ಹಲೋ ಸ್ನೇಹಿತರೆ, ರಾಜ್ಯದಲ್ಲಿ ನಿರಂತರ ಬೆಲೆ ಏರಿಕೆ ಸಾಲಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ನಂತರ ರಸ್ತೆ ಸಾರಿಗೆ ನಿಗಮ ಬಸ್ ಟಿಕೆಟ್ ದರ ಹೆಚ್ಚಳ ಮಾಡಲು ಹೊರಟಿದೆ. ಈಗಾಗಲೇ ಕೆಎಸ್ ಆರ್ ಟಿಸಿ ಶೇ. 15-20 ರಷ್ಟು ಟಿಕೆಟ್ ದರ ಹೆಚ್ಚಳಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು. ಬಸ್ ಟಿಕೆಟ್ ದರ ಇನ್ನಷ್ಟು ದುಬಾರಿಯಾಗಲಿದೆ. ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ ಕೊನೆವರೆಗೂ ಓದಿ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪ್ರತಿದಿನ 6.2 ಲಕ್ಷ ಲೀಟರ್ ಡೀಸೆಲ್ ಬೇಕಾಗುತ್ತದೆ ಮತ್ತು ಡೀಸೆಲ್ ಬೆಲೆ ಏರಿಕೆಯ ನಂತರ, ನಿಗಮವು ಇಂಧನಕ್ಕಾಗಿ ದಿನಕ್ಕೆ ಹೆಚ್ಚುವರಿಯಾಗಿ 18.2 ಲಕ್ಷ ರೂ.ಗಳನ್ನು ಖರ್ಚು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. 2023ರಲ್ಲಿ ಕೆಎಸ್‌ಆರ್ಟಿಸಿ ಪ್ರತಿದಿನ 1,828 ರೂ.ಗಳ ಡೀಸೆಲ್ ಖರೀದಿಸಿತ್ತು. “ಇದು ತಿಂಗಳಿಗೆ ಸರಿಸುಮಾರು 5.4 ಕೋಟಿ ರೂ ಮತ್ತು ವರ್ಷಕ್ಕೆ 65 ಕೋಟಿ ರೂ.ಗಳವರೆಗೆ ಖರ್ಚು ಬರುತ್ತದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದು ಒಂದು ಕಡೆ ಆದರೆ ಮತ್ತೊಂದೆಡೆ, ಹೆಚ್ಚುತ್ತಿರುವ ಸಿಬ್ಬಂದಿ ವೇತನ, ಇಂಧನ ವೆಚ್ಚಗಳು, ನಿರ್ವಹಣಾ ವೆಚ್ಚಗಳು ಮತ್ತು ಇತರ ಅಂಶಗಳಿಂದ ಪ್ರಭಾವಿತವಾದ ಹೆಚ್ಚುತ್ತಿರುವ ಕಾರ್ಯಾಚರಣೆ ವೆಚ್ಚಗಳಿಂದ ಸಮಸ್ಯೆಗೆ ಒಳಗೊಂಡ ಸಾರಿಗೆ ಸಂಸ್ಥೆ ಸರ್ಕಾರಕ್ಕೆ ತಮ್ಮ ಕಳವಳಗಳನ್ನು ವ್ಯಕ್ತಪಡಿಸುತ್ತಿವೆ. ಸಾರ್ವಜನಿಕ ಸಾರಿಗೆ ಮಾಧ್ಯಮವು ಶೇಕಡಾ 20 ರಿಂದ 25 ರಷ್ಟು ಟಿಕೆಟ್ ದರ ಹೆಚ್ಚಳಕ್ಕೆ ನಿರಂತರ ಒತ್ತಾಯಿಸುತ್ತಿದೆ, ರಾಜ್ಯ ಸರ್ಕಾರವು ಸುಮಾರು 15-20 ಪ್ರತಿಶತದಷ್ಟು ಹೆಚ್ಚಳವನ್ನು ಮಾಡಬಹುದು ಎಂದು ಹೇಳಲಾಗಿದೆ.
ಇದನ್ನು ಓದಿ: ಈ ದಿನ ಜಮೆಯಾಗಲಿದೆ ʼಗೃಹಲಕ್ಷ್ಮೀʼ ಜೂನ್ ತಿಂಗಳ ಹಣ! ಹೆಬ್ಬಾಳ್ಕರ್ ಸ್ಪಷ್ಟನೆ
ಇನ್ನು ಅತೀ ಶೀಘ್ರವೇ KSRTC ಬಸ್ ಟಿಕೆಟ್ ದರ ಹೆಚ್ಚಳ ಮಾಡುವುದಾಗಿ ಶಾಸಕ ರಾಜು ಕಾಗೆ ಸುಳಿವು ನೀಡಿದ್ದಾರೆ. ಸರ್ಕಾರದ ಶಕ್ತಿ ಯೋಜನೆಯಿಂದಾಗಿ ಕರ್ನಾಟಕ ಸಾರಿಗೆ ನಿಗಮ ನಷ್ಟಕ್ಕೀಡಾಗಿದೆ. ಡೀಸೆಲ್, ಬಸ್ ಗಳ ಬಿಡಿಭಾಗಗಳ ಬೆಲೆಯೂ ಸಹ ಹೆಚ್ಚಳವಾಗಿದೆ. ಕಳೆದ ಹತ್ತು ವರ್ಷಗಳ ಕಾಲ ಬಸ್ ಟಿಕೆಟ್ ದರದಲ್ಲಿ ಯಾವುದೇ ಹೆಚ್ಚಳ ಮಾಡಿಲ್ಲ. ಹೀಗಾಗಿ ಬಸ್ ಟಿಕೆಟ್ ದರ ಏರಿಕೆ ಮಾಡವುದಾಗಿ ಮಾಹಿತಿ ನೀಡಿದೆ.
ಕರ್ನಾಟಕ ರಾಜ್ಯದಲ್ಲಿ ಸಾರಿಗೆ ಬಸ್ ಟಿಕೆಟ್ ದರವನ್ನು 2020ರಲ್ಲಿ ಏರಿಕೆ ಮಾಡಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ KSRTC ಬಸ್ ಟಿಕೆಟ್ ದರವನ್ನು ಯಾವುದೇ ಹೆಚ್ಚಳ ಮಾಡಲಾಗಿಲ್ಲ. ನಿಗಮಕ್ಕೆ ಶಕ್ತಿ ಯೋಜನೆಯಡಿ ರಾಜ್ಯ ಸರ್ಕಾರದಿಂದ 1100 ಕೋಟಿ ಬರಬೇಕಿದೆ ಹಾಗಾಗಿ ಸಾರಿಗೆ ನಿಗಮಗಳಿಂದ ದರ ಪರಿಷ್ಕರಣೆ ಪ್ರಸ್ತಾವನೆ ಬಂದರೆ ಪರಿಶೀಲಿಸಿ ಕ್ರಮ ಕೈಗೊಳ್ಳಲಲಾಗುವುದು ಎಂದು ಹೇಳಲಾಗುತ್ತಿದೆ.
ಇತರೆ ವಿಷಯಗಳು:
ಸರ್ಕಾರಿ ನೌಕರರಿಗೆ ಭರ್ಜರಿ ಸುದ್ದಿ! ವೇತನದ ಅರ್ಧದಷ್ಟು ʻಪಿಂಚಣಿʼ ಸಿಗಲಿದೆ
ಈ 15 ಜಿಲ್ಲೆಯ ಮಹಿಳೆಯರ ಅಕೌಂಟ್‌ಗೆ ಬಂತು ಪೆಂಡಿಂಗ್ ಹಣ! ಡಿಬಿಟಿ ಸ್ಟೇಟಸ್ ಚೆಕ್ ಮಾಡಿ