ಹಲೋ ಸ್ನೇಹಿತರೇ, ದನದ ಕೊಟ್ಟಿಗೆ / ಶೆಡ್ ನಿರ್ಮಾಣಕ್ಕೆ ಸರ್ಕಾರದಿಂದ ಸಹಾಯಧನ ನೀಡಲಾಗುತ್ತದೆ. ಅಗತ್ಯ ಇರುವವರು ನಿಮ್ಮ ಗ್ರಾಮ ಪಂಚಾಯತಿಯಲ್ಲಿಯೇ ಅರ್ಜಿ ಹಾಕಿ ಈ ಸಹಾಯಧನವನ್ನು ಪಡೆಯಬಹುದಾಗಿದೆ. ಅರ್ಜಿ ಹಾಕಲು ಏನೆಲ್ಲಾ ದಾಖಲೆಗಳು ಬೇಕು ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ತಿಳಿಯಿರಿ.
ರಾಜ್ಯದಲ್ಲಿ ಈ ಯೋಜನೆಯಡಿ ಸಹಸ್ರಾರು ರೈತರು, ಹೈನುಗಾರರು ದನದ ಕೊಟ್ಟಿಗೆ ನಿರ್ಮಾಣ ಮಾಡಿಕೊಂಡು ಜಾನುವಾರು ಸಾಕಾಣಿಕೆಯೊಂದಿಗೆ ಉತ್ತಮ ಆದಾಯವನ್ನು ಗಳಿಸುತ್ತಿದ್ದಾರೆ.
ಗ್ರಾಮೀಣ ಭಾಗದ ಒಂದು ಅರ್ಹ ಕುಟುಂಬವು ಜೀವಿತಾವಧಿಯಲ್ಲಿ 5 ಲಕ್ಷ ರೂ.ಗಳ ವರಗೂ ವೈಯಕ್ತಿಕ ಕಾಮಗಾರಿ ಪಡೆಯಲು ಮಹಾತ್ಮ ಗಾಂಧಿ ನರೇಗಾ ಯೋಜನೆಯ ಮೂಲಕ ಸೌಲಭ್ಯವನ್ನು ಕಲ್ಪಿಸಲಾಗಿದೆ. ಈ ಅವಕಾಶವನ್ನು ಬಳಸಿಕೊಂಡು ರೈತರು ಈ ಕೆಳಗಿನ ಕಾಮಗಾರಿಗಳಿಗೆ ಸಹಾಯಧನ ಪಡೆಯಬಹುದಾಗಿದೆ.
ಹಸು, ಕುರಿ, ಕೋಳಿ, ಹಂದಿ ಸಾಕಾಣಿಕೆ ಮೂಲಕ ಸ್ವಯಂ ಉದ್ಯೋಗ ಮಾಡುವವರಿಗೆ ಶೆಡ್ ನಿರ್ಮಾಣದಂತಹ ವೈಯಕ್ತಿಕ ಕಾಮಗಾರಿ, ಕೃಷಿ ಹೊಂಡ, ಕ್ಷೇತ್ರ ಬದು, ತೋಟಗಾರಿಕೆ ಬೆಳೆ, ರೇಷ್ಮೆ ಮತ್ತು ಅರಣ್ಯ ಬೆಳೆಗಳು ಸೇರಿದಂತೆ ಇತರೆ ವೈಯಕ್ತಿಕ ಕಾಮಗಾರಿ ಪಡೆಯಬಹುದಾಗಿದೆ.
Contents
ಕೊಟ್ಟಿಗೆ ನಿರ್ಮಾಣಕ್ಕೆ ಎಷ್ಟು ಸಹಾಯಧನ?
ದನದ ಶೆಡ್ / ಕೊಟ್ಟಿಗೆ ನಿರ್ಮಾಣಕ್ಕೆ ಈ ಮೊದಲು ಸಾಮಾನ್ಯ ವರ್ಗದ ರೈತರಿಗೆ 19,500 ರೂ. ಹಾಗೂ ಪರಿಶಿಷ್ಟ ಜಾತಿ & ಪರಿಶಿಷ್ಟ ಪಂಗಡದ ರೈತರಿಗೆ 43,000 ರೂ. ಸಹಾಯಧನ ಸಿಗುತ್ತಿತ್ತು. ಈಗ ಪರಿಷ್ಕೃತ ಆದೇಶದಂತೆ ಎಲ್ಲ ವರ್ಗದವರಿಗೂ ಸಮವಾಗಿ 57,000 ರೂ. ಸಹಾಯಧನ ನೀಡಲಾಗುವುದು.
ಈ 57,000 ರೂ. ಮೊತ್ತದಲ್ಲಿ ಸುಮಾರು 10,556 ರೂ. ಕೂಲಿ ಮೊತ್ತವಾಗಿ ಸಿಗುತ್ತಿದ್ದು; ಉಳಿಕೆ 46,644 ರೂ. ಈ ಯೋಜನೆಯಡಿ ಸಹಾಯಧನವಾಗಿ ಸಿಗುತ್ತದೆ. ಈ ಹಣವನ್ನು ದನದ ಕೊಟ್ಟಿಗೆ ನಿರ್ಮಾಣಕ್ಕೆ ಬೇಕಾಗುವ ಸಾಮಗ್ರಿಗಳ ಖರೀದಿ, ನಿರ್ಮಾಣ ವೆಚ್ಚಕ್ಕೆ ಬಳಸಿಕೊಳ್ಳಬಹುದು.
ನದ ಕೊಟ್ಟಿಗೆ ನೆರವು ಪಡೆಯುವುದು ಹೇಗೆ?
ಈ ಯೋಜನೆಯ ಪ್ರಯೋಜನ ಪಡೆಯಲು ಬಹುಮುಖ್ಯವಾಗಿ ಜಾಬ್ ಕಾರ್ಡ್ ಹೊಂದಿರಬೇಕು. ನಿಮ್ಮೂರ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ನಮೂನೆ 1ನ್ನು ಭರ್ತಿ ಮಾಡಿ ಕುಟುಂಬದ 18 ವರ್ಷ ಮೇಲ್ಪಟ್ಟ ವಯಸ್ಸಿನ ಎಲ್ಲಾ ಸದಸ್ಯರ ಇತ್ತೀಚಿನ ಭಾವಚಿತ್ರ, ವೈಯಕ್ತಿಕ ಬ್ಯಾಂಕ್ ಖಾತೆ ಸಂಖ್ಯೆ, ಆಧಾರ್ ಸಂಖ್ಯೆ ಇವುಗಳ ಜೆರಾಕ್ಸ್ ಪ್ರತಿಯೊಂದಿಗೆ ಅರ್ಜಿಯನ್ನು ಸಲ್ಲಿಸುವ ಮೂಲಕ ಜಾಬ್‌ಕಾರ್ಡ್ ಪಡೆಯಬಹುದು.
ಜಾಬ್ ಕಾರ್ಡ್ ಹೊಂದಿರುವ, 4ಕ್ಕಿಂತ ಹೆಚ್ಚು ಜಾನುವಾರು ಸಾಕಣೆ ಮಾಡುವವರು ಕೊಟ್ಟಿಗೆ ಸಹಾಯಧನ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ. ಇಂಥವರು ಸ್ಥಳೀಯ ಪಶು ವೈದ್ಯಾಧಿಕಾರಿಗಳಿಂದ ಜಾನುವಾರು ಇರುವ ಕುರಿತ ದೃಢೀಕರಣ ಪತ್ರ ಪಡೆದು ಅರ್ಜಿ ಸಲ್ಲಿಸಬಹುದು. ಈ ಕುರಿತ ಹೆಚ್ಚಿನ ಮಾಹಿತಿಗೆ ನಿಮ್ಮೂರ ಗ್ರಾಮ ಪಂಚಾಯತಿಗೆ ಭೇಟಿ, ಅಗತ್ಯ ವಿವರ ಪಡೆಯಿರಿ.
ಇತರೆ ವಿಷಯಗಳು
ರೈತರಿಗೆ ಗುಡ್ ನ್ಯೂಸ್! ತೋಟಗಾರಿಕೆ ಇಲಾಖೆಯಿಂದ ಸಬ್ಸಿಡಿ ಸೌಲಭ್ಯಕ್ಕೆ ಅರ್ಜಿ ಆಹ್ವಾನ
ರೈತರಿಗೆ ಸರ್ಕಾರಿ ಯೋಜನೆಗಳ ಸೌಲಭ್ಯ ರದ್ದು.! ಈ ಕೆಲಸಕ್ಕೆ ಇನ್ನೂ 7 ದಿನ ಮಾತ್ರ ಬಾಕಿ