ಹಲೋ ಸ್ನೇಹಿತರೇ, 10ನೇ ತರಗತಿ ಉತ್ತೀರ್ಣರಾದವರಿಗೆ ರಕ್ಷಣಾ ಸಚಿವಾಲಯದಲ್ಲಿ ಪರೀಕ್ಷೆ ಇಲ್ಲದೇ ನೇರವಾಗಿ ಉದ್ಯೋಗವನ್ನು ಪಡೆಯಲು ಅವಕಾಶವಿದೆ. ಇದಕ್ಕಾಗಿ ಆಸಕ್ತ & ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಭೇಟಿ ನೀಡುವ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ.. ಹೆಚ್ಚಿನ ವಿವರಗಳಿಗಾಗಿ ಲೇಖನವನ್ನು ಸಂಪೂರ್ಣ ಓದಿ.
ನೀವು 10ನೇ ತರಗತಿ ಉತ್ತೀರ್ಣರಾಗಿದ್ದರೆ ಯಾವುದೇ ಪರೀಕ್ಷೆಯಿಲ್ಲದೆ ನೇರವಾಗಿ ಸರ್ಕಾರಿ ಉದ್ಯೋಗ ಪಡೆಯಲು ಉತ್ತಮ ಅವಕಾಶ. ರಕ್ಷಣಾ ಸಚಿವಾಲಯವು ಅಗ್ನಿಶಾಮಕ ಸಿಬ್ಬಂದಿಯ ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಜಿ ಪ್ರಕ್ರಿಯೆಯನ್ನು ಆರಂಭಿಸಿದೆ. ಆಸಕ್ತ & ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ mod.gov.in ಗೆ ಭೇಟಿ ನೀಡಿ.
Contents
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ:
23 ಮೇ 2024 ಅರ್ಜಿ ಸಲ್ಲಿಸಲು ಕೊನೆ ದಿನಾಂಕ.
ವಯೋಮಿತಿ:
ರಕ್ಷಣಾ ಸಚಿವಾಲಯದ ಅಗ್ನಿಶಾಮಕ ಸಿಬ್ಬಂದಿಯ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳಿಗೆ ವಯಸ್ಸು 56 ವರ್ಷಕ್ಕಿಂತ ಹೆಚ್ಚಿಗೆ ಇರಬಾರದು.
ಶೈಕ್ಷಣಿಕ ಅರ್ಹತೆ:
ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ 10 ನೇ ತರಗತಿಯಲ್ಲಿ ಪಾಸಾಗಿರಬೇಕು.
ಪೋಸ್ಟ್‌ಗಳ ವಿವರಗಳು:
ಈ ನೇಮಕಾತಿಯಡಿಯಲ್ಲಿ, ಅರ್ಹ ಅಭ್ಯರ್ಥಿಗಳನ್ನು ಒಟ್ಟು 40 ಹುದ್ದೆಗಳಿಗೆ ನೇಮಕ ಮಾಡಲಾಗುವುದು. ರಕ್ಷಣಾ ಸಚಿವಾಲಯವು ಕಣ್ಣೂರು & ಕೊಚ್ಚಿಯಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
ವಲಯವಾರು ಹುದ್ದೆಗಳ ವಿವರ:
ಕಣ್ಣೂರಿನ ಒಟ್ಟಾರೆ ಹುದ್ದೆಗಳು- 02
ಕೊಚ್ಚಿಯಲ್ಲಿ ಒಟ್ಟು ಹುದ್ದೆಗಳು- 38
ವೇತನ ವಿವರ:
ಹಂತ 2 ರ ಪ್ರಕಾರ, ಆಯ್ಕೆಯಾದ ಅಭ್ಯರ್ಥಿಗಳಿಗೆ 19,900 ರೂ.ಗಳಿಂದ 63,200 ರೂ.ವರೆಗಿನ ವೇತನವನ್ನು ನೀಡಲಾಗುತ್ತದೆ.
ನೇಮಕಾತಿ ಪ್ರಕ್ರಿಯೆ?
ದೈಹಿಕ ಸಾಮರ್ಥ್ಯ ಪರೀಕ್ಷೆ & ದಾಖಲೆ ಪರಿಶೀಲನೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಇದಕ್ಕಾಗಿ ಯಾವುದೇ ಲಿಖಿತ ಪರೀಕ್ಷೆಯನ್ನು ಇರುವುದಿಲ್ಲಾ. ಅರ್ಜಿ ಸಲ್ಲಿಸಿದ ನಂತರ, ಅರ್ಹ ಅಭ್ಯರ್ಥಿಗಳನ್ನು ದೈಹಿಕ ಪರೀಕ್ಷೆ & ದಾಖಲೆಗಳ ಪರಿಶೀಲನೆಗೆ ಕರೆಯಲಾಗುವುದು. ಇದಕ್ಕಾಗಿ ಅಭ್ಯರ್ಥಿಗಳಿಗೆ ದಿನಾಂಕವನ್ನು ಮೊದಲೇ ತಿಳಿಸಲಾಗುತ್ತದೆ.
ಅರ್ಹ, ಆಸಕ್ತ ಅಭ್ಯರ್ಥಿಗಳು ಈ ರೀತಿ ಅರ್ಜಿ ಸಲ್ಲಿಸಿ:
ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಅಧಿಕೃತ ವೆಬ್‌ಸೈಟ್ mod.gov.in ನಲ್ಲಿ ನೀಡಲಾದ ಫಾರ್ಮ್ಯಾಟ್ ಡೌನ್‌ಲೋಡ್ ಮಾಡಿಕೊಳ್ಳಿ. ನಂತರ ಅದರ ಪ್ರಿಂಟ್ ಔಟ್ ತೆಗೆದುಕೊಳ್ಳಿ, ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಅದರಲ್ಲಿ ಭರ್ತಿ ಮಾಡಿ. ಬಳಿಕ ಎಲ್ಲಾ ಕಡ್ಡಾಯ ದಾಖಲೆಗಳೊಂದಿಗೆ ಕೊನೆಯ ದಿನಾಂಕಕ್ಕು ಮೊದಲು ಸ್ಪೀಡ್ ಪೋಸ್ಟ್ ಮೂಲಕ ಆ ಅರ್ಜಿಯನ್ನು ಫ್ಲಾಗ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್, ಹೆಡ್‌ಕ್ವಾರ್ಟರ್ಸ್ ಸದರ್ನ್ ನೇವಲ್ ಕಮಾಂಡ್ ನೇವಲ್ ಬೇಸ್, ಕೊಚ್ಚಿ – 682004 ಈ ವಿಳಾಸಕ್ಕೆ ಕಳುಹಿಸಬೇಕು.
ಇತರೆ ವಿಷಯಗಳು
2023-24ನೇ ಸಾಲಿನ ಪ್ರಥಮ ಪಿಯುಸಿ ಪೂರಕ ಪರೀಕ್ಷೆ ವೇಳಾಪಟ್ಟಿ ಪ್ರಕಟ.!
ಬಸ್ ಪ್ರಯಾಣ ಮಾಡುವವರಿಗೆ ಕಟ್ಟೆಚ್ಚರ.!! ಈ ನಿಯಮ ಉಲ್ಲಂಘಿಸಿದರೆ ಬೀಳುತ್ತೆ ದಂಡ