rtgh
Headlines

ಅನ್ನಭಾಗ್ಯ ಯೋಜನೆಗೆ ಕುತ್ತು: ಉಚಿತ 5 ಕೆಜಿ ಅಕ್ಕಿ ದುಡ್ಡು ಇನ್ಮುಂದೆ ಯಾರಿಗೂ ಸಿಗಲ್ಲ

free ration amount karnataka
Share

ಹಲೋ ಸ್ನೇಹಿತರೇ, ಚುನಾವಣೆ ಬೆನ್ನಲ್ಲೇ ಎಪ್ರಿಲ್ ಮೇ ತಿಂಗಳ ಅನ್ನಭಾಗ್ಯದ ಹಣಕ್ಕೂ ಕೊಕ್ಕೆ ಬಿದ್ದಿದೆ. 2 ತಿಂಗಳಿಂದ ಜನರ ಖಾತೆಗೆ ಅನ್ನಭಾಗ್ಯ ಯೋಜನೆ ಹಣ ಪಾವತಿ ಮಾಡಿಲ್ಲ. ಇನ್ಮುಂದೆ ಹಣ ಸಿಗಲ್ಲ ಯಾಕೆ ಸಿಗಲ್ಲಾ ಎಂಬ ಮಾಹಿತಿಯ ಬಗ್ಗೆ ಲೇಖನದಲ್ಲಿ ತಿಳಿಯಿರಿ.

free ration amount karnataka

5 ಕೆಜಿ ಅಕ್ಕಿಯ ಬದಲಿಗೆ ಸರ್ಕಾರ 34 ರೂ ನಂತೆ 170 ರೂ ಪ್ರತಿಯೊಬ್ಬರ ಖಾತೆಗೆ ಜಮಾವಣೆ ಮಾಡುತ್ತಿತ್ತು. ಆದರೆ ಎಪ್ರಿಲ್‌ನಿಂದ ಹಣ ಬಂದಿಲ್ಲಾ ಎಂದು ವಿಜಯಪುರ ಜಿಲ್ಲೆ ಜನ ಕಂಗಾಲಾಗಿದ್ದಾರೆ.

ವಿಜಯಪುರ: ಪಂಚ ಗ್ಯಾರಂಟಿ ಖ್ಯಾತಿಯ ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ರೇಷನ್‌ ಕಾರ್ಡ್‌ದಾರರಿಗೆ 5 ಕೆಜಿ ಅಕ್ಕಿ ಬದಲಿಗೆ ನೀಡಬೇಕಿದ್ದ 170 ರೂ. ಹಣವನ್ನು ಬ್ಯಾಂಕಿಗೆ ಜಮೆ ಮಾಡದೇ ಇರುವುದರಿಂದ ಪಡಿತರ ಚೀಟಿದಾರರು ಪರದಾಡುತ್ತಿದ್ದಾರೆ.

ಅನ್ನಭಾಗ್ಯ ಯೋಜನೆಯಡಿ 5 kg ಅಕ್ಕಿ ನೀಡಲಾಗುತ್ತಿದೆ. ಇನ್ನೂ 5 kg ಅಕ್ಕಿಯ ಬದಲಿಗೆ 34 ರೂ. ಕೆಜಿಯಂತೆ 5 ಕೆಜಿಗೆ ನೀಡಬೇಕಿದ್ದ 170 ರೂ. ಹಣವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲು ಸರ್ಕಾರ ಮೀನ-ಮೇಷ ಎನಿಸುತ್ತಿದೆ. ಇದರಿಂದಾಗಿ ಕಂಗೆಟ್ಟ ಜಿಲ್ಲೆಯ ಲಕ್ಷಾಂತರ ಕುಟುಂಬಗಳು 170 ರೂ. ಯಾವಾಗ ಜಮೆಯಾಗುತ್ತದೆ ಎಂದು ನೋಡುತ್ತಿದ್ದಾರೆ.

ಇದನ್ನೂ ಓದಿ: ಶಾಲಾ ವಾಹನಗಳಿಗೆ ಬಿಗ್‌ ಅಲರ್ಟ್.!‌ ಹೊಸ ನಿಯಮಗಳ ಸುತ್ತೋಲೆ ಹೊರಡಿಸಿದ ಸರ್ಕಾರ

ಪಡಿತರ ಚೀಟಿಗಳು

ಜಿಲ್ಲೆಯಾದ್ಯಂತ 15,75,126 ಪಡಿತರ ಚೀಟಿಯ ಫಲಾನುಭವಿಗಳಿದ್ದಾರೆ. ಆದರೆ ಇಷ್ಟೊಂದು ಸಂಖ್ಯೆಯ ಫಲಾನುಭವಿಗಳಿಗೆ ಏಪ್ರಿಲ್‌ ತಿಂಗಳಲ್ಲಿ 26.04 ಕೋಟಿ ರೂ. ಆಯಾ ಫಲಾನುಭವಿಗಳಿಗೆ ಬ್ಯಾಂಕ್‌ ಖಾತೆಗೆ ಜಮೆಯಾಗಬೇಕಿತ್ತು. ಆದರೆ ರಾಜ್ಯ ಸರಕಾರ ಫಲಾನುಭವಿಗಳಿಗೆ ಹಣ ಜಮೆ ಮಾಡದೇ ಇರುವುದರಿಂದ ಕಿತ್ತು ತಿನ್ನುವ ಬಡವರ ಜೀವನ ಸಂಕಷ್ಟಕ್ಕೀಡಾದಂತಾಗಿದೆ.

ಮೇ ತಿಂಗಳದ್ದು ಇಲ್ಲ

ಕಳೆದ ಏಪ್ರಿಲ್‌ ತಿಂಗಳದ್ದೇ ಹಣ ಜೂನ್‌ ಅಂತ್ಯ ಬಂದರೂ ಬರುತ್ತಿಲ್ಲ. ಇನ್ನೂ ಮೇ ತಿಂಗಳ ಹಣ ಯಾವಾಗ ಬರುತ್ತದೆ ಎಂಬುದು ದೇವರಿಗೆ ಗೊತ್ತು ಎನ್ನುತ್ತಾರೆ ನೊಂದ ಫಲಾನುಭವಿಗಳು. ನಮಗೆ ಸರಕಾರ ಪ್ರತಿ ತಿಂಗಳು 170 ರೂ. ಜಮೆ ಮಾಡುತ್ತಿತ್ತು. ಇದನ್ನು ಗಣನೆಗೆ ಇಟ್ಟುಕೊಂಡು ನಾವು ಜೀವನ ನಿರ್ವಹಿಸುತ್ತಿದ್ದೇವು. ಆದರೆ ಬರಬೇಕಿದ್ದ ಹಣ ಬಾರದೇ ಇದ್ದಾಗ, ನಮ್ಮ ಜೀವನ ನಿರ್ವಹಣೆಯಲ್ಲಿ ಏರು-ಪೇರಾಗಿದೆ ಎನ್ನುತ್ತಾರೆ ಫಲಾನುಭವಿಗಳು.

ಏಪ್ರಿಲ್‌-ಮೇ ತಿಂಗಳು ಪಡಿತರ ಚೀಟಿ ಫಲಾನುಭವಿಗಳಿಗೆ ಹಣ ಜಮೆಯಾಗಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳ ಗಮನಸೆಳೆದರೆ, ಅವರು, ಹಾಗೇನಿಲ್ಲ. ಏಪ್ರಿಲ್‌ ತಿಂಗಳ ಹಣ ಈಗಾಗಲೇ ಖಾತೆಗೆ ಜಮೆಯಾಗಬೇಕಿತ್ತು. ಆದರೆ ಕೊಂಚ ತಡವಾಗಿದೆ. ಈಗ ನೇರ ನಗದು ಬಿಲ್‌ ಖಜಾನೆಗೆ ಜಮೆಯಾಗುವ ಹಂತದಲ್ಲಿದೆ. ಶೀಘ್ರದಲ್ಲೇ ಜಿಲ್ಲೆಯಾದ್ಯಂತ 26.04 ಕೋಟಿ ರೂ. ಬಿಡುಗಡೆಯಾಗುತ್ತಿದ್ದಂತೆಯೇ, ಆಯಾ ಫಲಾನುಭವಿಗಳ ಖಾತೆಗೆ 170 ರೂ. ನಂತೆ ಹಣ ಜಮೆಯಾಗಲಿದೆ ಎನ್ನುತ್ತಾರೆ. ಆದರೆ ಫಲಾನುಭವಿಗಳು ಹೇಳುವುದೇ ಬೇರೆ. ಬ್ಯಾಂಕ್‌ ಖಾತೆಗೆ ಹಣ ಜಮೆಯಾದಾಗಲೇ ಅಧಿಕಾರಿಗಳ ಮಾತು ಸತ್ಯವಾಗಲಿದೆ ಎನ್ನುತ್ತಾರೆ.

ಇತರೆ ವಿಷಯಗಳು

ಮೈಸೂರು ಸಿಟಿ ಕಾರ್ಪೊರೇಷನ್ ನಲ್ಲಿ 252 ಹುದ್ದೆಗಳ ನೇಮಕಾತಿ! ತಕ್ಷಣ ಅಪ್ಲೇ ಮಾಡಿ

ಎಲ್ಲಾ ರೈತರ ಖಾತೆಗೆ ₹2000! ಹೊಸ ಸರ್ಕಾರದಿಂದ ಗಿಫ್ಟ್


Share

Leave a Reply

Your email address will not be published. Required fields are marked *