rtgh
Headlines

ಶ್ರಾವಣಕ್ಕೆ ಹೂವಿನ ಬೆಲೆ ಏರಿಕೆ; ‌ಹಬ್ಬಕ್ಕೆ ರಾಜ್ಯದ ಜನತೆಗೆ ಕಾದಿದೆ ದೊಡ್ಡ ಗಿಫ್ಟ್

flower price hike
Share

ಹಲೋ ಸ್ನೇಹಿತರೇ, ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚಾಗಿ ಮಳೆ ಸುರಿಯುತ್ತಿರುವುದರಿಂದ ಫಲ ಪುಷ್ಪಗಳೆಲ್ಲಾ ಕೊಳೆಯುತ್ತಿವೆ. ರೋಗ ಬಾಧೆಗೆ ತುತ್ತಾಗುತ್ತಿವೆ. ಹೀಗಾಗಿ ಶ್ರಾವಣ ಮಾಸಕ್ಕೆ ಹೂವಿನ ಬೆಲೆ ಹೆಚ್ಚಾಗಲಿದೆ. ಯಾವ ಹೂವಿಗೆ ಎಷ್ಟೆಷ್ಟು ಬೆಲೆ ಏರಿಕೆಯಾಗಲಿದೆ ಎಂಬುದನ್ನು ಇಲ್ಲಿ ತಿಳಿಯಿರಿ.

flower price hike

ಹಬ್ಬಗಳ ತಿಂಗಳು ಎಂದೇ ಖ್ಯಾತವಾಗಿರುವ ಶ್ರಾವಣ ಮಾಸ ಆರಂಭಕ್ಕೂ ಮುನ್ನವೇ ಮಾರುಕಟ್ಟೆಯಲ್ಲಿ ಹೂವಿನ ದರ ಏರಿಕೆ ಕಾಣುತ್ತಿದೆ. ಈ ಬಾರಿ ಶ್ರಾವಣದಲ್ಲಿ ಭಕ್ತರಿಗೆ ಹೂವಿನ ಬೆಲೆ ಏರಿಕೆ ಬಿಸಿ ತುಸು ಜೋರಾಗಿಯೇ ತಟ್ಟುತ್ತದೆ.

ಮುಖ್ಯವಾಗಿ ಹವಾಮಾನದಲ್ಲಿ ಬದಲಾವಣೆ & ಹೂವು ಬೆಳೆಯುವ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗಿರುವುದರಿಂದ ಹೂವು ಬರುವುದು ಕಡಿಮೆಯಾಗಿದೆ ಎಂದು ಹೇಳುತ್ತಿದ್ದಾರೆ ವ್ಯಾಪಾರಿಗಳು. ಮಳೆಯಿಂದ ಹೂವು ಬೇಗ ಹಾಳಾಗುತ್ತದೆ ಆದ್ದರಿಂದ ಖರೀದಿ ಮಾಡಿದ ದಿನವೇ ಮಾರುವ ಒತ್ತಡ ಇರಲಿದೆ. ಇಷ್ಟೆಲ್ಲ ಇದ್ದರೂ ಹೂವಿನ ದರ ಏರಿಕೆ ಕಾಣುತ್ತಿದೆ.

ಎಲ್ಲ ಹೂ ದುಬಾರಿ

ಕನಕಾಂಬರ, ಕಾಕಡ ಹೂವಿಗೆ ಜನರಿಂದ ಹೆಚ್ಚಿನ ಬೇಡಿಕೆ ಇದೆ. ಆದರೆ, ಅವುಗಳ ದರ ಮಾತ್ರ ಸದ್ಯ ಕೇಳುವಂತಿಲ್ಲ. 100-150 ರೂ. ಮಾರಾಟ ಕಾಣುತ್ತಿದ್ದ ಗೊಂಚಲು ಹೂ ದಿಢೀರ್‌ 250ರ ಆಸು ಪಾಸು ದರ ನಡೆದಿದೆ. ಕೆ.ಜಿ ಕನಕಾಂಬರ 800-1000 ರೂ. ಇದ್ದರೆ, ಕಾಕಡ 800 ರೂ. ಕೆಜಿ ದರ ಕಂಡು ಬರುತ್ತಿದೆ. ಕೆ.ಜಿ. ಸೇವಂತಿ 500-600 ರೂ. ಮಾರಾಟ ಕಾಣುತ್ತಿದೆ.

ಸ್ಥಳೀಯ ಹೂವಿಗೂ ಬೇಡಿಕೆ

ಜಿಲ್ಲೆಯಲ್ಲಿ ಸ್ಥಳೀಯವಾಗಿ ಕೇವಲ ಗುಲಾಬಿ ಹಾಗೂ ಚೆಂಡು ಹೂ ಮಾತ್ರ ದೊರೆಯುತ್ತವೆ. 2 ದಿನಗಳಲ್ಲಿ ಗುಲಾಬಿ ಹೂವಿನ ದರ ಎರಡರಷ್ಟು ಹೆಚ್ಚಳ ಕಂಡಿದೆ. 40-50 ಕೆ.ಜಿ. ಮಾರಾಟ ಕಾಣುತ್ತಿದ್ದ ಗುಲಾಬಿ, ಇದೀಗ 80-100 ರೂ. ಮಾರಾಟವಾಗುತ್ತಿದೆ. ಇದರ ಜತೆಗೆ 30 ರೂ. ಕೆ.ಜಿ. ಇದ್ದ ಚೆಂಡು ಹೂ 50 ರೂ.ಗೆ ಏರಿಕೆ ಕಂಡಿದೆ.

ಇನ್ನಷ್ಟು ಹೆಚ್ಚಳವಾಗುವ ಸಂಭವ

ಆಷಾಢ ಮಾಸದ ಕೊನೆ 3-4 ದಿನಗಳಿಂದ ಹೂವಿನ ದರ ಏರಿಕೆ ಕಾಣುತ್ತಿದೆ. ಇನ್ನು ಬಹುಬೇಡಿಕೆಯ ಶ್ರಾವಣ ಮಾಸದಲ್ಲಿ ಹೂವಿನ ಬೆಲೆ ಎಷ್ಟು ಏರಿಕೆಯಾಗಲಿದೆ? ಎಂಬ ಆತಂಕ ಈಗಾಗಲೇ ಗ್ರಾಹಕರಲ್ಲಿಎದುರಾಗಿದೆ. ಈ ಬಾರಿ ಬೇಸಿಗೆ ಬಿಸಿಲು ಜಾಸ್ತಿ ಇರುವುದರಿಂದ ಹೂವಿನ ನಾಟಿ ಕಮ್ಮಿಯಾಗಿದೆ.

ನಂತರ ನಾಟಿ ಮಾಡಿದ ಹೂವಿನ ಬೆಳೆ ಕೈಗೆ ಹತ್ತುವ ವೇಳೆಗೆ ಮಳೆ ಬಹಳಷ್ಟು ಕಡೆ ಹಾಳು ಮಾಡುತ್ತಿರುವುದು ವ್ಯಾಪಾರಿಗಳಲ್ಲೂ ಆತಂಕ ಮೂಡಿಸಿದೆ. ಶ್ರಾವಣದ ವರ ಮಹಾಲಕ್ಷ್ಮಿ ಹಬ್ಬದ ವೇಳೆಗೆ ಸದ್ಯದ ದರದ ಎರಡರಷ್ಟು ಹೂವಿನ ದರ ಆಗಬಹುದು ಎಂದು ಹೂವಿನ ವ್ಯಾಪಾರಿಗಳು ತಿಳಿಸಿದ್ದಾರೆ.

ಬೇರೆ ಜಿಲ್ಲೆಗಳ ಮೇಲೆ ಅವಲಂಬನೆ

ಕಲಬುರಗಿಯ ಹೂವಿನ ಮಾರುಕಟ್ಟೆ ಬೇರೆ ಜಿಲ್ಲೆಗಳಿಂದ ತರಿಸಿಕೊಳ್ಳುವ ಹೂವಿನ ಮೇಲೆ ಆಧಾರವಾಗಿದೆ. ಸ್ಥಳೀಯವಾಗಿ ಚೆಂಡು ಹೂ & ಗುಲಾಬಿ ಯಥೇಚ್ಛವಾಗಿ ದೊರೆಯುತ್ತವೆ. ಆದರೆ, ಉಳಿದ ಹೂವುಗಳು ಬೇರೆ ಜಿಲ್ಲೆಗಳಿಂದ ತರೆಸಿಕೊಳ್ಳಬೇಕು. ಕನಕಾಂಬರ, ಕಾಕಡ ಹೂವು ಶಿರಾ, ತುಮಕೂರಿನಿಂದ ಆಗಮಿಸುತ್ತವೆ. ವಾಸನೆ ಮಲ್ಲಿಗೆ ಹಿರೂರಿನಿಂದ ಆಗಮಿಸಿದರೆ, ಚಿತ್ರದುರ್ಗದಿಂದ ಬಿಳಿ & ಹಳದಿ ಸೇವಂತಿಗೆ ಆಗಮಿಸುತ್ತದೆ. ಇದು ಕೂಡ ದರದಲ್ಲಿ ಸಾಕಷ್ಟು ಹೆಚ್ಚಾಗಲು ಕಾರಣವಾಗಿದೆ.

  • ಕಲಬುರಗಿಯಲ್ಲಿ ಹೂವಿನ ದರ(ಕೆ.ಜಿ)
  • ಕನಕಾಂಬರ 800-1000 ರೂ.
  • ಗುಲಾಬಿ 70-90 ರೂ.
  • ಸೇವಂತಿಗೆ 500-600ರೂ.
  • ಕಾಕಡ 700-800 ರೂ.
  • ವಾಸನೆ ಮಲ್ಲಿಗೆ 600 ರೂ.

ಇತರೆ ವಿಷಯಗಳು

44,228 ಪೋಸ್ಟ್‌ಮ್ಯಾನ್‌ ಹುದ್ದೆಗೆ SSLC ಪಾಸಾದವರ ನೇಮಕ.! ಅರ್ಜಿಗೆ ಕೊನೆ 2 ದಿನ ಬಾಕಿ

ಗೃಹಲಕ್ಷ್ಮಿ ಜೂನ್, ಜುಲೈ ತಿಂಗಳ ಹಣ ಈ ದಿನ ಜಮಾ!


Share

Leave a Reply

Your email address will not be published. Required fields are marked *