ಹಲೋ ಸ್ನೇಹಿತರೇ, UPSC ESIC ಹಾಸ್ಪಿಟಲ್‌ಗಳಲ್ಲಿ ನೇಮಕ ಮಾಡಲು ನರ್ಸಿಂಗ್ ಆಫೀಸರ್ ಪೋಸ್ಟ್‌ಗಳಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 1930 ಖಾಲಿ ಹುದ್ದೆಗಳಿದ್ದು. ಆಸಕ್ತರು ಮತ್ತು ಅರ್ಹತೆ ಹೊಂದಿದವರು ಎಲ್ಲಾ ಮಾಹಿತಿಗಳನ್ನು ತಿಳಿದು ಅರ್ಜಿಯನ್ನು ಸಲ್ಲಿಸಿ.
ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ ಬರೋಬ್ಬರಿ 1930 ನರ್ಸಿಂಗ್ ಆಫೀಸರ್ ಹುದ್ದೆಗಳನ್ನು ಕಾರ್ಮಿಕರ ರಾಜ್ಯ ವಿಮಾ ನಿಗಮದಲ್ಲಿ ನೇಮಕ ಮಾಡಲು, ಅಧಿಸೂಚನೆ ಹೊರಡಿಸಲಾಗಿದೆ. ಕಾರ್ಮಿಕ & ಉದ್ಯೋಗ ಸಚಿವಾಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸುವ ESIC’ ಕಚೇರಿಯಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡಲಾಗುವುದು.
ನೇಮಕಾತಿ ಪ್ರಾಧಿಕಾರ : ಕೇಂದ್ರ ಲೋಕಸೇವಾ ಆಯೋಗ
ಉದ್ಯೋಗ ಇಲಾಖೆ : ರಾಜ್ಯ ಕಾರ್ಮಿಕರ ವಿಮಾ ನಿಗಮ
ಹುದ್ದೆ ಹೆಸರು : ನರ್ಸಿಂಗ್ ಆಫೀಸರ್
ಒಟ್ಟು ಹುದ್ದೆಗಳ ಸಂಖ್ಯೆ : 1930
ವೇತನ ಶ್ರೇಣಿ: Rs.44,900- 1,42,400/- per month
ಒಟ್ಟು 1930 ಹುದ್ದೆಗಳ ಪೈಕಿ ಸಾಮಾನ್ಯ ಅರ್ಹತೆಯವರಿಗೆ 892, ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ 193, ಇತರೆ ಹಿಂದುಳಿದ ವರ್ಗಗಳಿಗೆ 446, SC – 235, ST- 164 ಹುದ್ದೆಗಳಿವೆ. ವಿಶೇಷ ಚೇತನರಿಗೆ -168.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾಗುವವರಿಗೆ 7ನೇ ವೇತನ ಆಯೋಗದ ಪ್ರಕಾರ ಲೆವೆಲ್ 7 ವೇತನ ಶ್ರೇಣಿಯು ಇರುತ್ತದೆ.
Contents
ನರ್ಸಿಂಗ್ ಆಫೀಸರ್ ಹುದ್ದೆಗೆ ವಿದ್ಯಾರ್ಹತೆ
ಕಾರ್ಮಿಕರ ರಾಜ್ಯ ವಿಮಾ ನಿಗಮದ ನರ್ಸಿಂಗ್ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವವರು 4 ವರ್ಷದ B.Sc (ನರ್ಸಿಂಗ್) ಪದವಿ ಓದಿರಬೇಕು/ ಜೆನೆರಲ್ ನರ್ಸಿಂಗ್ & ಮಿಡ್‌ವೈಫೆರಿ ಪದವಿ ಓದಿರಬೇಕಾಗುತ್ತದೆ.
ವಯಸ್ಸಿನ ಅರ್ಹತೆಗಳು
ಸಾಮಾನ್ಯ ಅರ್ಹತೆಗಳು, EWS ಅಭ್ಯರ್ಥಿಗಳಿಗೆ – 30 ವರ್ಷ, ಇತರೆ ಹಿಂದುಳಿದ ವರ್ಗಗಳಿಗೆ – 33 ವರ್ಷ, ಪರಿಶಿಷ್ಟ ಜಾತಿ & ಪರಿಶಿಷ್ಟ ಪಂಗಗಳಿಗೆ – 35 ವರ್ಷ, ವಿಶೇಷ ಚೇತನರಿಗೆ 40 ವರ್ಷ ಗರಿಷ್ಠ ವಯಸ್ಸಿನ ಅರ್ಹತೆ ನಿಗದಿ ಮಾಡಲಾಗಿದೆ.
ಅರ್ಜಿ ಸಲ್ಲಿಸುವ UPSC ವೆಬ್‌ಸೈಟ್ ವಿಳಾಸ : https://upsconline.nic.in
ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ಡೀಟೇಲ್ಡ್ ಅಧಿಸೂಚನೆ ವೆಬ್‌ಸೈಟ್ ವಿಳಾಸ https://www.upsc.gov.in ನಲ್ಲಿ ಪ್ರಕಟಣೆ ಮಾಡಲಾಗಿದೆ.
ಪ್ರಮುಖ ದಿನಾಂಕಗಳು
ಅಪ್ಲಿಕೇಶನ್ ಸ್ವೀಕರಿಸುವ ಪ್ರಾರಂಭಿಕ ದಿನಾಂಕ : 07-03-2024
ಅಪ್ಲಿಕೇಶನ್ ಸಲ್ಲಿಸಲು ಕೊನೆಯ ದಿನಾಂಕ : 27-03-2024 ರ ಸಂಜೆ 06 ರವರೆಗೆ.
ಅರ್ಜಿ ತಿದ್ದುಪಡಿ ಮಾಡಲು ಅವಕಾಶ : ಮಾರ್ಚ್ 28 ರಿಂದ ಏಪ್ರಿಲ್ 03.
ಇತರೆ ವಿಷಯಗಳು
ರಾಜ್ಯ ಸರ್ಕಾರಿ ನೌಕರರಿಗೂ ಸಿಕ್ತು ಸಿಹಿ ಸುದ್ದಿ.! ತುಟ್ಟಿಭತ್ಯೆಯಲ್ಲಿ ಶೇ.4 ರಷ್ಟು ಹೆಚ್ಚಳ
ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್.!! ಹೊಸ ಕಾರ್ಡ್ ಜೊತೆಗೆ ಅನ್ನಭಾಗ್ಯ ಹಣ ಜಮಾ!