ಹಲೋ ಸ್ನೇಹಿತರೇ, ಕರ್ನಾಟಕ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯು ಮಾರ್ಚ್ 1 ರಿಂದ 22 ರವರೆಗೆ ರಾಜ್ಯಾದ್ಯಂತ ನಡೆಯಲಿದೆ. ವಿದ್ಯಾರ್ಥಿಗಳ ಪರೀಕ್ಷೆಯ ಕೇಂದ್ರಗಳು ಬೇರೆ ಬೇರೆ ಶಾಲಾ/ ಕಾಲೇಜುಗಳಲ್ಲಿ ನಿಗದಿ ಪಡಿಸುವ ಹಿನ್ನೆಲೆಯಲ್ಲಿ, ಸರ್ಕಾರದಿಂದ ಉಚಿತ ಬಸ್ ಸೇವೆಯನ್ನು ನೀಡಲಾಗುವುದು. ಇದರ ಬಗ್ಗೆ ಇನ್ನು ಹೆಚ್ಚು ಮಾಹಿತಿ ತಿಳಿಯಲು ನಮ್ಮ ಲೇಖನವನ್ನು ಕೊನೆಯವರೆಗು ಓದಿ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಪ್ರಸಕ್ತ ಸಾಲಿನ 12nd PUC ವಾರ್ಷಿಕ ಪರೀಕ್ಷೆಯನ್ನು ಬರೆಯುವ ವಿದ್ಯಾರ್ಥಿಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ರಿಯಾಯಿತಿ ದರಗಳಲ್ಲಿ ವಿದ್ಯಾರ್ಥಿ ಪಾಸ್‌ಗಳನ್ನು ವಾಸಸ್ಥಳದಿಂದ ಶಾಲೆ ಮತ್ತು ಕಾಲೇಜಿಗೆ ಪ್ರಯಾಣಿಸಲು (ಪರೀಕ್ಷಾ ಕೇಂದ್ರಗಳಿಗೆ) ಅವಕಾಶವನ್ನು ಕಲ್ಪಿಸಿ ವಿತರಣೆ ಕಾರ್ಯವನ್ನು ಆರಂಭಿಸಿದೆ. ಈ ಕುರಿತು ಇದೀಗ ಪತ್ರಿಕಾ ಪ್ರಕಟಣೆ ಮಾಹಿತಿಯನ್ನು ಹೊರಡಿಸಿದೆ.
12nd ಪಿ.ಯು.ಸಿ ಎಲ್ಲಾ ವಿದ್ಯಾರ್ಥಿಗಳಿಗೆ ದಿನಾಂಕ 01.03.2024 – 22.03.2024 ರವರೆಗೆ ಪರೀಕ್ಷೆಗಳು ನಡೆಯುವ ದಿನಾಂಕಗಳಂದು ಪರೀಕ್ಷೆಗೆ ಹಾಜರಾಗಲು ವಾಸಸ್ಥಳದಿಂದ ನಿಯೋಜಿತ ಪರೀಕ್ಷಾ ಕೇಂದ್ರದವರೆಗೂ ಹೋಗುವಾಗ & ಹಿಂದಿರುಗುವಾಗ ಸಂಸ್ಥೆಯ ಸಾಮಾನ್ಯ ಸೇವೆಗಳಲ್ಲಿ12nd ಪಿಯುಸಿ ಪರೀಕ್ಷಾ ಪ್ರವೇಶ ಪತ್ರವನ್ನು ತೋರಿಸಿ, ಉಚಿತವಾಗಿ ಪ್ರಯಾಣಿಸಲು ಅವಕಾಶವನ್ನು ನೀಡಲಾಗಿದೆ.
12nd ಪಿ.ಯು.ಸಿ ಪರೀಕ್ಷಾ ದಿನಾಂಕಗಳಂದು ಪರೀಕ್ಷಾ ಕೇಂದ್ರಗಳ ಮಾರ್ಗಗಳಲ್ಲಿ ಕಡ್ಡಾಯವಾಗಿ ಎಲ್ಲಾ ಮಾರ್ಗಗಳನ್ನು ಕಾರ್ಯಾಚರಣೆಗೊಳಿಸಲಾಗುವುದು.
ಹೆಚ್ಚಿನ ಸುತ್ತುವಳಿಗಳ ಕಾರ್ಯಾಚರಣೆಯ ಅಗತ್ಯತೆ ಕಂಡುಬಂದರೆ ಕಾರ್ಯಾಚರಣೆ ಮಾಡಲಾಗುವುದು.
ಪರೀಕ್ಷಾ ಕೇಂದ್ರಗಳ ಬಳಿ ವಿದ್ಯಾರ್ಥಿಗಳು & ಪೋಷಕರು ಕೋರಿಕೆ ನಿಲುಗಡೆಯನ್ನು ಕೋರಿದಲ್ಲಿ, ಕೋರಿಕೆ ನಿಲುಗಡೆ ನೀಡಲು ಕ್ರಮವನ್ನು ಕೈಗೊಳ್ಳಲಾಗುವುದು.
ಈ ಮೇಲಿನ ನಿರ್ದೇಶನಗಳಂತೆ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣದ ಅವಕಾಶ ನೀಡಲಾಗುತ್ತದೆ.
ಶೀಘ್ರದಲ್ಲೇ KSRTC, ವಾಯುವ್ಯ ಕರ್ನಾಟಕ, ಈಶಾನ್ಯ ಕರ್ನಾಟಕ ಸಾರಿಗೆಗಳಿಂದಲೂ ಫ್ರೀ ಬಸ್ ಪ್ರಯಾಣ ಪ್ರಯೋಜನವನ್ನು 12nd ಪಿಯುಸಿ ಹಾಗೂ SSLC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ನಿರೀಕ್ಷಿಸಬಹುದು. ಪ್ರತಿ ವರ್ಷವು ಕೂಡ ಪರೀಕ್ಷೆ ವೇಳೆಗೆ ವಿದ್ಯಾರ್ಥಿಗಳಿಗೆ ಫ್ರೀ ಬಸ್ ಪ್ರಯಾಣ ಸೌಲಭ್ಯದ ಕುರಿತು ಸಾರಿಗೆ ಸಂಸ್ಥೆಗಳ ಮುಖ್ಯಸ್ಥರು ಸರ್ಕಾರದ ನಿರ್ದೇಶನದಂತೆ ಪ್ರಕಟಣೆಯನ್ನು ಹೊರಡಿಸುತ್ತಾರೆ. ವಿದ್ಯಾರ್ಥಿಗಳು ಕೇವಲ ತಮ್ಮ ಪರೀಕ್ಷೆ ಪ್ರವೇಶ ಪತ್ರವನ್ನು ತೋರಿಸಿ ಪರೀಕ್ಷೆ ಕೇಂದ್ರಕ್ಕೆ ಹಾಗೂ ತಮ್ಮ ವಾಸಸ್ಥಳಕ್ಕೆ ಪ್ರಯಾಣ ಮಾಡಲು ಅವಕಾಶ ನೀಡಲಾಗುತ್ತದೆ. ಈ ವರ್ಷವು ಇದನ್ನು ವಿದ್ಯಾರ್ಥಿಗಳು ನಿರೀಕ್ಷಿಸಬಹುದಾಗಿದೆ.
Contents
2nd PUC ಪರೀಕ್ಷೆ ಅಂತಿಮ ವೇಳಾಪಟ್ಟಿ (ಪರೀಕ್ಷೆ ವಿಷಯಗಳು & ಪರೀಕ್ಷೆ ದಿನಾಂಕ)
- ಕನ್ನಡ ಮತ್ತು ಅರೇಬಿಕ್ : 01-03-2024
- ಗಣಿತ & ಶಿಕ್ಷಣಶಾಸ್ತ್ರ : 04-03-2024
- ರಾಜ್ಯಶಾಸ್ತ್ರ & ಸಂಖ್ಯಾಶಾಸ್ತ್ರ: 05-03-2024
- ಮಾಹಿತಿ ತಂತ್ರಜ್ಞಾನ & ಹೆಲ್ತ್‌ಕೇರ್, ಬ್ಯೂಟಿ ಅಂಡ್ವೆಲ್‌ನೆಸ್ , ಆಟೋಮೊಬೈಲ್ ಹಾಗೂ ರೀಟೈಲ್ : 06-03-2024
- ಇತಿಹಾಸ / ಭೌತಶಾಸ್ತ್ರ : 07-03-2024
- ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ: 09-03-2024
- ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ : 11-03-2024
- ಇಂಗ್ಲಿಷ್ : 13-03-2024
- ಹಿಂದೂಸ್ತಾನಿ ಸಂಗೀತ, ಮನಃಶಾಸ್ತ್ರ, ರಸಾಯನಶಾಸ್ತ್ರ, ಮೂಲಗಣಿತ : 15-03-2024
- ಅರ್ಥಶಾಸ್ತ್ರ : 16-03-2024
- ಭೂಗೋಳಶಾಸ್ತ್ರ & ಜೀವಶಾಸ್ತ್ರ : 18-03-2024
- ಸಮಾಜಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ : 20-03-2024
- ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೆಬಿಕ್, ಫ್ರೆಂಚ್ : 21-03-2024
- ಹಿಂದಿ : 22-03-2024
ಇತರೆ ವಿಷಯಗಳು
ವಿದ್ಯಾರ್ಥಿಗಳಿಗೆ ₹75,000 ರಿಂದ ₹1,25,000 ವಿದ್ಯಾರ್ಥಿವೇತನ!! ತಕ್ಷಣ ಆನ್‌ಲೈನ್ ನಲ್ಲಿ ಫಾರ್ಮ್ ಭರ್ತಿ ಮಾಡಿ
ಗೃಹಲಕ್ಷ್ಮಿ ಯೋಜನೆಯಲ್ಲಿ ಹೊಸ ಅಪ್ಡೇಟ್ ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್.! ಇನ್ನು ಹಣ ಜಮೆಯಾಗದವರು ತಪ್ಪದೇ ನೋಡಿ