ಹಲೋ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 10 ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಈ ಬೆನ್ನಲ್ಲೇ ಮತ್ತೊಂದು ಸೀಸನ್ ಪ್ರಾರಂಭವಾಗಲಿದೆ ಎಂಬ ಮಾತು ಕೇಳಿಬರುತ್ತಿದೆ. ಯಾರೆಲ್ಲಾ ಸ್ಪರ್ಧಿಗಳು ಭಾಗವಹಿಸಲಿದ್ದಾರೆ ಎಂದು ಲೇಖನದಲ್ಲಿ ತಿಳಿಯಿರಿ.
ಅಕ್ಟೋಬರ್ 3ನೇ ವಾರದಿಂದ ಬಿಗ್ ಬಾಸ್ ಕನ್ನಡ ಹೊಸ ಸೀಸನ್ ಆರಂಭವಾಗಲಿದೆ. ಅಂದಹಾಗೆ ಈ ಬಗ್ಗೆ ವಾಹಿನಿ ಯಾವುದೇ ಮಾಹಿತಿ ನೀಡಿಲ್ಲ. ಹೊಸ ಸೀಸನ್ ಶುರುವಾಗುತ್ತಿದೆ ಎಂಬ ಮಾತಿನ ಬೆನ್ನಲ್ಲೇ ಒಂದಿಷ್ಟು ಸ್ಪರ್ಧಿಗಳ ಹೆಸರು ಕೂಡ ಕೇಳಿ ಬಂದಿದೆ.
ಈಗಾಗಲೇ ಶೋ ಆರಂಭಕ್ಕೆ ತಂಡ ಸಿದ್ಧವಾಗಿದ್ದು, ವಾಹಿನಿಯೂ ಎಲ್ಲಾ ಸಿದ್ಧತೆಗಳು ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. ಅಂದಹಾಗೆ ಈ ಬಾರಿ ದೊಡ್ಮನೆಗೆ ಎಂಟ್ರಿ ಕೊಡಲಿರುವ ಸ್ಪರ್ಧಿಗಳ ಪಟ್ಟಿಯೂ ವೈರಲ್ ಆಗಿತ್ತಿದೆ.
ಅದರಲ್ಲಿ ‘ಬೃಂದಾವನ’ ಧಾರಾವಾಹಿ ನಟ ವರುಣ್ ಆರಾಧ್ಯ, ಯುಟ್ಯೂಬರ್ ವರ್ಷಾ ಕಾವೇರಿಯೂ ಇದ್ದಾರೆ. ಈ ಜೋಡಿ ಈ ಹಿಂದೆ ಬ್ರೇಕಪ್ ಮಾಡಿಕೊಂಡಿದ್ದು ಭಾರೀ ಹಾವಳಿಯನ್ನು ಸೃಷ್ಟಿಸಿದ್ದರು.
ಇನ್ನುಳಿದಂತೆ, ಭವ್ಯಾ ಗೌಡ, ವಿಕ್ರಮ್, ‘ತುಕಾಲಿ ಸ್ಟಾರ್’ ಸಂತೋಷ್ ಪತ್ನಿ ಮಾನಸಾ, ‘ಮಜಾಭಾರತ’ ಖ್ಯಾತಿಯ ರಾಘವೇಂದ್ರ, ಸುನೀಲ್ ರಾವ್, ಮೋಕ್ಷಿತಾ ಪೈ, ರೀಲ್ಸ್ ರೇಷ್ಮಾ ಹೀಗೆ ಕೆಲ ಸ್ಪರ್ಧಿಗಳು ಎಂಟ್ರಿ ಪಡೆಯಲಿದ್ದಾರೆ ಎಂದು ಮಾತುಗಳು ಕೇಳಿಬರುತ್ತಿವೆ.
ಇತರೆ ವಿಷಯಗಳು
ಮನೆಯಲ್ಲಿ ಈ ಗ್ಯಾಸ್ ಬಳಸಿದ್ರೆ ದಂಡ! ಕಠಿಣ ಕ್ರಮ ಜಾರಿ
ಭಾರತೀಯ ಪೋಸ್ಟ್ GDS ನೇಮಕಾತಿ: 44,228 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ