rtgh
Headlines

BPL ಕುಟುಂಬದ 2 ಹೆಣ್ಣು ಮಕ್ಕಳಿಗೆ ತಲಾ 1 ಲಕ್ಷ ಮಂಜೂರು

bhagyalakshmi scheme new update
Share

ಹಲೋ ಸ್ನೇಹಿತರೇ, ಬಿಎಸ್‌ ಯಡಿಯೂರಪ್ಪ ಸಿಎಂ ಆಗಿದ್ದಾಗ ಹೆಣ್ಣು ಮಕ್ಕಳ ಸುರಕ್ಷತೆಗಾಗಿ, ಭಾಗ್ಯಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಶೀಘ್ರವೇ ಪ್ರೋತ್ಸಾಹಧನ ಲಭಿಸಲಿದೆ. ಯಾರಿಗೆಲ್ಲಾ ಲಭಿಸಲಿದೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

bhagyalakshmi scheme new update

ಕೊಪ್ಪಳ ಜಿಲ್ಲೆಯಲ್ಲಿ ಈ ಯೋಜನೆಯಡಿ ಮಂಜೂರಾತಿ ನೀಡಲಾಗಿರುವ 91,357 ಯುವತಿಯರ ದಾಖಲೆ ಸಂಗ್ರಹ ಕಾರ್ಯ ನಡೆಯುತ್ತಿದ್ದು, ಸ್ಕ್ರೂಟನಿ ಬಳಿಕ ಉಳಿಯುವ ಅರ್ಹ ಯುವತಿಯರ ಖಾತೆಗೆ ತಲಾ 1 ಲಕ್ಷ ರೂ. ಜಮೆಯಾಗುತ್ತದೆ.

ಕೊಪ್ಪಳ: ಲಿಂಗಾನುಪಾತ ಸರಿದೂಗಿಸಲು, ಹೆಣ್ಣು ಭ್ರೂಣ ಹತ್ಯೆ ಹಾಗೂ ಬಾಲ್ಯ ವಿವಾಹ ಪದ್ಧತಿ ತಡೆಯಲು & ಹೆಣ್ಣು ಮಗುವಿನ ಶಿಕ್ಷಣ, ಆರೋಗ್ಯ ಮಟ್ಟ ಉತ್ತಮಪಡಿಸಿ ಸರ್ವಾಂಗೀಣ ಅಭಿವೃದ್ಧಿಗಾಗಿ 18 ವರ್ಷಗಳ ಹಿಂದೆ ರಾಜ್ಯಸರ್ಕಾರ ಜಾರಿಗೊಳಿಸಿದ್ದ ಯೋಜನೆ ಫಲ ಕೊಡುವ ಕಾಲ ಹತ್ತಿರಬಂದಿದೆ.

ಅಂದು ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌ ಯಡಿಯೂರಪ್ಪ ಆಸ್ಥೆ ವಹಿಸಿ, ಹೆಣ್ಣು ಮಕ್ಕಳ ಸುರಕ್ಷತೆಗಾಗಿ ಆರಂಭಿಸಿದ್ದ ಭಾಗ್ಯಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಶೀಘ್ರವೇ ಪ್ರೋತ್ಸಾಹಧನ ಸಿಗುತ್ತದೆ.

BPL ಕುಟುಂಬದಲ್ಲಿ ಜನಿಸಿದ 2 ಹೆಣ್ಣು ಮಕ್ಕಳಿಗೆ ಈ ಯೋಜನೆಯಡಿ ಸೌಲಭ್ಯ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ ಈ ಯೋಜನೆಯಡಿ ಮಂಜೂರಾತಿ ನೀಡಲಾಗಿರುವ 91,357 ಯುವತಿಯರ ದಾಖಲೆ ಸಂಗ್ರಹ ಕಾರ್ಯ ನಡೆಯುತ್ತಿದ್ದು, ಸ್ಕ್ರೂಟನಿ ಬಳಿಕ ಉಳಿಯುವ ಅರ್ಹ ಯುವತಿಯರ ಖಾತೆಗೆ ತಲಾ 1 ಲಕ್ಷ ರೂ. ಜಮೆಯಾಗಲಿದೆ. ಯೋಜನೆ ಜಾರಿಯಾದ ವರ್ಷದಲ್ಲಿ ನೋಂದಾಯಿಸಿದವರ ಪೈಕಿ ಏಪ್ರಿಲ್‌, ಮೇ, ಜೂನ್‌ನಲ್ಲಿ 18 ವರ್ಷ ಪೂರ್ಣಗೊಂಡ ಹೆಣ್ಣು ಮಕ್ಕಳು ಈಗ ಹಣ ಪಡೆಯಲು ಅರ್ಹರಾಗಿದ್ದಾರೆ.

ಏನಿದು ಯೋಜನೆ?

ಬಾಲಕಿಯರ ಹೆಸರಿನಲ್ಲಿ ಜೀವ ವಿಮಾ ನಿಗಮ (ಎಲ್‌ಐಸಿ)ದಲ್ಲಿ ನಿಶ್ಚಿತ ಠೇವಣಿ ಇಟ್ಟು ಮಗುವಿಗೆ 18 ವರ್ಷ ಪೂರ್ಣಗೊಂಡ ನಂತರ ಬಡ್ಡಿ ಸಹಿತ ಹಣ ನೀಡುವ ಗುರಿ ಈ ಯೋಜನೆಯದ್ದಾಗಿದೆ. ಭಾಗ್ಯಲಕ್ಷ್ಮೀ ಯೋಜನೆಯಡಿ ಈವರೆಗೆ ಜಿಲ್ಲೆಯಲ್ಲಿ 78,443 ಬಾಂಡ್‌ ವಿತರಿಸಲಾಗಿದೆ. 2021-22, 2022-23, 2023-24 ರ ಸುಕನ್ಯಾ ಸಮೃದ್ಧಿ ಯೋಜನೆಯಿಂದ 8,803 ಪಾಸ್‌ ಬುಕ್‌ ಬಂದಿವೆ. ಒಟ್ಟಾರೆ, 2006-07 ರಿಂದ 2023-24 ನೇ ಸಾಲಿನವರೆಗೆ ಬಾಂಡ್‌ ಮತ್ತು ಸುಕನ್ಯಾ ಸಮೃದ್ಧಿ ಯೋಜನೆಯಡಿ ಒಟ್ಟು 87,246 ಪಾಸ್‌ ಬುಕ್‌ ಬಂದಿದ್ದು, 4,111 ಪಾಸ್‌ ಬುಕ್‌ ಬರುವುದು ಬಾಕಿ ಉಳಿದಿದೆ.

ಪ್ರಾರಂಭದಲ್ಲಿ ಭಾಗ್ಯಲಕ್ಷ್ಮೀ ಯೋಜನೆಯನ್ನು ಎಲ್‌ಐಸಿ ನಿರ್ವಹಿಸಿದ್ದು, 2020 ರಿಂದ ಇತ್ತೀಚೆಗೆ ಠೇವಣಿ ಮೊತ್ತವನ್ನು ಅಂಚೆ ಇಲಾಖೆಗೆ ವರ್ಗಾಯಿಸಲಾಗಿದೆ. ಆಯಾ ತಿಂಗಳು 18 ವರ್ಷ ಪೂರ್ಣಗೊಳ್ಳುವ ಅರ್ಹ ಫಲಾನುಭವಿಗಳಿಗೆ ಹಣ ವಿತರಿಸುವ ಕಾರ್ಯ ಮುಂಬರುವ ಪ್ರತಿ ತಿಂಗಳೂ ನಡೆಯಲಿದ್ದು, ಇದಕ್ಕಾಗಿ ಫಲಾನುಭವಿಗಳಿಂದ ಅಗತ್ಯ ದಾಖಲೆ ಪಡೆಯಲಾಗುತ್ತಿದೆ.

ಅರ್ಹತೆಗಳೇನು?

  • ಭಾಗ್ಯಲಕ್ಷ್ಮಿ ಯೋಜನೆ ಹಣ ಪಡೆಯಲು BPL ಕಾರ್ಡ್‌, ಫಲಾನುಭವಿ ಮಗು ಕಡ್ಡಾಯವಾಗಿ 8ನೇ ತರಗತಿ ವಿದ್ಯಾಭ್ಯಾಸ ಮಾಡಿದ ದೃಢೀಕರಣ.
  • ಬಾಲ ಕಾರ್ಮಿಕರಲ್ಲ, ಬಾಲ್ಯ ವಿವಾಹವಾಗಿಲ್ಲಎಂಬ ಮಾಹಿತಿ ಸಲ್ಲಿಸಬೇಕು.
  • ಯೋಜನೆ ಅನ್ವಯ ಇರುವ ಎಲ್ಲನಿಯಮದಂತೆ ಇರುವವರಿಗೆ ಮಾತ್ರ ಹಣ ಸಿಗಲಿದೆ.
  • ಮಗುವಿನ ಹೆಸರು ಬದಲಾವಣೆಯಾಗಿದ್ದರೆ ಸಂಬಂಧಿಸಿದ ಸಿಡಿಪಿಒ ಅವರಿಂದ ದೃಢೀಕರಣ ಪತ್
  • ಬಾಂಡ್‌ ಕಳೆದಿದ್ದರೆ ಬಾಂಡ್‌ ನಕಲು ಪ್ರತಿ
  • ಎಫ್‌ಐಆರ್‌ ಪ್ರತಿ
  • ದತ್ತು ಮಕ್ಕಳಾಗಿದ್ದಲ್ಲಿ ಕಾನೂನಾತ್ಮಕವಾಗಿ ದತ್ತು ಪಡೆದ ಪೋಷಕರ ಹೆಸರನ್ನು ಸಿಡಿಪಿಒ ದೃಢೀಕರಿಸಬೇಕು. ತಾಲೂಕು ಕೋಡ್‌ ಬದಲಾವಣೆ ಇದ್ದರೂ ಸಿಡಿಪಿಒ ದೃಢೀಕರಿಸಬೇಕು ಎಂಬ ನಿಯಮ ರೂಪಿಸಲಾಗಿದೆ.

ಸುಕನ್ಯಾ ಸಮದ್ಧಿ:

ಭಾಗ್ಯಲಕ್ಷ್ಮಿ ಯೋಜನೆಯನ್ನು 2020 ರ ಏ.1 ರಿಂದ ಸುಕನ್ಯಾ ಸಮದ್ಧಿ ಯೋಜನೆಯಡಿ ವಿಲೀನಗೊಳಿಸಲಾಗಿದ್ದು, ನಾನಾ ಬದಲಾವಣೆ ಮಾಡಲಾಗಿದೆ. ಸರ್ಕಾರ ಇಟ್ಟಿರುವ ನಿಶ್ಚಿತ ಠೇವಣಿ ಜತೆ ಪಾಲಕರು ತಿಂಗಳು ಹಾಗೂ ವರ್ಷವಾರು ಹಣ ಜಮೆ ಮಾಡಿದ್ದರೆ ಆ ಮೊತ್ತಕ್ಕೂ ಬಡ್ಡಿ ವಿತರಿಸುವ ಸೌಲಭ್ಯ ಕಲ್ಪಿಸಲಾಗಿದೆ.

ಭಾಗ್ಯಲಕ್ಷ್ಮೀ ಯೋಜನೆಯಡಿ ಜಿಲ್ಲೆಯ ಫಲಾನುಭವಿಗಳಿಂದ ಅಗತ್ಯ ದಾಖಲೆಗಳನ್ನು ಸಂಗ್ರಹ ಮಾಡಲಾಗುತ್ತಿದೆ. ದಾಖಲೆಗಳ ಪರಿಶೀಲನೆ ಬಳಿಕ ಅರ್ಹರ ಖಾತೆಗೆ ಸಂಪೂರ್ಣ ಹಣ ಜಮೆಯಾಗಲಿದೆ.

ಇತರೆ ವಿಷಯಗಳು

ಕಾರ್ಮಿಕರಿಗಾಗಿ ರಾಜ್ಯ ಸರ್ಕಾರದಿಂದ ಹೊಸ ಸ್ಕೀಮ್! ಇನ್ಮುಂದೆ ಸಿಗಲಿದೆ ಈ ಹೊಸ ಬೆನಿಫಿಟ್

ರೆಡಿ ಮಸಾಲಾ ಉಪಯೋಗಿಸುವವರಿಗೆ ಬಿಗ್ ಶಾಕ್! 111 ಕಂಪನಿಗಳ ಪರವಾನಗಿ ರದ್ದು


Share

Leave a Reply

Your email address will not be published. Required fields are marked *