವಾಗಿ ಈ ಸೌಲಭ್ಯದಿಂದ ವಂಚಿತರಾಗುತ್ತಾರೆ. ಇದು ಸರ್ಕಾರದ ಹೊಸ ರೂಲ್ಸ್ ಆಗಿದ್ದು, ಜನರು ಇನ್ನುಮುಂದೆ ಎಚ್ಚರಿಕೆ ಇಂದ ವಿದ್ಯುತ್ ಬಳಕೆ ಮಾಡಿ.

ಇತರೆ ವಿಷಯಗಳು:

ನಿರುದ್ಯೋಗ ನಿವಾರಣೆಗೆ ಸರ್ಕಾರದ ಹೊಸ ಸ್ಕೀಮ್!‌ 50 ಲಕ್ಷ ಉದ್ಯೋಗ ಸೃಷ್ಟಿಗೆ ಮುಂದಾದ ಕೇಂದ್ರ

ಎಚ್ಚರ ರಾಜ್ಯದಲ್ಲಿ ಸುರಿಯಲಿದೆ ಗುಡುಗು ಸಹಿತ ವಿಪರೀತ ಮಳೆ.! ಇದಿಷ್ಟು ಜಿಲ್ಲೆಗಳಿಗೂ ಎಲ್ಲೋ ಅಲರ್ಟ್

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್! ಶಾಲೆಗಳಲ್ಲಿ ವಿಜ್ಞಾನ, ಕಂಪ್ಯೂಟರ್ ಲ್ಯಾಬ್, ಇಂಟರ್ನೆಟ್ ಸೌಲಭ್ಯ ಆರಂಭ


Share

Leave a Reply

Your email address will not be published. Required fields are marked *