ಹಲೋ ಸ್ನೇಹಿತರೇ, ರೈತರು ತಮ್ಮ ಮೊಬೈಲ್‌ನಲ್ಲಿ ಆಧಾರ್ ಕಾರ್ಡ್ ನಂಬರ್ ಹಾಕಿ ಬೆಳೆ ವಿಮೆ ಅರ್ಜಿಯ ಸ್ಥಿತಿಯನ್ನು ಚೆಕ್ ಮಾಡುವುದು ಹೇಗೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.
ಈಗಾಗಲೇ ಅನೇಕ ಜಿಲ್ಲೆಯಲ್ಲಿ ಬೆಳೆ ವಿಮೆ ಪರಿಹಾರದ ಹಣವನ್ನು ರೈತರ ಖಾತೆಗೆ ವರ್ಗಾವಣೆ ಮಾಡಲಾಗಿದೆ ರೈತರು ತಮ್ಮ ಅಧಾರ್ ಕಾರ್ಡ್ ಸಂಖ್ಯೆ ಹಾಕಿ ತಮಗೆ ಎಷ್ಟು ಬೆಳೆ ವಿಮೆ ಪರಿಹಾರ ಬಂದಿದೆ ಎಂಬುದನ್ನು ಮೊಬೈಲ್ ನಲ್ಲಿ ಚೆಕ್ ಮಾಡಿ.
ಸರ್ಕಾರದಿಂದ ಬೆಳೆ ವಿಮೆ ಅರ್ಜಿಗಳ ನಿರ್ವವಣೆಗೆ ಸಿದ್ದಪಡಿಸಿರುವ samrakshane ಅಧಿಕೃತ ಪೋರ್ಟಲ್ ಅನ್ನು ಆಂಡ್ರಾಯ್ಡ್ ಮೊಬೈಲ್ ಮುಖಾಂತರ ಪ್ರವೇಶ ಮಾಡಿ ಈ ಕೆಳಗಿನ ವಿಧಾನವನ್ನು ಅನುಸರಿಸಿ ಅರ್ಜಿದಾರರ ರೈತರ ಆಧಾರ್ ಕಾರ್ಡ್ ನಂಬರ್ ನಮೂದಿಸಿ ಬೆಳೆ ವಿಮೆ ಅರ್ಜಿ ಯಾವ ಹಂತದಲ್ಲಿ? ಬೆಳೆ ವಿಮೆ ಪರಿಹಾರ ಜಮೆಯಾಗಿದ್ದರೆ ಎಷ್ಟು ಜಮೆಯಾಗಿದೆ? ಮಾಹಿತಿ ತಿಳಿಯಿರಿ.
ಆಧಾರ್ ಸಂಖ್ಯೆ ಹಾಕಿ ಬೆಳೆ ವಿಮೆ ಅರ್ಜಿ ಸ್ಥಿತಿʻಚೆಕ್ ಮಾಡಲು ಲಿಂಕ್:
Step-1: ಮೊದಲಿಗೆ Bele vime parihara status ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ samrakshane ವೆಬ್ ಸೈಟ್‌ಗೆ ಅನ್ನು ಭೇಟಿ ಮಾಡಿ ನಂತರ ಇಲ್ಲಿ ಬೆಳೆ ವಿಮೆ ಮಾಡಿಸಿದ ವರ್ಷ ಆಯ್ಕೆಯಲ್ಲಿ ನೀವು ಯಾವ ವರ್ಷದ ಬೆಳೆ ವಿಮೆ ಅರ್ಜಿ ಸ್ಥಿತಿ ತಿಳಿಯಲು ಇಚ್ಚಿಸುತ್ತೀರೋ ಆ ವರ್ಷವನ್ನು ಆಯ್ಕೆ ಮಾಡಿಕೊಳ್ಳಿ ಉದಾಹರಣೆ 2023-24 ಎಂದು ಆಯ್ಕೆ ಮಾಡಿ ಮುಂಗಾರು ಹಂಗಾಮಿನ ಬೆಳೆ ವಿಮೆ ಅರ್ಜಿಗೆ “Kharif”ಎಂದು ಆಯ್ಕೆ ಮಾಡಿಕೊಳ್ಳಿ, ಹಿಂಗಾರು ಇದ್ದಲಿ “rabi” ಬೇಸಿಗೆ ಹಂಗಾಮಿನ ಅರ್ಜಿ ಕುರಿತು ತಿಳಿದುಕೊಳ್ಳಲು “summer” ಎಂದು ಆಯ್ಕೆ ಮಾಡಿ ಅಲ್ಲೇ ಕೆಳಗೆ ಕಾಣುವ “ಮುಂದೆ/Go” button ಮೇಲೆ ಕ್ಲಿಕ್ ಮಾಡಿ.
Step-2: ಮೇಲಿನ ಹಂತ ಪೂರ್ಣಗೊಂಡ ನಂತರ ಈ ಪೇಜ್ ನಲ್ಲಿ ಕೆಳಗಡೆ Farmers ವಿಭಾಗದಲ್ಲಿ “Check status” button ಮೇಲೆ ಕ್ಲಿಕ್ ಮಾಡಿ.
Step-3: ಬಳಿಕ “Check status by type” ಆಯ್ಕೆ ವಿಭಾಗದಲ್ಲಿ “Aadhaar” ಎಂದು ಕ್ಲಿಕ್ ಮಾಡಿ ಅರ್ಜಿದಾರರ ರೈತರ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ ಕೆಳಗೆ ಕಾಣುವ Captcha ಕೋಡ್ ಅನ್ನು ನಮೂದಿಸಿ” Search” button ಮೇಲೆ ಕ್ಲಿಕ್ ಮಾಡಿ. ಆಗ ಅರ್ಜಿದಾರರ ಬೆಳೆ ವಿಮೆ ಅರ್ಜಿಯ ವಿವರ ಕೆಳಗೆ ತೋರಿಸುತ್ತದೆ. ಈ ಅರ್ಜಿ ವಿವರದ ಕೊನೆಯಲ್ಲಿ ಕಾಣುವ Select button ಮೇಲೆ ಕ್ಲಿಕ್ ಮಾಡಿಕೊಳ್ಳಿ.
Step-4: ನಂತರ ಈ ಪೇಜ್‌ನಲ್ಲಿ ನಿಮಗೆ ಬೆಳೆ ವಿಮೆ ಪರಿಹಾರದ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗಿದ್ದರೆ UTR Details ಕೆಳಗಡೆ ಯಾವ ದಿನ ಹಣ ಜಮೆಯಾಗಿದೆ? ಎಷ್ಟು ಮೊತ್ತ? UTR ಸಂಖ್ಯೆ ಇತರೆ ವಿವರ ತೋರಿಸುತ್ತದೆ.
ಬೆಳೆ ವಿಮೆ ಅಧಿಕೃತ ವೆಬ್ಸೈಟ್: Click here
ಇತರೆ ವಿಷಯಗಳು
ಮೊಬೈಲ್ ಬಳಕೆದಾರರಿಗೆ ‘ಬಿಗ್ ಶಾಕ್’! ಮತ್ತಷ್ಟು ದುಬಾರಿಯಾಗಲಿದೆ ರಿಚಾರ್ಜ್ ದರ
ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿದೆ ಮತ್ತೊಂದು ವೈರಸ್! ಕೋವಿಡ್-19 ಗಿಂತ ಮಾರಣಾಂತಿಕ