rtgh
Headlines

ಯುವ ಸಮೃದ್ಧಿ ಸಮ್ಮೇಳನ ಬೃಹತ್‌ ಉದ್ಯೋಗ ಮೇಳ-2024; ಭಾಗವಹಿಸೋರಿಗೆ ಇಲ್ಲಿದೆ ಸಂಪೂರ್ಣ ಮಾಹಿತಿ

Bengaluru Job Fair
Share

ಹಲೋ ಸ್ನೇಹಿತರೇ, ಕರ್ನಾಟಕ ಸರ್ಕಾರದ ವತಿಯಿಂದ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ರಿಜಿಸ್ಟ್ರೇಷನ್‌ ಮಾಡುವುದು ಹೇಗೆ, ಉದ್ಯೋಗ ಮೇಳ ಸ್ಥಳ ಮತ್ತು ದಿನಾಂಕಗಳು, ಉದ್ಯೋಗಾಕಾಂಕ್ಷಿಗಳಿಗೆ ಮಹತ್ವದ ಸೂಚನೆಗಳನ್ನು ತಿಳಿಯಲು ಲೇಖನವನ್ನು ಓದಿ.

Bengaluru Job Fair

ಕರ್ನಾಟಕ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ & ಜೀವನೋಪಾಯ ಇಲಾಖೆ ವತಿಯಿಂದ ಬೆಂಗಳೂರಿನಲ್ಲಿ ಬೃಹತ್ ಉದ್ಯೋಗ ಮೇಳ ನೆಡೆಸಲಾಗುತ್ತಿದೆ. ಇದು ರಾಜ್ಯಮಟ್ಟದ ದೊಡ್ಡ ಉದ್ಯೋಗ ಮೇಳವಾಗಿದೆ, ಬೆಂಗಳೂರಿನಲ್ಲಿ ಫೆಬ್ರುವರಿ 26 & 27, 2024 ರಂದು 2 ದಿನಗಳ ಕಾಲ ನಡೆಯುತ್ತದೆ.

SSLC, 2nd PUC, ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮ, ITI, ಇಂಜಿನಿಯರಿಂಗ್, ಎಂಸಿಎ, ಎಂ.ಟೆಕ್‌, ಹೀಗೆ ಯಾವುದೇ ಶಿಕ್ಷಣ ಪಡೆದವರು /ಅನುತ್ತೀರ್ಣರಾಗಿದ್ದಲ್ಲಿ ಸಹ ಈ ಉದ್ಯೋಗ ಮೇಳಕ್ಕೆ ಹಾಜರಾಗಬಹುದು.

ಬೆಂಗಳೂರು ಬೃಹತ್ ಉದ್ಯೋಗ ಮೇಳ ನಡೆಸುವ ಸ್ಥಳ :

ಬೆಂಗಳೂರು ಅರಮನೆ ಹಿಂಭಾಗ, ಪ್ಯಾಡಾಕ್ ಮೈದಾನ, ಬೆಂಗಳೂರು, 560052.
ದಿನಾಂಕ: ಫೆಬ್ರುವರಿ 26 & 27, 2024

ಆಸಕ್ತಿಹೊಂದಿದವರು https://skillconnect.kaushalkar.com ಗೆ ಭೇಟಿ ನೀಡುವ ಮೂಲಕ ಮೊದಲು ರಿಜಿಸ್ಟ್ರೇಷನ್‌ ಪಡೆದುಕೊಳ್ಳಬಹುದು. ನಂತರ ‘ಉದ್ಯೋಗ ಮೇಳ >> ಅಭ್ಯರ್ಥಿ ನೋಂದಣಿ’ ಎಂಬಲ್ಲಿ ಕ್ಲಿಕ್ ಮಾಡಿ, ಕೇಳಲಾದ ಬೇಸಿಕ್ ವಿವರಗಳನ್ನು ನೀಡಿ ರಿಜಿಸ್ಟ್ರೇಷನ್‌ ಮಾಡಬಹುದು.

ರಿಜಿಸ್ಟ್ರೇಷನ್‌ ಮಾಡಲು ಇನ್ನು ಕಾಲಾವಕಾಶವಿದ್ದು, ಅವರು ಸಹ ಕರ್ನಾಟಕ ಸ್ಕಿಲ್ ಕನೆಕ್ಟ್‌ ಪೋರ್ಟಲ್‌ https://skillconnect.kaushalkar.com ಗೆ ಭೇಟಿ ನೀಡುವ ಮೂಲಕವಾಗಿ ‘ಉದ್ಯೋಗ ಮೇಳ >> ಉದ್ಯೋಗದಾತ ನೋಂದಣಿ’ ಎಂಬಲ್ಲಿ ಕ್ಲಿಕ್ ಮಾಡಿಕೊಂಡು, ಕೇಳಲಾದ ವಿವರಗಳನ್ನು ನೀಡಿ ರಿಜಿಸ್ಟ್ರೇಷನ್‌ ಪಡೆಯಬಹುದು.

ಉದ್ಯೋಗ ಮೇಳಕ್ಕೆ ರಿಜಿಸ್ಟ್ರೇಷನ್‌ ಪಡೆಯಲು ಡೈರೆಕ್ಟ್‌ ಲಿಂಕ್‌ಗಾಗಿ ಕ್ಲಿಕ್ ಮಾಡಿ
ಹೆಚ್ಚಿನ ವಿವರಕ್ಕೆ ಸಹಾಯವಾಣಿ ಸಂಖ್ಯೆ : 1800 599 9918

ಹಾಜರಾಗುವ ಉದ್ಯೋಗ ಆಕಾಂಕ್ಷಿಗಳಿಗೆ ವಿಶೇಷ ಸೂಚನೆ

  • ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗುವ ವೇಳೆ ತಮ್ಮ ಲೇಟೆಸ್ಟ್‌ Update ಮಾಡಲಾದ Resume ಅನ್ನು ತೆಗೆದುಕೊಂಡು ಹಾಜರಾಗಬೇಕು.
  • ಅಭ್ಯರ್ಥಿಗಳು ಕನಿಷ್ಠ 5 ಸಂದರ್ಶನಗಳನ್ನು ನೀಡಿ. ನಿಮ್ಮ bio-data 10 ಜೆರಾಕ್ಸ್‌ ಪ್ರತಿಗಳನ್ನು ತೆಗೆದುಕೊಂಡು ಹಾಜರಾಗಿ.
  • ನಿಮ್ಮ ವಿದ್ಯಾರ್ಹತೆಗೆ, ಅನುಭವಕ್ಕೆ ಸೂಕ್ತ ಎನಿಸುವ ಉದ್ಯೋಗಕ್ಕೆ ಮಾತ್ರ Resume ಅನ್ನು ನೀಡಿ, ಸಂದರ್ಶನಕ್ಕೆ ಹಾಜರಾಗಿ.
  • ಸಂದರ್ಶನಕ್ಕೆ ಸಹ ಸೂಕ್ತ ತಯಾರಿ ನಡೆಸಿಕೊಳ್ಳತಕ್ಕದ್ದು.
  • ಸಂದರ್ಶನ ಎಂದರೆ ಭಯಭೀತಿ ಬೇಡ. ಅವರಿಗೆ ನಿಮ್ಮಿಂದ ಕೆಲಸ ಆಗಬೇಕು ಎಂದರೆ, ಆ ಸ್ಕಿಲ್‌ಗಳು, ಅರ್ಹತೆ ನಿಮ್ಮಲ್ಲಿ ಇದ್ದಲ್ಲಿ ಆಯ್ಕೆ ಮಾಡಿಕೊಳ್ಳಲಾಗುವುದು. ಇದನ್ನು ತಲೆಯಲ್ಲಿ ಇಟ್ಟುಕೊಂಡು ಧೈರ್ಯದಿಂದ ಸಂದರ್ಶನಕ್ಕೆ ಹಾಜರಾಗಿ ಕೇಳಿದ ಪ್ರಶ್ನೆಗಳಿಗೆ ಉತ್ತರವನ್ನು ನೀಡಿ.
  • ನೀವು ಸಂದರ್ಶನ ನೀಡಿದ ಕಂಪನಿಯ ಸಂಪರ್ಕ ವಿವರಗಳನ್ನು ಸಹ ಪಡೆಯಲು ಮರೆಯದಿರಿ.
  • ಕೆಲಸ ಸಿಗದಿದ್ದರೂ ಸಹ ಒಂದು ಉತ್ತಮ ಅನುಭವ ಸಿಗುತ್ತದೆ. ಇದನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುವುದು ಉತ್ತಮ.

ಇತರೆ ವಿಷಯಗಳು

ಇಂಡಿಯಾ ಯಂಗ್ ಪ್ರೊಫೆಷನಲ್ ಸ್ಕೀಮ್‌! ಇಂದಿನಿಂದಲೇ ಅರ್ಜಿ ಪ್ರಕ್ರಿಯೆ ಆರಂಭ

11,000 ಪಡೆಯಲು ಎಲ್ಲಾ ವಿದ್ಯಾರ್ಥಿಗಳು ಅರ್ಹರು! ತಪ್ಪದೆ ಈ ವಿದ್ಯಾರ್ಥಿವೇತನಕ್ಕೆ ಅಪ್ಲೇ ಮಾಡಿ


Share

Leave a Reply

Your email address will not be published. Required fields are marked *