ಹಲೋ ಸ್ನೇಹಿತರೇ, ರಾಜ್ಯದಲ್ಲಿ ವಾಹನ ಚಾಲಕರಿಗೆ ನೀಡಲಾಗುವ ಡಿಎಲ್ ಮತ್ತು ವಾಹನ ನೋಂದಣಿ ಪ್ರಮಾಣ ಪತ್ರ ಸ್ವರೂಪ ಬದಲಾಯಿಸಲಾಗುತ್ತಿದ್ದು, ಮೈಕ್ರೋಚಿಪ್ ಜೊತೆಗೆ ಕ್ಯೂಆರ್ ಕೋಡ್ ಅಳವಡಿಸಿದ ಡಿಎಲ್ ಮತ್ತು ಆರ್ ಸಿ ಸ್ಮಾರ್ಟ್ ಕಾರ್ಡ್ ವಿತರಿಸಲು ರಾಜ್ಯ ಸಾರಿಗೆ ಇಲಾಖೆ ನಿರ್ಧರಿಸಿದೆ.
ದೇಶಾದ್ಯಂತ ಏಕರೂಪದ ವಾಹನ ಚಾಲನಾ ಪರವಾನಿಗೆ, ವಾಹನ ನೋಂದಣಿ ಪ್ರಮಾಣ ಪತ್ರ ಜಾರಿಗೆ ಕೇಂದ್ರದಿಂದ ನಿಯಮ ತಂದಿದ್ದು, ರಾಜ್ಯದಲ್ಲಿ ಆರ್.ಸಿ., ಡಿಎಲ್ ಸ್ಮಾರ್ಟ್ ಕಾರ್ಡ್ ಗಳನ್ನು ವಿತರಿಸಲು ರಾಜ್ಯ ಸಾರಿಗೆ ಇಲಾಖೆ ಮುಂದಾಗಿದೆ.
ಡಿಎಲ್ ಮತ್ತು ಆರ್.ಸಿ.ಗಳಲ್ಲಿ ಕ್ಯೂಆರ್ ಕೋಡ್ ಇರಲಿದ್ದು, ಅದನ್ನು ಸ್ಕ್ಯಾನ್ ಮಾಡಿದರೆ ವಾಹನ ಸಂಪೂರ್ಣ ವಿವರ ಮತ್ತು ಚಾಲಕನ ವಿವರ ಸಿಗಲಿದೆ. ವಾಹನಗಳ ಮೇಲೆ ಪ್ರಕರಣಗಳ ಕುರಿತು ಮಾಹಿತಿಯೂ ಸಿಗಲಿದೆ.
ಇದನ್ನೂ ಸಹ ಓದಿ : ರೇಷನ್ ಕಾರ್ಡ್ ತಿದ್ದುಪಡಿಗೆ ಈ ದಾಖಲೆಗಳು ಕಡ್ಡಾಯ!
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ರೂಪಿಸಿರುವ ನಿಯಮ ಅನುಷ್ಠಾನಕ್ಕೆ ರಾಜ್ಯ ಸಾರಿಗೆ ಇಲಾಖೆ ಮುಂದಾಗಿದೆ. ಕ್ಯೂಆರ್ ಕೋಡ್ ಇರುವ ಡಿಎಲ್ ಮತ್ತು ಆರ್.ಸಿ. ಮುದ್ರಿಸಿ ವಿತರಿಸಲು ಟೆಂಡರ್ ಪ್ರಕ್ರಿಯೆ ನಡೆಸಲಾಗಿದ್ದು, ಈ ತಿಂಗಳಾಂತ್ಯಕ್ಕೆ ಗುತ್ತಿಗೆದಾರರನ್ನು ಅಂತಿಮಗೊಳಿಸಿ ಸೆಪ್ಟೆಂಬರ್ ನಿಂದ ಹೊಸ ರೀತಿಯ ಡಿಎಲ್ ಮತ್ತು ಆರ್.ಸಿ. ವಿತರಿಸಲು ಸಾರಿಗೆ ಇಲಾಖೆ ಕ್ರಮ ಕೈಗೊಂಡಿದೆ.
ಡಿಎಲ್ ನಲ್ಲಿ ಚಾಲಕನ ಹೆಸರು, ಜನ್ಮ ದಿನಾಂಕ, ವಿಳಾಸ, ರಕ್ತದ ಗುಂಪು ಇರುತ್ತಿದ್ದವು, ಇದರ ಜೊತೆಗೆ ಡಿಎಲ್ ಹೊಂದಿರುವವರು ಅಂಗಾಂಗದ ದಾನಿಯಾಗಿದ್ದಾರೆಯೇ ಎಂಬುದನ್ನು ನಮೂದಿಸಲಾಗುವು. ಡಿಎಲ್ ಹೊಂದಿದವರ ಮೊಬೈಲ್ ಸಂಖ್ಯೆ, ಅವರ ಸಂಬಂಧಿಕರ ಅಥವಾ ತಕ್ಷಣ ಕರೆ ಮಾಡಬೇಕಾದ ಮೊಬೈಲ್ ಸಂಖ್ಯೆಯನ್ನು ನಮೂದಿಸಲಾಗುತ್ತದೆ.
ಇತರೆ ವಿಷಯಗಳು:
PUC ಪಾಸ್ ಆದವರಿಗೆ ಸಿಗಲಿದೆ 20 ಸಾವಿರ ಸ್ಕಾಲರ್ಶಿಪ್! ಈ ರೀತಿ ಫಾರಂ ಭರ್ತಿ ಮಾಡಿ
SBI ಖಾತೆದಾರರಿಗೆ ಎಚ್ಚರಿಕೆ ನೀಡಿದ ಸರ್ಕಾರ.!
ರಾಜ್ಯದಲ್ಲಿ ಹೆಚ್ಚಾಗಲಿದೆ ಮಳೆ! ಈ ಭಾಗದ ಜನರಿಗೆ ಭೂ ಕುಸಿತದ ಎಚ್ಚರಿಕೆ..!