rtgh
Headlines

ರೈತರಿಗೆ ಹೊಸ ಕಿಸಾನ್ ಕ್ರೆಡಿಟ್ ಕಾರ್ಡ್‌ ಘೋಷಣೆ.! 80 ಕೋಟಿ ಜನರಿಗೆ ಲಾಭ

Farmer Budget
Share

ಹಲೋ ಸ್ನೇಹಿತರೇ, ಕೃಷಿ ಕ್ಷೇತ್ರವನ್ನು ಉತ್ತೇಜಿಸಲು, ಸರ್ಕಾರವು ಬಜೆಟ್‌ನಲ್ಲಿ ಅನೇಕ ಪ್ರಮುಖ ಘೋಷಣೆಗಳನ್ನು ಮಾಡಿದೆ. ಇದರಲ್ಲಿ ಜನ್ ಸಮರ್ಥ್ ಕಿಸಾನ್ ಕ್ರೆಡಿಟ್ ಕಾರ್ಡ್ ಘೋಷಣೆ ಬಹಳ ಮುಖ್ಯವಾಗಿದೆ. ಈ ಯೋಜನೆ ಮೂಲಕ 80 ಕೋಟಿ ಜನರಿಗೆ ಲಾಭ ದೊರಕಲಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ನಮ್ಮ ಲೇಖನವನ್ನು ಓದಿ.

Farmer Budget

ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡುವ ಸಲುವಾಗಿ ಈ ಬಾರಿಯ ಬಜೆಟ್ ನಲ್ಲಿ ಸರ್ಕಾರ ಕೆಲವು ಘೋಷಣೆಗಳನ್ನು ಮಾಡಿದೆ.  ಇದರ ಅಡಿಯಲ್ಲಿ, ಹೊಸ ರೀತಿಯ ಜನ್ ಸಮರ್ಥ್ ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ವಿತರಿಸುವ ಬಗ್ಗೆ ಸರ್ಕಾರ ಘೋಷಿಸಿದೆ.ಈ ಯೋಜನೆಯು ಐದು ರಾಜ್ಯಗಳಲ್ಲಿ ಮೊದಲು ಬಿಡುಗಡೆಯಾಗಲಿದೆ. 

ಇದರೊಂದಿಗೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು 5 ವರ್ಷಗಳವರೆಗೆ ವಿಸ್ತರಿಸಲಾಗಿದೆ ಎನ್ನುವುದನ್ನು ಕೂಡಾ ಬಜೆಟ್ ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಈ ಯೋಜನೆಯ ವಿಸ್ತರಣೆಯಿಂದಾಗಿ 80 ಕೋಟಿ ಜನರಿಗೆ ಅನುಕೂಲವಾಗಲಿದೆ.

ರೈತರಿಗೆ ನೀಡಿದ್ದೆನು ?

  • ಉತ್ಪಾದನೆಯನ್ನು ಹೆಚ್ಚಿಸಲು ತರಕಾರಿ ಉತ್ಪಾದನಾ ಕ್ಲಸ್ಟರ್‌ಗಳಿಗೆ ದೊಡ್ಡ ಪ್ರಮಾಣದಲ್ಲಿ ಉತ್ತೇಜನ .
  • ರಾಜ್ಯಗಳ ಸಹಭಾಗಿತ್ವದಲ್ಲಿ ಕೃಷಿಗಾಗಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯಕ್ಕೆ ಒತ್ತು . 
  • ಹವಾಮಾನ ಸ್ನೇಹಿ ಬೀಜಗಳನ್ನು ಅಭಿವೃದ್ಧಿಪಡಿಸಲು ಸಂಶೋಧನೆಯ ಸಮಗ್ರ ಪರಿಶೀಲನೆ . 
  • ಇನ್ನೆರಡು ವರ್ಷಗಳಲ್ಲಿ ದೇಶಾದ್ಯಂತ ಒಂದು ಕೋಟಿ ರೈತರಿಗೆ ನೈಸರ್ಗಿಕ ಕೃಷಿ ಅಳವಡಿಸಿಕೊಳ್ಳಲು ಉತ್ತೇಜನ ನೀಡಲಾಗುವುದು. 
  • ತರಕಾರಿ ಉತ್ಪಾದನೆ ಮತ್ತು ಪೂರೈಕೆ ಸರಪಳಿಗಾಗಿ ಹೆಚ್ಚಿನ ಎಫ್‌ಪಿಒಗಳನ್ನು ರಚಿಸಲಾಗುವುದು. 
  • ಕೃಷಿ ಭೂಮಿ ಮತ್ತು ರೈತರ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲು ಒತ್ತು ನೀಡಲಾಗುವುದು.
  • ಸರ್ಕಾರಿ ಸಿಗಡಿ ಸಾಕಾಣಿಕೆ ಮತ್ತು ಮಾರುಕಟ್ಟೆಗೆ ಹಣಕಾಸು ಒದಗಿಸುತ್ತದೆ.ಗ್ರಾಮೀಣಾಭಿವೃದ್ಧಿಯಾ ದೃಷ್ಟಿಯಿಂದ 2.66 ಲಕ್ಷ ಕೋಟಿ ರೂ. ವೆಚ್ಚದಲ್ಲಿ  100 NABL ಮಾನ್ಯತೆ ಪಡೆದ ಆಹಾರ ಪರೀಕ್ಷಾ ಪ್ರಯೋಗಾಲಯಗಳನ್ನು ದೇಶಾದ್ಯಂತ ಸ್ಥಾಪಿಸಲಾಗುವುದು. 

ಆದಿವಾಸಿಗಳಿಗೆ ಸುಧಾರಿತ ಗ್ರಾಮ ಅಭಿಯಾನ

ಬುಡಕಟ್ಟು ಸಮುದಾಯಗಳ ಆರ್ಥಿಕ-ಸಾಮಾಜಿಕ ಸ್ಥಿತಿಯನ್ನು ಸುಧಾರಿಸಲು  ಆದಿವಾಸಿಗಳಿಗೆ ಸುಧಾರಿತ ಗ್ರಾಮ ಅಭಿಯಾನವನ್ನು  ಬಜೆಟ್‌ನಲ್ಲಿ ಘೋಷಿಸಲಾಗಿದೆ. ಬುಡಕಟ್ಟು ಪ್ರಾಬಲ್ಯದ ಗ್ರಾಮಗಳು ಮತ್ತು ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿನ ಬುಡಕಟ್ಟು ಕುಟುಂಬಗಳನ್ನು ಸಂಪೂರ್ಣವಾಗಿ ತನ್ನ ವ್ಯಾಪ್ತಿಗೆ ತರುವುದು ಈ ಕಾರ್ಯಕ್ರಮದ ಗುರಿಯಾಗಿದೆ. ಐದು ಕೋಟಿ ಬುಡಕಟ್ಟು ಜನರಿಗೆ ಅನುಕೂಲವಾಗಲಿರುವ ಈ ಕಾರ್ಯಕ್ರಮದ ವ್ಯಾಪ್ತಿಗೆ 63 ಸಾವಿರ ಬುಡಕಟ್ಟು ಪ್ರಾಬಲ್ಯದ ಗ್ರಾಮಗಳು ಬರಲಿವೆ ಎಂದರು.

ಇತರೆ ವಿಷಯಗಳು

ಪದವೀಧರರಿಗೆ ಸಿಹಿ ಸುದ್ದಿ: ಯುವನಿಧಿಗೆ ಅರ್ಜಿ ಆಹ್ವಾನ!

ಈ ಕಾರ್ಡ್‌ ಇದ್ದವರಿಗೆ 2 ಲಕ್ಷ ವಿಮೆ ಜೊತೆಗೆ 3 ಸಾವಿರ ರೂ. ಸಹಾಯಧನ.!


Share

Leave a Reply

Your email address will not be published. Required fields are marked *