ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಪ್ರಸ್ತಕ ಸಾಲಿಗೆ ಮುಂಗಾರು ಹಂಗಾಮಿಗೆ ಕರ್ನಾಟಕದ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯ ಮೂಲಕ ರೈತರು ಕೃಷಿ ಬೆಳೆಗಳಿಗೆ ವಿಮೆಯ ನೋಂದಣಿಯನ್ನು ಮಾಡಿಕೊಳ್ಳಬೇಕು ಎಂದು ಸಹಾಯಕ ಕೃಷಿ ನಿರ್ದೇಶಕರು ಮಾಹಿತಿಯನ್ನು ನೀಡಿದ್ದಾರೆ.
ಸರ್ಗಿಕ ವಿಕೋಪಗಳಿಂದಾಗಿ ಬೆಳೆಯ ಹಾನಿಯಾದರೆ, ರೈತರಿಗೆ ವಿಮಾ ಯೋಜನೆಯು ಉಪಯೋಗವಾಗಲಿದೆ.
ನೋಂದಣಿಗೆ ಒಳಪಡುವ ಬೆಳೆಗಳು ಯಾವುವು?
- ಮುಸುಕಿನ ಜೋಳ
- ಜೋಳ
- ಸೂರ್ಯಕಾಂತಿ
- ತೊಗರಿ
- ಹತ್ತಿ
- ಕೆಂಪು ಮೆಣಸಿನಕಾಯಿ
- ಈರುಳ್ಳಿ ಬೆಳಿಗಳಿಗೆ
ಅರ್ಜಿ ಸಲ್ಲಿಸಲು ಕೊನೆಯದಿನಾಂಕ:
ಜುಲೈ 31 ಕೊನೆಯ ದಿನವಾಗಿದೆ.
ನವಣೆ, ರಾಗಿ, ಸಜ್ಜೆ, ಹುರುಳಿ, ತೊಗರಿ, ನೆಲಗಡಲೆ, ಭತ್ತ ಬೆಳೆಗಳಿಗೆ ಆಗಸ್ಟ್ 16 ಕೊನೆಯ ದಿನವಾಗಿದೆ. ಬೆಳೆ ವಿಮೆಯ ನೋಂದಣಿಗಾಗಿ ರೈತರು ತಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ, ಅಥವಾ ರೈತರು ತಮ್ಮ ವ್ಯವಹಾರದ ಬ್ಯಾಂಕ್‌ಗಳಿಗೆ ಸಂಪರ್ಕಿಬಹುದು. ಹೆಚ್ಚಿನ ಮಾಹಿತಿಗಾಗಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ರೈತ ಸಂಪರ್ಕ ಕೇಂದ್ರ ಅಥವಾ ವಿಮಾ ಸಂಸ್ಥೆಯ ತಾಲ್ಲೂಕು ಪ್ರತಿನಿಧಿ (ಮೊ.8277472721) ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ಮಾಹಿತಿಯನ್ನು ತಿಳಿಸಿದ್ದಾರೆ.
ಇತರೆ ವಿಷಯಗಳು:
ಭಾರತೀಯ ಅಂಚೆ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ! SSLC ಪಾಸ್ ಆದ್ರೆ ಸಾಕು
ರೈಲು ಸಂಚಾರ ಬಂದ್: ಬಸ್ ಟಿಕೆಟ್ ದರ ದುಪ್ಪಟ್ಟು ಏರಿಕೆ!