ಬೆಳಗಾವಿ: ರಾಜ್ಯದಲ್ಲಿ ಅಂಗನವಾಡಿಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಮೊದಲನೇ ಹಂತದಲ್ಲಿ 10,000 ಅಂಗನವಾಡಿಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಶುಕ್ರವಾರ ಅಂಗನವಾಡಿಯ ಕಾರ್ಯಕರ್ತೆಯರಿಗೆ ಮೊಬೈಲ್ ಫೋನ್, ಸೀರೆ, ಔಷಧ ಕಿಟ್, ತೂಕದ ಯಂತ್ರಗಳನ್ನು ವಿತರಣೆ ಮಾಡಿ ಅವರು ಮಾತನಾಡಿದರು.
ಅಂಗನವಾಡಿ ಕೇಂದ್ರಗಳಲ್ಲಿ LKG, UKG ಯನ್ನು ಆರಂಭಿಸಿ ಸರ್ಕಾರಿ ಮಾಂಟೆಸ್ಸರಿಯನ್ನು ನಡೆಸಲು ನಿರ್ಧರವನ್ನು ಮಾಡಲಾಗಿದೆ. ಕೇಂದ್ರದಿಂದ 20,000 ಸ್ಮಾರ್ಟ್ ಕ್ಲಾಸ್ ಗಳು ಮಂಜೂರಾಗಿವೆ. 15 ಸಾವಿರಕ್ಕೂ ಹೆಚ್ಚು ಪದವೀಧರ ಶಿಕ್ಷಕರು ಕೆಲಸವನ್ನು ಮಾಡುತ್ತಿದ್ದು, ಎಲ್ಲರಿಗೂ ತರಬೇತಿಯನ್ನು ನೀಡಲಾಗುವುದು. ಇದಕ್ಕಾಗಿ 10 ಕೋಟಿ ರೂಪಾಯಿಯನ್ನು ಕಾಯ್ದಿರಸಲಾಗಿದೆ ಎಂದು ಮಾಹಿತಿಯನ್ನು ನೀಡಿದ್ದಾರೆ.
ರಾಜ್ಯದಲ್ಲಿ 20 ಲಕ್ಷ ರೂಪಾಯಿ ವೆಚ್ಚದಲ್ಲಿ 1,000 ಅಂಗನವಾಡಿ ಕೇಂದ್ರಗಳನ್ನು ಕಟ್ಟಡ ನಿರ್ಮಿಸಲಾಗುವುದು. ಕಾರ್ಯಕರ್ತೆಯರ ಗೌರವಧನದ ಹೆಚ್ಚಳಕ್ಕೆ ಮುಖ್ಯಮಂತ್ರಿಗಳು ಭರವಸೆಯನ್ನು ನೀಡಿದ್ದಾರೆ ಎಂದು ಸಚಿವರು ಮಾಹಿತಿಯನ್ನು ತಿಳಿಸಿದ್ದಾರೆ.
ಇತರೆ ವಿಷಯಗಳು:
ವಿದ್ಯುತ್ ಪಾವತಿಗೆ ಹೊಸ ನಿಯಮ.! ಇನ್ಮುಂದೆ ಪ್ರತಿ ತಿಂಗಳು ಮೊಬೈಲ್‌ಗೆ SMS
ದುಬಾರಿ ದುನಿಯಾ: ಜಿಯೋ ಬೆನ್ನಲ್ಲೇ ರೀಚಾರ್ಜ್ ದರ ಹೆಚ್ಚಿಸಿದ ಏರ್‌ಟೆಲ್!