rtgh
Headlines

ಉಚಿತ ಗ್ಯಾಸ್ ಕನೆಕ್ಷನ್ ಪಡೆಯಲು ಮತ್ತೊಂದು ಅವಕಾಶ.! 2ನೇ ಹಂತದ ಅರ್ಜಿ ಸಲ್ಲಿಕೆ ಶುರು

free gas connection
Share

ಹಲೋ ಸ್ನೇಹಿತರೇ, ಸಣ್ಣ ಸಣ್ಣ ಹಳ್ಳಿಗಳಲ್ಲಿ ಸಹ ಈ ಯೋಜನೆಯ ಸೌಲಭ್ಯ ಸಿಗಬೇಕು ಅನ್ನೋದು ಕೇಂದ್ರ ಸರ್ಕಾರದ ಉದ್ದೇಶ, ಉಜ್ವಲ ಯೋಜನೆಯ ಮುಖಾಂತರ ಉಚಿತವಾಗಿ ಗ್ಯಾಸ್ ಸಿಲಿಂಡರ್ ಜೊತೆಗೆ ಪ್ರತಿ ತಿಂಗಳು ಗ್ಯಾಸ್ ಸಿಲಿಂಡರ್ ಪಡೆಯಲು ಸಬ್ಸಿಡಿಯನ್ನು ಸಹ ನೀಡಲಾಗುವುದು. ಅದನ್ನು ಪಡೆಯುವುದು ಹೇಗೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

free gas connection

ಪ್ರಧಾನ ಮಂತ್ರಿ ಉಜ್ವಲಾ ಯೋಜನೆ ಇದು ಕೇಂದ್ರ ಸರ್ಕಾರದ ಒಂದು ಯೋಜನೆಯಾಗಿದೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಅತ್ಯಂತ ಕಡಿಮೆ ಬೆಲೆಗೆ ಅಡುಗೆ ಅನಿಲವನ್ನು ಪೂರೈಸುವುದು ಈ ಯೋಜನೆಯ ಗುರಿಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು 2016 ಮೇ 1ರಂದು ಈ ಯೋಜನೆಯನ್ನು ಉದ್ಘಾಟಿಸಿದರು. ಮೊದಲ ಹಂತದಲ್ಲಿ ಈ ಯೋಜನೆಗಾಗಿ ₹80 ಶತಕೋಟಿ ಮೊತ್ತವನ್ನು ಮೀಸಲಿರಿಸಲಾಗಿತ್ತು. ಈ ಯೋಜನೆಗೆ ಇದೀಗ ಉಜ್ವಲ ಯೋಜನೆ 2.0 ಎಂದು ಮರುಹೆಸರಿಸಲಾಯಿತು.

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ನಮ್ಮ ದೇಶದ ಹಳ್ಳಿಗಳಲ್ಲಿರುವ ಜನರು ಅಡುಗೆ ವಿಚಾರಕ್ಕೆ ಯಾವುದೇ ರೀತಿಯ ಸಮಸ್ಯೆಗಳನ್ನು ಎದುರಿಸದಿರಲಿ, ಹೊಗೆಮುಕ್ತರಾಗಿ ಅಡುಗೆ ಮಾಡುವ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲಿ ಅನ್ನೋ ಉದ್ದೇಶದಿಂದ 2016ರಲ್ಲಿ ಉಜ್ವಲ ಯೋಜನೆಯನ್ನು ಜಾರಿಗೆ ತಂದರು. ಈ ಒಂದು ಯೋಜನೆಯ ಮೂಲಕ ದೇಶದ ಕೋಟ್ಯಂತರ ಜನರಿಗೆ ಉಚಿತವಾಗಿ ಗ್ಯಾಸ್ ಸಿಲಿಂಡರ್ ಕನೆಕ್ಷನ್ ಸಿಗುತ್ತಿದೆ.

ಉಚಿತ ಗ್ಯಾಸ್ ಸಿಲಿಂಡರ್‌ಗೆ ಅರ್ಜಿ

ಸಣ್ಣ ಸಣ್ಣ ಹಳ್ಳಿಗಳಲ್ಲಿ ಸಹ ಈ ಯೋಜನೆಯ ಸೌಲಭ್ಯ ಸಿಗಬೇಕು ಅನ್ನೋದು ಕೇಂದ್ರ ಸರ್ಕಾರದ ಉದ್ದೇಶವಾಗಿದ್ದು, ಉಜ್ವಲ ಯೋಜನೆಯ ಮೂಲಕ ಉಚಿತವಾಗಿ ಗ್ಯಾಸ್ ಸಿಲಿಂಡರ್ ಜೊತೆಗೆ ಪ್ರತಿ ತಿಂಗಳು ಗ್ಯಾಸ್ ಸಿಲಿಂಡರ್ ಪಡೆಯಲು ಸಬ್ಸಿಡಿಯನ್ನು ಸಹ ನೀಡಲಾಗುತ್ತದೆ. ಹೀಗಾಗಿ ಇದು ಹಳ್ಳಿಗಳಲ್ಲಿ ವಾಸ ಮಾಡುವ ಜನರಿಗೆ ಹೆಚ್ಚಿಗೆ ಅನುಕೂಲವಾಗುತ್ತಿದೆ. ಇದರಿಂದ ಹಳ್ಳಿಯ ಜನರು ತೊಂದರೆ ಇಲ್ಲದೇ ಅಡುಗೆ ಮಾಡಬಹುದು. 2016ರಲ್ಲಿ ಈ ಯೋಜನೆ ಜಾರಿಗೆ ಬಂದಿದ್ದು, ಈಗಾಗಲೇ 1 ಕೋಟಿಗಿಂತ ಹೆಚ್ಚು ಫಲಾನುಭವಿಗಳು ಈ ಯೋಜನೆಯ ಮೂಲಕ ಉಚಿತವಾಗಿ ಗ್ಯಾಸ್ ಸಿಲಿಂಡರ್ ಕನೆಕ್ಷನ್ ಪಡೆದುಕೊಂಡಿದ್ದಾರೆ. ಇದೀಗ ಉಜ್ವಲ ಯೋಜನೆಯ 2ನೇ ಹಂತದ ಪ್ರಕ್ರಿಯೆ ಶುರುವಾಗಿದ್ದು, ಯಾರೆಲ್ಲಾ ಈ ಯೋಜನೆಯ ಮೂಲಕ ಉಚಿತ ಗ್ಯಾಸ್ ಸಿಲಿಂಡರ್ ಪಡೆಯಬೇಕು ಎಂದುಕೊಂಡಿದ್ದಾರೋ ಅವರೆಲ್ಲರೂ ಸಹ ಸರ್ಕಾರದಿಂದ ಅಧಿಕೃತ ಮಾಹಿತಿ ಸಿಗುತ್ತಿದ್ದ ಹಾಗೆ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.  

PMUY ಯೋಜನೆಯ ಅರ್ಹತೆ

  • ಪಿಎಂ ಉಜ್ವಲ ಯೋಜನೆಯ 2ನೇ ಹಂತದಲ್ಲಿ ಅರ್ಜಿ ಸಲ್ಲಿಸಲು ಮಹಿಳೆಯರಿಗೆ ಮಾತ್ರ ಅರ್ಹತೆ ಇರುತ್ತದೆ
  • ಅರ್ಜಿ ಸಲ್ಲಿಸುವ ಮಹಿಳೆ ಭಾರತೀಯರಾಗಿರಬೇಕು ಮತ್ತು ಅವರ ವಯಸ್ಸು 18 ವರ್ಷ ತುಂಬಿರಬೇಕು.
  • ಹಳ್ಳಿಯಿಂದ ಅರ್ಜಿ ಸಲ್ಲಿಸುವವರ ವಾರ್ಷಿಕ ಆದಾಯ 1 ಲಕ್ಷ ರೂ.ಗಿಂತ ಕಡಿಮೆ ಇರಬೇಕು. ನಗರದಿಂದ ಅರ್ಜಿ ಸಲ್ಲಿಸುವವರ ಆದಾಯ 1 ಲಕ್ಷ ರೂ.ಗಿಂತ ಕಡಿಮೆ ಇರಬೇಕು.
  • ಅರ್ಜಿ ಸಲ್ಲಿಸುವ ವ್ಯಕ್ತಿಯ ಕುಟುಂಬದ ಇನ್ನುಳಿದ ಸದಸ್ಯರು ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಂಡಿರಬಾರದು. 

ಈ ಯೋಜನೆಗೆ ಅಗತ್ಯವಿರುವ ದಾಖಲೆ

  • ಆಧಾರ್ ಕಾರ್ಡ್
  • ಅಡ್ರೆಸ್‌ ಫ್ರೂಪ್
  • ರೇಷನ್ ಕಾರ್ಡ್
  • ಬ್ಯಾಂಕ್ ಪಾಸ್‌ಬುಕ್
  • ಫೋನ್ ನಂಬರ್
  • ಪಾಸ್‌ಪೋರ್ಟ್‌ ಸೈಜ್‌ ಫೋಟೊ

ಅರ್ಜಿ ಸಲ್ಲಿಕೆ ಪ್ರಕ್ರಿಯೆ

  • ಅಧಿಕೃತ ವೆಬ್‌ಸೈಟ್‌ https://pmuy.gov.in/ಗೆ ಭೇಟಿ ನೀಡಿ
  • ಹೋಮ್‌ಪೇಜ್‌ನಲ್ಲಿ ಪಿಎಂ ಉಲ್ವಲ ಯೋಜನೆ ೨.೦ಗೆ ಅಪ್ಲೈ ಮಾಡಿ ಎನ್ನುವ ಆಪ್ಶನ್‌ ಆಯ್ಕೆ ಮಾಡಿ.
  • ಈಗ ಈ ಯೋಜನೆಯ ಬಗ್ಗೆ ಎಲ್ಲಾ ಮಾಹಿತಿ ಬರುತ್ತದೆ. 
  • ಪೇಜ್‌ನ ಕೆಳಗೆ ಆನ್ಲೈನ್‌ ಪೋರ್ಟಲ್‌ ಎನ್ನುವ ಆಪ್ಶನ್‌ ಇರುತ್ತದೆ. ಅದನ್ನು ಆಯ್ಕೆ ಮಾಡಿ.
  • ಅಲ್ಲಿ ಬರುವ ಪಟ್ಟಿಯಿಂದ ಗ್ಯಾಸ್ ಕಂಪನಿಯನ್ನು ಆಯ್ಕೆ ಮಾಡಿ
  • ಬಳಿಕ ನಿಮ್ಮ ಫೋನ್ ನಂಬರ್‌ ಹಾಗೂ OTPಯಿಂದ ಲಾಗಿನ್‌ ಮಾಡಿ. ಬಳಿಕ ಅಪ್ಲಿಕೇಶನ್ ಫಾರ್ಮ್ ಬರುತ್ತದೆ.
  • ಅಲ್ಲಿ ಕೇಳುವ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ತುಂಬಿರಿ.
  • ಮಾಹಿತಿ ಎಲ್ಲವೂ ಸರಿ ಇದೆಯಾ ಎಂದು ಪರಿಶೀಲಿಸಿ ಬಳಿಕ ಅಪ್ಲಿಕೇಶನ್ ಫಾರ್ಮ್ ಪ್ರಿಂಟೌಟ್ ಪಡೆಯಿರಿ.

ಇತರೆ ವಿಷಯಗಳು

7ನೇ ವೇತನ ಆಯೋಗದಿಂದ ಮತ್ತೊಂದು ಹೊಸ ಸುದ್ದಿ..!

ರೈತರಿಗೆ ಸಿಗುತ್ತೆ 90% ಸಬ್ಸಿಡಿ! ಕೇಂದ್ರದಿಂದ ಬಂತು ಹೊಸ ಯೋಜನೆ


Share

Leave a Reply

Your email address will not be published. Required fields are marked *