ಬೆಂಗಳೂರು: ರಾಜ್ಯದಲ್ಲಿ ಬರ, ಬಿರು ಬಿಸಿಲ ಕಾರಣದಿಂದಾಗಿ ಕುಕ್ಕುಟೋದ್ಯಮವು ತತ್ತರಿಸಿ ಹೋಗಿದೆ. ಮಳೆ ಇಲ್ಲದ ಪರಿಣಾಮವಾಗಿ ಕೋಳಿಗಳ ಆಹಾರಗಳಿಗೆ ಬಳಸುವಂತಹ ಸೋಯಾ ಮೊದಲಾದಂತಹ ಬೆಳೆಗಳ ಪ್ರಮಾಣದಲ್ಲಿ ಕಡಿಮೆಯಾಗಿ ಕೋಳಿಯ ಮಾಂಸದ ದರವು ದಿನೇ ದಿನೇ ಏರಿಕೆಯಾಗುತ್ತಿದೆ.
ಕೋಳಿ ದರದಲ್ಲಿ ಭಾರಿ ಏರಿಕೆಯಾದ ಪರಿಣಾಮ ಕೋಳಿಯ ಮಾಂಸ ಪ್ರಿಯರಿಗೆ ಶಾಕ್ ನೀಡಿದೆ. ಒಂದು ಕೆಜಿ ಚಿಕನ್ ಮಾಂಸದ ಬೆಲೆ ರಾಜ್ಯದ ವಿವಿಧಡೆಯಲ್ಲಿ 300 ರೂ. ತಲುಪಿದೆ. ರಾಜ್ಯದಲ್ಲಿ ಸುಮಾರು 40 ಸಾವಿರ ಚಿಕನ್ ಸಾಕಾಣೆದಾರರಿದ್ದು, ಪ್ರತಿವಾರ 80 ಲಕ್ಷ ಚಿಕನ್ ಉತ್ಪಾದನೆಯನ್ನು ಮಾಡಲಾಗುತ್ತದೆ. ಸುಮಾರು 1.7 ಕೋಟಿ Kg ಚಿಕನ್ ಮಾಂಸದ ಉತ್ಪಾದನೆ ಆಗುತ್ತದೆ. ಪ್ರತಿ ಕೆಜಿ ಕೋಳಿ ಉತ್ಪಾದನೆಗೆ ಈ ಹಿಂದೆ 60 ರಿಂದ 70 ರೂ. ವೆಚ್ಚವಾಗುತ್ತಿತ್ತು. ಆದರೆ ಈಗ 100 ರೂಪಾಯಿವರೆಗೆ ಖರ್ಚಾಗುತ್ತಿದೆ.
ಇದನ್ನೂ ಸಹ ಓದಿ: ಹೊಸ ಆಸ್ತಿ ತೆರಿಗೆ ಪದ್ದತಿ ಆರಂಭ .! ಹೊಲ, ಸ್ವಂತ ಮನೆ ಇದ್ದವರು ತಕ್ಷಣ ಗಮನಹರಿಸಿ
ಮಾರುಕಟ್ಟೆಯಲ್ಲಿ ಕೋಳಿಯ ಮಾಂಸಕ್ಕೆ ಬೇಡಿಕೆಯು ಹೆಚ್ಚಾಗಿದ್ದು, ಬೇಡಿಕೆಯ ಪರಿಣಾಮವಾಗಿ ಬೆಲೆಯು ಏರಿಕೆಯಾಗಿ 300 ರೂಪಾಯಿಯ ಗಡಿಯನ್ನು ತಲುಪಿದೆ. ರಾಜ್ಯದಲ್ಲಿ ಶೇಕಡ 30ರಷ್ಟು ಕೋಳಿಗಳ ಶೆಡ್ ಗಳು ಖಾಲಿಯಾಗಿವೆ. ಕೋಳಿ ಸಾಕಾಣೆದಾರರು, ಕಂಪನಿಗಳಿಗೂ ಸಹ ದರ ಏರಿಕೆಯ ಬಿಸಿ ತಟ್ಟಿದೆ. ವಿದ್ಯುತ್ ದರವು ಕೂಡ ಹೆಚ್ಚಳವಾಗಿದೆ.
ಬಿಸಿಲು ಹೆಚ್ಚಾದ ಪರಿಣಾಮವಾಗಿ ಕೋಳಿಯ ಮಾಂಸದ ಉತ್ಪಾದನೆಯು ವಿಳಂಬವಾಗುತ್ತಿದೆ. ಹೊರ ರಾಜ್ಯಗಳಲ್ಲೂ ಸಹ ಕೋಳಿಯ ಉತ್ಪಾದನೆಯು ಕುಸಿತವಾಗಿ ಬೇಡಿಕೆಯು ಹೆಚ್ಚಾಗಿದೆ. ಇದರ ಪರಿಣಾಮವಾಗಿ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಚಿಕನ್ ದರದಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಇತರೆ ವಿಷಯಗಳು:
ಎಲ್ಲಾ ಶಾಲಾ ಶಿಕ್ಷಕರಿಗೆ ಸರ್ಕಾರದಿಂದ ನೂತನ ಆದೇಶ! ತಕ್ಷಣವೇ ಹೊಸ ರೂಲ್ಸ್ ಜಾರಿ
ಎಲ್ಲಾ ವ್ಯಾಪಾರಸ್ಥರಿಗೆ ಮೋದಿ ಯೋಜನೆ!! ಸಿಗತ್ತೆ 3 ಲಕ್ಷ ಸಾಲ 15,000 ಆರ್ಥಿಕ ನೆರವು