rtgh
Headlines

18 ವರ್ಷ ತುಂಬಿದ ಬಾಲಕಿಯರಿಗೆ ಬಂಪರ್‌ ಲಾಟ್ರಿ.! ಈ ಯೋಜನೆಯಡಿ ಖಾತೆಗೆ ಬರ್ತಿಗೆ 1 ಲಕ್ಷ ಹಣ

bhagya lakshmi scheme
Share

ಹಲೋ ಸ್ನೇಹಿತರೇ, ರಾಜ್ಯದಲ್ಲಿ ಭಾಗ್ಯಲಕ್ಷ್ಮೀ ಯೋಜನೆ ಪ್ರಾರಂಭಗೊಂಡು 18 ವರ್ಷಗಳಾಗಿದೆ, ಯೋಜನೆಗೆ ಅರ್ಹರಾದ 1647 ಬಾಲಕಿಯರ ಖಾತೆಗೆ ಆದ್ಯತೆ ಮೇರೆಗೆ ಯೋಜನೆಯ 1 ಲಕ್ಷ ರೂ ಹಣ ಖಾತೆಗೆ ಜಮೆಯಾಗಲಿದೆ. ಯಾರಿಗೆಲ್ಲಾ ಜಮೆಯಾಗಲಿದೆ ಇನ್ನಷ್ಟು ಮಾಹಿತಿಗಾಗಿ ನಮ್ಮ ಲೇಖನವನ್ನು ಓದಿ.

bhagya lakshmi scheme

BPL ಕುಟುಂಬದ 2 ಹೆಣ್ಣುಮಕ್ಕಳಿಗೆ ಈ ಯೋಜನೆ ಸಂಬಂಧಿಸಿದ್ದಾಗಿದ್ದು, ಈಗಾಗಲೇ ಅರ್ಹರ ಅರ್ಜಿ ಹಾಗೂ ದಾಖಲೆಗಳನ್ನು ಸ್ಥಳೀಯ ಆಡಳಿತದಿಂದ ಸಂಗ್ರಹಿಸಲಾಗುತ್ತಿದೆ. ಇನ್ನೆರಡೇ ತಿಂಗಳಳ್ಲಿ ಫಲಾನುಭವಿಗಳ ಫಂಡ್ ಕೈಸೇರಲಿದೆ.

ಕೊಂಡ್ಲಹಳ್ಳಿ ಮಹಾದೇವ ಮೊಳಕಾಲ್ಮುರು

ಚಿತ್ರದುರ್ಗ: 18 ವರ್ಷದ ಹಿಂದೆ ರಾಜ್ಯದಲ್ಲಿ ಪ್ರಾರಂಭಗೊಂಡಿದ್ದ ಭಾಗ್ಯಲಕ್ಷ್ಮೀ ಯೋಜನೆಯ ತಲಾ 1 ಲಕ್ಷ ರೂ. ಲಾಭವನ್ನು ಚಿತ್ರದುರ್ಗ ಜಿಲ್ಲೆಯ 1647 ಬಾಲಕಿಯರು ಪಡೆದುಕೊಳ್ಳಲ್ಲಿದ್ದಾರೆ.

ಜಿಲ್ಲೆಯಲ್ಲಿಈ ಯೋಜನೆಯಡಿ ನೋಂದಾಯಿಸಿ 18 ವರ್ಷ ಪೂರ್ಣಗೊಂಡ ಏಪ್ರಿಲ್‌ & ಮೇ ತಿಂಗಳ ಅಂತ್ಯಕ್ಕೆ ಈ ಬಾಲಕಿಯರು ಯೋಜನೆಯ ಮೆಚ್ಯೂರಿಟಿ ಬೆನಿಫಿಷರ್‌ಗೆ ಅರ್ಹರಾಗಿದ್ದು, ಈ ಹಣ ಇನ್ನೆರಡು ತಿಂಗಳಲ್ಲಿಅರ್ಹ ಫಲಾನುಭಗಳ ಖಾತೆಗೆ ಆದ್ಯತೆ ಮೇರೆಗೆ ಜಮೆಯಾಗಲಿದೆ. ಈಗಾಗಲೇ ಅಗತ್ಯ ದಾಖಲೆಗಳನ್ನು ಇಲಾಖೆಯು ಪಡೆಯಲು ಮುಂದಾಗಿದೆ.

2006-07 ರಲ್ಲಿ ಲಿಂಗಾನುಪಾತ ಉತ್ತಮ ಪಡಿಸಲು, ಹೆಣ್ಣು ಭ್ರೂಣ ಹತ್ಯೆ ತಡೆಯಲು, ಬಾಲ್ಯ ವಿವಾಹ ಪದ್ಧತಿಗೆ ಬ್ರೇಕ್‌ ಹಾಕಲು, ಹೆಣ್ಣು ಮಗುವಿನ ಶಿಕ್ಷಣ, ಆರೋಗ್ಯ ಮಟ್ಟ ಉತ್ತಮ ಪಡಿಸಿ ಸರ್ವಾಂಗೀಣ ಅಭಿವೃದ್ಧಿಯತ್ತ ಕೊಂಡೊಯ್ಯಲು ಬಡತನ ರೇಖೆಗಿಂತ ಕೆಳಗಿರುವ ಕುಟುಂಬದಲ್ಲಿ ಜನಿಸಿದ 2 ಹೆಣ್ಣು ಮಕ್ಕಳಿಗೆ ಸರ್ಕಾರವು ನಿಶ್ಚಿತ ಠೇವಣಿ ಹೂಡಿ, ಈ ಮಗುವಿಗೆ 18 ವರ್ಷ ಪೂರ್ಣಗೊಂಡ ನಂತರ ಬಡ್ಡಿ ಸಹಿತ ಪರಿಪಕ್ವ ಹಣ ನೀಡುವ ಸದುದ್ದೇಶದಿಂದ ಆರಂಭಗೊಂಡಿದ್ದ ಭಾಗ್ಯಲಕ್ಷ್ಮೀ ಯೋಜನೆಗೆ ಪ್ರಸ್ತುತವಾಗಿ ಹದಿನೆಂಟು ವರ್ಷವಾಗಿರುವ ಹಿನ್ನೆಲೆ ಎಲ್ಲ ತಾಲೂಕುಗಳ ಸಿಡಿಪಿಒ ಇಲಾಖೆಯು ಪರಿಪಕ್ವ ಹಣ ನೀಡಲು ಈಗಾಗಲೇ ಅರ್ಹರಿಂದ ಅರ್ಜಿ ಮತ್ತು ಅಗತ್ಯ ದಾಖಲೆ ಸಂಗ್ರಹಿಸುತ್ತಿದೆ.

ಈ ಯೋಜನೆಯ ಹಣ ಪಡೆಯಲು ಬಿಪಿಎಲ್‌ ಕಾರ್ಡ್‌, ಶಾಶ್ವತ ಕುಟುಂಬ ಯೋಜನೆ ಅಳವಡಿಸಿಕೊಂಡು ಮೂರು ಮಕ್ಕಳು ಮೀರಿರದಂತಿರಬೇಕು(ಬಹುಪತಿ-ಪತ್ನಿಯರನ್ನು ಹೊಂದಿದ್ದರೂ ಎರಡು ಹೆಣ್ಣು ಮಕ್ಕಳು ಯೋಜನೆಯಡಿ ಅರ್ಹರು). ಫಲಾನುಭವಿ ಮಗು ಕಡ್ಡಾಯವಾಗಿ 8ನೇ ತರಗತಿ ವಿದ್ಯಾಭ್ಯಾಸ ಮಾಡಿದ ದೃಢೀಕರಣ, ಬಾಲ ಕಾರ್ಮಿಕ, ಬಾಲ್ಯ ವಿವಾಹಕ್ಕೆ ಒಳಗಾಗಿರಬಾರದು ಎನ್ನುವ ನಿಯಮಕ್ಕೆ ಬದ್ಧರಾಗಿರುವ ಹೆಣ್ಣು ಮಕ್ಕಳಿಗೆ ಮಾತ್ರ ಈ ಹಣ ದೊರೆಯಲಿದೆ.

ಫಲಾನುಭವಿಗಳು ಚಾಲ್ತಿಯಲ್ಲಿನ ಬ್ಯಾಂಕ್‌ ಖಾತೆ ಸಂಖ್ಯೆ, ಐಎಸ್‌ಎಫ್‌ಸಿ ಕೋಡ್‌, ಆಧಾರ್‌ ಕಾರ್ಡ್‌ ಸಂಖ್ಯೆ, ಯೋಜನೆಯ ಒರಿಜಿನಲ್‌ ಬಾಂಡ್‌, ಮಗುವಿನ ಜನನ ಪ್ರಮಾಣ ಪತ್ರ, ತಂದೆ, ತಾಯಿ, ಮಗುವಿನ ಹೆಸರು ಬದಲಾವಣೆಯಾಗಿದ್ದರೆ ಸಂಬಂಧಿಸಿದ ಸಿಡಿಪಿಒ ಅವರಿಂದ ದೃಢೀಕರಣ ಪತ್ರ, ಬಾಂಡ್‌ ಕಳೆದಿದ್ದರೆ ಬಾಂಡ್‌ ನಕಲು ಪ್ರತಿ ಜತೆ ಎಫ್‌ಐಆರ್‌ ಪ್ರತಿ, ದತ್ತು ಮಕ್ಕಳಾಗಿದ್ದಲ್ಲಿಕಾನೂನಾತ್ಮಕವಾಗಿ ದತ್ತು ಪಡೆದ ಪೋಷಕರ ಹೆಸರನ್ನು ಸಿಡಿಪಿಒ ದೃಢೀಕರಿಸಬೇಕು. ತಾಲೂಕು ಕೋಡ್‌ ಬದಲಾವಣೆ ಇದ್ದಲ್ಲಿ ಸಿಡಿಪಿಒ ದೃಢೀಕರಿಸಿದ ನಂತರವೇ ಪರಿಪಕ್ವ ಹಣ ನೀಡಲಾಗುವುದು.

ಭಾಗ್ಯಲಕ್ಷ್ಮೀ ಯೋಜನೆಯಡಿ ಫಲಾನುಭವಿಗಳಿಂದ ಈಗಾಗಲೇ ಅರ್ಜಿ ಪಡೆದು ಅಗತ್ಯ ದಾಖಲೆಗಳನ್ನು ಸಂಗ್ರಹ ಮಾಡಲಾಗುತ್ತಿದೆ. ಅರ್ಜಿದಾರ ಮಗುವಿನ ಜನ್ಮ ದಿನಾಂಕದಿಂದ 18 ವರ್ಷ ಮೀರಿದ ಹೆಣ್ಣು ಮಕ್ಕಳಿಗೆ ಈ ಪರಿಪಕ್ವ ಹಣ ನೀಡಲಾಗುತ್ತದೆ. ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ರಾಜ್ಯಮಟ್ಟಕ್ಕೆ ಕಳುಹಿಸಲಾಗುತ್ತದೆ ಎಂದು ಭಾರತಿ ಬಣಕಾರ್‌, ಡಿಡಿ ಮಹಿಳಾ & ಮಕ್ಕಳ ಅಭಿವೃದ್ಧಿ ಇಲಾಖೆ, ಚಿತ್ರದುರ್ಗ ಇವರು ಹೇಳಿದ್ದಾರೆ.

ಇತರೆ ವಿಷಯಗಳು

ಅನ್ನಭಾಗ್ಯ ಯೋಜನೆಗೆ ಕುತ್ತು: ಉಚಿತ 5 ಕೆಜಿ ಅಕ್ಕಿ ದುಡ್ಡು ಇನ್ಮುಂದೆ ಯಾರಿಗೂ ಸಿಗಲ್ಲ

ಈ ನೌಕರರ ವಿರುದ್ಧ ಕಠಿಣ ಕ್ರಮ! ಸರ್ಕಾರದ ಖಡಕ್‌ ಎಚ್ಚರಿಕೆ


Share

Leave a Reply

Your email address will not be published. Required fields are marked *