rtgh
Headlines

ವಾಹನ ಮಾಲೀಕರಿಗೆ ಶಾಕಿಂಗ್ ನ್ಯೂಸ್: ಹೆಚ್ಚಾಯ್ತು ವಾಹನಗಳ ಎಮಿಷನ್ ಟೆಸ್ಟಿಂಗ್ ದರ

Emission Test Price hike
Share

ಹಲೋ ಸ್ನೇಹಿತರೇ, ರಾಜ್ಯದ ವಾಹನ ಮಾಲೀಕರಿಗೆ ಶಾಕಿಂಗ್ ನ್ಯೂಸ್, ವಾಹನಗಳ ಎಮಿಷನ್ ಟೆಸ್ಟಿಂಗ್ ದರ ಏರಿಕೆ. ಎಷ್ಟು ಏರಿಕೆಯಾಗಲಿದೆ ಮತ್ತು ಎಂದಿನಿಂದ ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಮ್ಮ ಲೇಖನದಲ್ಲಿತ ತಿಳಿಯಿರಿ.

Emission Test Price hike

ಹಣದುಬ್ಬರದಿಂದಾಗಿ ತತ್ತರಿಸಿರುವ ಜನರಿಗೆ ಇನ್ಮುಂದೆ ಪೆಟ್ರೋಲ್-ಡೀಸೆಲ್ ಜೊತೆಗೆ ಮತ್ತೊಂದು ಹೊರೆ ಭಾರವಾಗಲಿದೆ. ಕರ್ನಾಟಕದಲ್ಲಿ ವಾಹನ ಮಾಲೀಕರು  ‘ಮಾಲಿನ್ಯ ನಿಯಂತ್ರಣದಲ್ಲಿದೆ ಎಂಬ ಪ್ರಮಾಣಪತ್ರ’ವನ್ನು ಪಡೆಯಲು ನಡೆಸಲಾಗುವ ವಾಹನಗಳ ಎಮಿಷನ್ ಟೆಸ್ಟಿಂಗ್ ಗಾಗಿ ಹೆಚ್ಚಿನ ಶುಲ್ಕವನ್ನು ಪಾವತಿಸಬೇಕಾಗಬಹುದು.

ಕರ್ನಾಟಕ ಎಮಿಷನ್ ಟೆಸ್ಟಿಂಗ್ ಸೆಂಟರ್ ಓನರ್ ಅಸೋಸಿಯೇಷನ್ ಈ ಕುರಿತಂತೆ ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಅವರಿಗೆ ಮನವಿ ಸಲ್ಲಿಸಿದ್ದು, ಇದರಲ್ಲಿ ಪಿ.ಯು.ಸಿ. (ಪೊಲ್ಯೂಷನ್ ಅಂಡರ್ ಕಂಟ್ರೋಲ್) ಪ್ರಮಾಣಪತ್ರ ನೀಡಿಕೆ ಶುಲ್ಕವನ್ನು ಪರಿಷ್ಕರಿಸುವಂತೆ ಮನವಿ ಮಾಡಿದೆ. 

ಈ ಹಿಂದೆ ಒಂದು ವಾಹನಕ್ಕೆ ಎಮಿಷನ್ ಟೆಸ್ಟ್ ಮಾಡಿದರೆ ಎಮಿಷನ್ ಟೆಸ್ಟಿಂಗ್ ಸೆಂಟರ್ ಗಳಿಂದ ಸರ್ಕಾರಕ್ಕೆ 3 ರೂಪಾಯಿ 25 ಪೈಸೆ ನೀಡಬೇಕಿತ್ತು. ಇನ್ಮುಂದೆ ಸರ್ಕಾರಕ್ಕೆ 13 ರೂ 80 ಪೈಸೆ ನೀಡಬೇಕಂತೆ. ಹಾಗಾಗಿ ಎಮಿಷನ್ ಟೆಸ್ಟಿಂಗ್ ಸೆಂಟರ್ ಮಾಲೀಕರು ದರ ಹೆಚ್ಚಳಕ್ಕೆ ಪಟ್ಟು ಹಿಡಿದಿದ್ದಾರೆ.

ಪಿ.ಯು.ಸಿ. ಪ್ರಮಾಣಪತ್ರ ದರ ಹೆಚ್ಚಳ

ವಾಸ್ತವವಾಗಿ, ಪ್ರಸ್ತುತ ವಾಯುಮಾಲಿನ್ಯ ತಪಾಸಣಾ ಕೇಂದ್ರಗಳಲ್ಲಿ ವಾಹನಗಳ ತಪಾಸಣೆ ನಡೆಸಿ ನೀಡಲಾಗುವ ಪ್ರಮಾಣಪತ್ರಗಳ ಶುಲ್ಕ ದ್ವಿಚಕ್ರ ವಾಹನಗಳಿಗೆ ರೂ. 65/-, ತ್ರಿಚಕ್ರ ವಾಹನಗಳಿಗೆ ರೂ. 75/-, ನಾಲ್ಕು ಚಕ್ರದ ಪೆಟ್ರೋಲ್ ವಾಹನಗಳಿಗೆ ರೂ. 115/-, ಮತ್ತು ಡೀಸೆಲ್ ಚಾಲಿತ ವಾಹನಗಳಿಗೆ ರೂ. 160/- ನಿಗದಿಯಾಗಿದೆ.

ಸದ್ಯ ಹಣದುಬ್ಬರದಿಂದಾಗಿ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿದ್ದು, ಕಳೆದ 2-3 ವರ್ಷಗಳಿಂದ ವಾಹನಗಳಿಂದುಂಟಾಗುವ ವಾಯುಮಾಲಿನ್ಯ ಹತೋಟಿಯಲ್ಲಿದೆ ಎಂದು ಸರ್ಟಿಫಿಕೇಟ್ ನೀಡುವ ಪಿ.ಯು.ಸಿ. ಪ್ರಮಾಣಪತ್ರದ ದರಗಳನ್ನು ಪರಿಷ್ಕರಿಸಿಲ್ಲ. ಹಾಗಾಗಿ ಪಿ.ಯು.ಸಿ. ಪ್ರಮಾಣಪತ್ರಗಳ ಶುಲ್ಕವನ್ನು  ದ್ವಿಚಕ್ರ ವಾಹನಗಳಿಗೆ ರೂ. 110/-, ತ್ರಿಚಕ್ರ ವಾಹನಗಳಿಗೆ ರೂ. 100/-, ನಾಲ್ಕು ಚಕ್ರದ ಪೆಟ್ರೋಲ್ / ಸಿ‌ಎನ್‌ಜಿ ವಾಹನಗಳಿಗೆ ರೂ. 2005/-, & ಡೀಸೆಲ್ ಚಾಲಿತ ವಾಹನಗಳಿಗೆ ರೂ. 250/-  ದರ ಪರಿಷ್ಕರಿಸುವಂತೆ ಕರ್ನಾಟಕ ಎಮಿಷನ್ ಟೆಸ್ಟಿಂಗ್ ಸೆಂಟರ್ ಓನರ್ ಅಸೋಸಿಯೇಷನ್ ಸಾರಿಗೆ ಇಲಾಖೆಗೆ ಮನವಿ ಮಾಡಲಾಗಿದೆ. 

ಎಮಿಷನ್ ಟೆಸ್ಟ್

ರಾಜ್ಯದಲ್ಲಿದೆ ಒಟ್ಟು 3 ಕೋಟಿಗೂ ಹೆಚ್ಚು ವಾಹನಗಳಿವೆ. ಅದರಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಒಂದು ಕೋಟಿ ಮೂವತ್ತು ಲಕ್ಷ ವಾಹನಗಳಿವೆ‌. ಕಾರು, ಬೈಕ್,  ಲಾರಿ ಹಾಗೂ  ಬಸ್ ಗಳಿಗೆ ಪ್ರತಿ ಆರು ತಿಂಗಳಿಗೊಮ್ಮೆ ಎಮಿಷನ್ ಟೆಸ್ಟ್ ಮಾಡಿಸಬೇಕು. 

ಎಮಿಷನ್ ಟೆಸ್ಟ್ ಸರ್ಟಿಫಿಕೇಟ್

ಎಮಿಷನ್ ಟೆಸ್ಟ್ ಸರ್ಟಿಫಿಕೇಟ್ ಇಲ್ಲ ಅಂದ್ರೆ ಟ್ರಾಫಿಕ್ ಪೋಲಿಸರು 500 ರೂ.ವರೆಗೂ ದಂಡ ವಿಧಿಸುತ್ತಾರೆ. ಎಮಿಷನ್ ಸರ್ಟಿಫಿಕೇಟ್ ಇಲ್ಲಾಂದ್ರೆ ಆರ್ಟಿಓದಿಂದ ವಾಹನಗಳಿಗೆ ಎಫ್‌ಸಿ ಕೂಡ ಸಿಗುವುದಿಲ್ಲ. 

ಇತರೆ ವಿಷಯಗಳು

ರೈತರಿಗೆ ಸರ್ಕಾರಿ ಯೋಜನೆಗಳ ಸೌಲಭ್ಯ ರದ್ದು.! ಈ ಕೆಲಸಕ್ಕೆ ಇನ್ನೂ 7 ದಿನ ಮಾತ್ರ ಬಾಕಿ

FD ಹೊಂದಿರುವವರಿಗೆ ವಿಶೇಷ ಸುದ್ದಿ! ಈ ಕೆಲಸ ಮಾಡದಿದ್ದರೆ ಕಟ್ಟಬೇಕು ತೆರಿಗೆ


Share

Leave a Reply

Your email address will not be published. Required fields are marked *