ಹಲೋ ಸ್ನೇಹಿತರೇ, ಈ ಬಾರಿಯು ಹೋಳಿ ಹಬ್ಬದ ಸಲುವಾಗಿ ಮಹಿಳೆಯರಿಗೆ ಸಂತಸದ ಸುದ್ದಿಯನ್ನು ಹೊತ್ತು ತಂದಿದೆ. ಮಾರ್ಚ್ 25ಕ್ಕೆ ಹೋಳಿ ಹಬ್ಬದ ಸಡಗರವಿದ್ದು. ಹಬ್ಬ ಹರಿದಿನಗಳು ಎಂದ ಕೂಡಲೇ ಪ್ರತಿ ಮನೆಯಲ್ಲೂ ಸಾಕಷ್ಟು ಪ್ರಮಾಣದಲ್ಲಿ ಆಹಾರಗಳನ್ನು ತಯಾರಿಸಲಾಗುತ್ತದೆ. ಹೀಗಾಗಿ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಖಾಲಿಯಾಗದಂತೆ ಮುಂಚಿತವಾಗಿಯೇ ಹೆಚ್ಚುವರಿ ಸಿಲಿಂಡರ್ ಗಳ ವ್ಯವಸ್ಥೆ ಮಾಡಿಕೊಳ್ಳುತ್ತೇವೆ. ಹಣದುಬ್ಬರದ ಈ ಕಾಲದಲ್ಲಿ ಹೆಚ್ಚುವರಿ ಸಿಲಿಂಡರ್ ಖರೀದಿಸುವುದು ಕೂಡಾ ಕಷ್ಟವೇ. ಆದರೆ, ಹೋಳಿ ಹಬ್ಬದ ಸಂದರ್ಭದಲ್ಲಿ ಉಚಿತ ಸಿಲಿಂಡರ್ ಪಡೆಯಬಹುದು. ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಈ ಪ್ರಯೋಜನವನ್ನು ಪಡೆಯಬಹುದು.
ಸರ್ಕಾರದ ಈ ಯೋಜನೆಯು ರಾಜ್ಯದ 1.75 ಕೋಟಿ ಜನರಿಗೆ ನೇರವನ್ನು ಪ್ರಯೋಜನವನ್ನು ನೀಡುತ್ತದೆ. ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಒಂದು ವರ್ಷಕ್ಕೆ ಎರಡು ಬಾರಿಯಂತೆ ಉಚಿತವಾಗಿ ಸಿಲಿಂಡರ್ ನ್ನು ನೀಡಲು ಸರ್ಕಾರವು ನಿರ್ಧರಿಸಿತ್ತು. ಇದರ ಪ್ರಕಾರ ಮೊದಲನೇಯ ಸಿಲಿಂಡರ್ ಅನ್ನು ದೀಪಾವಳಿ ಸಂದರ್ಭದಲ್ಲಿ ನೀಡಲಾಗಿತ್ತು. ಇದೀಗ ಎರಡನೇ ಸಿಲಿಂಡರ್ ನ್ನು ರಾಜ್ಯ ಸರ್ಕಾರ ಹೋಳಿ ಹಬ್ಬದಂದು ನೀಡಲು ಹೊರಟಿದೆ.
Contents
ಉಜ್ವಲ ಯೋಜನೆಯನ್ನು ಯಾವಾಗ ಪ್ರಾರಂಭಿ ಸಲಾಯಿತು?
2016 ರಲ್ಲಿ ಪ್ರಧಾನಿ ಮೋದಿಯವರು ಉಜ್ವಲ ಯೋಜನೆಯನ್ನು ಪ್ರಾರಂಭಿಸಿದರು. ಇದರ ಅಡಿ ದೇಶಾದ್ಯಂತ 9 ಕೋಟಿ ಜನರಿಗೆ ಉಚಿತ ಗ್ಯಾಸ್ ಸಂಪರ್ಕವನ್ನು ನೀಡಲಾಗಿದೆ. ಈ ಯೋಜನೆಯ ಅಡಿ ಸರ್ಕಾರವು ಪ್ರತಿ ಸಿಲಿಂಡರ್ ಮೇಲೆ ಸಬ್ಸಿಡಿ ನೀಡುತ್ತದೆ. ಈ ಮೊದಲು ಈ ಸಬ್ಸಿಡಿ 200 ರೂ.ಗಳಷ್ಟಿತ್ತು. ಆದರೆ ಈಗ ಇದನ್ನು 300 ರೂ.ಗೆ ಹೆಚ್ಚಿಸಲಾಗಿದೆ.
ಉಚಿತ LPG ಸಿಲಿಂಡರ್ ಪಡೆಯುವುದು ಹೇಗೆ?
ರಾಜ್ಯದ ನಿವಾಸಿಯಾಗಿದ್ದರೆ, ಈ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು. ಉಚಿತ ಎಲ್‌ಪಿಜಿ ಸಿಲಿಂಡರ್ ಗಾಗಿ ಬ್ಯಾಂಕ್ ಖಾತೆಯನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಿರಬೇಕು.
ಅಪಘಾತವಾದ್ರೆ ಇನ್ಮುಂದೆ ನ್ಯೂ ರೂಲ್ಸ್! ದೇಶಕ್ಕೆ ಕೇಂದ್ರದ ಹೊಸ ಕೊಡುಗೆ
ಉಜ್ವಲ ಯೋಜನೆಯ ನೋಂದಣಿ ಪ್ರಕ್ರಿಯೆ:
* ಈ ಯೋಜನೆಯ ಪ್ರಯೋಜನವನ್ನು ನಿಮ್ಮದಾಗಿಸಿಕೊಳ್ಳುವ, ಮೊದಲು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
* ಪ್ರಧಾನ ಮಂತ್ರಿ ಉಜ್ವಲ ಯೋಜನೆ ಎಂಬ ಆಯ್ಕೆಯು ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ ಹಾಗೂ ಫಾರ್ಮ್ ನ್ನು ಡೌನ್‌ಲೋಡ್ ಮಾಡಿ.
* ಅಗತ್ಯವಿರುವ ಮಾಹಿತಿಯನ್ನು ಫಾರ್ಮ್‌ನಲ್ಲಿ ಸಂಪೂರ್ಣವಾಗಿ ಭರ್ತಿ ಮಾಡಿ.
* ನಿಮ್ಮ ಹತ್ತಿರದ ಎಲ್ಪಿಜಿ ಕೇಂದ್ರಕ್ಕೆ ಭೇಟಿ ನೀಡಿ ಫಾರ್ಮ್ ಅನ್ನು ಸಲ್ಲಿಸಿ.
* ಇದರೊಂದಿಗೆ ಎಲ್ಲಾ ದಾಖಲೆಗಳನ್ನು ಸಲ್ಲಿಸಬೇಕು.
* ದಾಖಲೆ ಪರಿಶೀಲನೆಯ ಅನಂತರ, ಎಲ್‌ಪಿಜಿ ಗ್ಯಾಸ್ ಸಂಪರ್ಕವನ್ನು ಒದಗಿಸಲಾಗುವುದು.
ಅಗತ್ಯವಿರುವ ದಾಖಲೆಗಳು:
- ಆಧಾರ್ ಕಾರ್ಡ್
- ಮೊಬೈಲ್ ಸಂಖ್ಯೆ
- ಪಾಸ್‌ಪೋರ್ಟ್ ಗಾತ್ರದ ಫೋಟೋ
- ವಯಸ್ಸಿನ ಪ್ರಮಾಣಪತ್ರ
- BPL ಪಟ್ಟಿಯಲ್ಲಿ ಹೆಸರು
- ರೇಷನ್ ಕಾರ್ಡ್‌ನ ಪ್ರತಿ
- ಬಿಪಿಎಲ್ ಕಾರ್ಡ್
ಯಾರು ಅರ್ಜಿ ಸಲ್ಲಿಸಬಹುದು?
ಈ ಯೋಜನೆಗೆ ಅರ್ಜಿ ಸಲ್ಲಿಸಲು, ಅರ್ಜಿದಾರರು ಮಹಿಳೆಯಾಗಿರಬೇಕು ಮತ್ತು ಅವರ ವಯಸ್ಸು 18 ವರ್ಷಕ್ಕಿಂತ ಮೇಲ್ಪಟ್ಟಿರಬೇಕು.ಅರ್ಜಿದಾರರು ಬಿಪಿಎಲ್ ಕುಟುಂಬಕ್ಕೆ ಸೇರಿರಬೇಕು. ಬಿಪಿಎಲ್ ಕಾರ್ಡ್ ಹೊಂದಿರಬೇಕು.
ಇತರೆ ವಿಷಯಗಳು:
ಉಚಿತ ಆಧಾರ್ ಕಾರ್ಡ್ ಅಪ್ಡೇಟ್‌ಗೆ ಇನ್ನು 2 ದಿನ ಮಾತ್ರ ಅವಕಾಶ.! ಮಾಡಿಸದವರಿಗೆ ಇಲ್ಲಿದೆ ಡೈರೆಕ್ಟ್ ಲಿಂಕ್
ಉಚಿತ ಮನೆ ಯೋಜನೆಯಡಿ ₹1 ಲಕ್ಷ ಸಹಾಯಧನ! ಈ ಸುಲಭ ವಿಧಾನದಲ್ಲಿ ಅರ್ಜಿ ಸಲ್ಲಿಸಿ