rtgh
Headlines

ನೌಕರರು ಮತ್ತು ಪಿಂಚಣಿದಾರರಿಗೆ ಬಂಪರ್‌ ಗಿಫ್ಟ್: ಮೂಲವೇತನ ಶೇ. 58.50% ಏರಿಕೆ!

Government Employee
Share

ರಾಜ್ಯದ 7ನೇ ವೇತನದ ಆಯೋಗದ ಶಿಫಾರಸ್ಸಿನಂತೆ ರಾಜ್ಯ ಸರ್ಕಾರಿ ನೌಕರರ ವೇತನ, ವೇತನಕ್ಕೆ ಸಂಬಂಧಿತ ಭತ್ಯೆ, ಪಿಂಚಣಿಯನ್ನು ಪರಿಷ್ಕರಿಸಲಾಗಿದೆ. ಆಗಸ್ಟ್ 1ರಿಂದ ಅನುಷ್ಠಾನಗೊಳಿಸಲಾಗುತ್ತಿದ್ದು, ನೌಕರರ ಮೂಲವೇತನ ಹಾಗೂ ಪಿಂಚಣಿಯಲ್ಲಿ ಶೇ. 58.50% ಹೆಚ್ಚಳವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

Government Employee

ವಿಧಾನಸಭೆಯಲ್ಲಿ ಸರ್ಕಾರಿ ನೌಕರರ ವೇತನ, ಪಿಂಚಣಿಯ ಹೆಚ್ಚಳದ ಕುರಿತಂತೆ ಹೇಳಿಕೆಯನ್ನು ದಾಖಲಿಸಿದ ಸಿಎಂ, ಸರ್ಕಾರಿ ನೌಕರರ ವೇತನ, ಭತ್ಯೆ, ಪಿಂಚಣಿ ಪರಿಷ್ಕರಣೆಗೆ ಸಂಬಂಧ ಪಟ್ಟಂತೆ ರಚಿಸಲಾಗಿದ್ದ 7ನೇ ರಾಜ್ಯವೇತನದ ಆಯೋಗವು ಕಳೆದ ಮಾರ್ಚ್ 24ರಂದು ತನ್ನ ಶಿಫಾರಸನ್ನು ಸಲ್ಲಿಸಿದ್ದು, ಅವುಗಳನ್ನು ಅನುಷ್ಠಾನಗೊಳಿಸಲು ಸೋಮವಾರ ನಡೆದ ಸಚಿವ ಸಂಪುಟದ ಸಭೆಯಲ್ಲಿ ಒಪ್ಪಿಗೆಯನ್ನು ಸೂಚಿಸಲಾಗಿದೆ. 2022ರ ಜುಲೈ 1 ರಿಂದ ಪೂರ್ವಾನ್ವಯವಾಗುವಂತೆ  ಆಗಸ್ಟ್ 1ರಿಂದ ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

7ನೇ ರಾಜ್ಯವೇತನದ ಆಯೋಗದ ಶಿಫಾರಸ್ಸಿನಂತೆ ಸರ್ಕಾರಿ ನೌಕರರ ಮೂಲವೇತನ ಶೇ. 31% ತುಟ್ಟಿಭತ್ಯೆ ಮತ್ತು ಶೇ. 27.50ರಷ್ಟು ಫಿಟ್ ಮೆಂಟ್ ಸೇರಿಸಿ ಒಟ್ಟು ಶೇ. 58.50 ವೇತನ ಹಾಗೂ ಪಿಂಚಣಿಯನ್ನು ಪರಿಷ್ಕರಿಸಲಾಗುವುದು. ಈ ಕ್ರಮದಿಂದ 17000 ರೂಪಾಯಿ ಇರುವ ಮೂಲವೇತನ 27 ಸಾವಿರಕ್ಕೆ ಹಾಗೂ ಗರಿಷ್ಠ 1.50 ಲಕ್ಷ ಇರುವ ವೇತನವನ್ನು 2.41 ಲಕ್ಷಕ್ಕೆ ಹೆಚ್ಚಳವಾಗಲಿದೆ.

ಕನಿಷ್ಠ ಪಿಂಚಣಿ 8500 ನಿಂದ 13,500 ರೂಪಾಯಿ., ಗರಿಷ್ಠ ಪಿಂಚಣಿ 75,300 ರೂ.ನಿಂದ 1.20 ಲಕ್ಷ ರೂಪಾಯಿಗೆ ಪರಿಷ್ಕರಣೆ ಆಗಲಿದೆ. ಇದರಿಂದ ಸರ್ಕಾರಕ್ಕೆ 20208 ಕೋಟಿ ರೂಪಾಯಿ. ಹೆಚ್ಚುವರಿಯ ವೆಚ್ಚವಾಗಲಿದೆ ಎಂದು ಹೇಳಿದ್ದಾರೆ.

BSNL ಅಗ್ಗದ ರಿಚಾರ್ಜ್ ಪ್ಲಾನ್.! 185 ರೂ.ಗೆ 2GB ಹೈ ಸ್ಪೀಡ್ ಡೈಲಿ ಡೇಟಾ 395 ದಿನ ಆನಂದಿಸಿ

ಇನ್ಮುಂದೆ ವಿವಾಹ ಪ್ರಮಾಣಪತ್ರ ಪಡೆಯಲು ಹೊಸ ಕಾನೂನು..!


Share

Leave a Reply

Your email address will not be published. Required fields are marked *