2024-25ನೇ ಸಾಲಿನ ಆಯವ್ಯಯದ ಭಾಷಣದಲ್ಲಿ ಘೋಷಣೆ ಮಾಡಿದಂತೆ ರೈತ ಮಹಿಳೆಯರಲ್ಲಿ ಹೈನುಗಾರಿಕೆಯನ್ನು ಪ್ರೋತ್ಸಾಹಿಸಲು ಹಸು, ಎಮ್ಮೆಯ ಖರೀದಿಗೆ ಪಡೆಯುವ ಸಾಲವನ್ನು ಸರಿಯಾದ ಸಮಯಕ್ಕೆ ಮರು ಪಾವತಿಯನ್ನು ಮಾಡುವ ಮಹಿಳೆಯರಿಗೆ ರಾಜ್ಯ ಸರ್ಕಾರದಿಂದ ಶೇ.6ರ ಬಡ್ಡಿಯ ಸಹಾಯಧನವನ್ನು ನೀಡುವ ಯೋಜನೆಯ ಕಾರ್ಯಕ್ರಮವನ್ನು ಅನುಮೋದನೆಯಾಗಿದೆ.
ಸರ್ಕಾರದಿಂದ ಅನುಮೋದನೆಯಾಗಿರುವಂತೆ ಕಾರ್ಯಕ್ರಮವು ಸರ್ಕಾರದ ಮಾರ್ಗಸೂಚಿಯನ್ವಯವಾಗಿ ಹಮ್ಮಿಕೊಳ್ಳಲಾಗಿದ್ದು, ತಾಲ್ಲೂಕುವಾರು ಗುರಿಯನ್ನು ನಿಗದಿಪಡಿಸಲಾಗಿದೆ. ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಸಾಲವನ್ನು ಪಡೆದಿರುವ ಅರ್ಹ ಫಲಾನುಭವಿಗಳು ಅಗತ್ಯವಾದ ಸೂಕ್ತವಾದ ದಾಖಲಾತಿಗಳೊಂದಿಗೆ ಆಯಾ ವ್ಯಾಪ್ತಿಯ ಸ್ಥಳೀಯ ಪಶುಚಿಕಿತ್ಸಾಲಯವನ್ನು ಪಶುವೈದ್ಯಾಧಿಕಾರಿ ಅವರನ್ನು ಸಂಪರ್ಕಿಸಬಹುದಾಗಿದೆ.
ಹೆಚ್ಚಿನ ಮಾಹಿತಿಯನ್ನು ತಿಳಿಯಲು ಚಿತ್ರದುರ್ಗ ತಾಲ್ಲೂಕಿನ ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿಗಳ ದೂರವಾಣಿ ಸಂಖ್ಯೆ 948294311, ಚಳ್ಳಕೆರೆ 9448816499, ಹಿರಿಯೂರು 9483451044, ಹೊಸದುರ್ಗ 9945298407, ಹೊಳಲ್ಕೆರೆ 8073900950 ಹಾಗೂ ಮೊಳಕಾಲ್ಮುರು 900964820 ಗೆ ಸಂಪರ್ಕಿಸಬಹುದು ಎಂದು ಚಿತ್ರದುರ್ಗ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಇತರೆ ವಿಷಯಗಳು:
ಸಾರ್ವಜನಿಕರ ಜೇಬಿಗೆ ಮತ್ತೆ ಕತ್ತರಿ: ಪೆಟ್ರೋಲ್ ಬೆಲೆ ಏರಿಕೆ ಬೆನ್ನಲ್ಲೇ ನೀರು, ಬಸ್ ಪ್ರಯಾಣ ದರವೂ ಹೆಚ್ಚಳ
ಮನೆಯಲ್ಲಿ ಈ ಗ್ಯಾಸ್ ಬಳಸಿದ್ರೆ ದಂಡ! ಕಠಿಣ ಕ್ರಮ ಜಾರಿ