rtgh
Headlines

ಬಿಯರ್‌ ಪ್ರೀಯರಿಗೆ ಬಿಗ್ ಶಾಕ್‌! ಮತ್ತೆ ಬೆಲೆ ಹೆಚ್ಚಿಸಿದ ಸರ್ಕಾರ

beer price increase in karnataka
Share

ಹಲೋ ಸ್ನೇಹಿತರೇ, ಮದ್ಯ ಪ್ರಿಯರಿಗೆ ಮತ್ತೆ ಬೆಲೆ ಏರಿಕೆ ಬಿಸಿ ತಟ್ಟಿದೆ ಬಿಯರ್‌ ಮೇಲೆ ತೆರಿಗೆ ಹೆಚ್ಚಿಸಲಾಗಿದ್ದು,ಇದರಿಂದ ಇಂದಿನಿಂದಲೇ ಬೆಲೆ 10 ರಿಂದ 20 ರೂಪಾಯಿ ಏರಿಕೆಯಾಗಲಿದೆ. ರಾಜ್ಯದಲ್ಲಿ ಅಬಕಾರಿ ಇಲಾಖೆ ಕಳೆದ 17 ತಿಂಗಳಲ್ಲಿ 5ನೇ ಬಾರಿಗೆ ಬಿಯರ್‌ ಬೆಲೆ ಏರಿಕೆಯಾಗಿದೆ.

beer price increase in karnataka

ಒಂದು ತಿಂಗಳ ಹಿಂದೆಯಷ್ಟೆ ಕಚ್ಚಾ ವಸ್ತುಗಳ ಬೆಲೆ ಏರಿಕೆ ಕಾರಣ ನೀಡಿ ಮದ್ಯ ತಯಾರಿಕೆ ಕಂಪನಿಗಳು ದರ ಏರಿಸಿತ್ತು ಆದರೆ ಈಗ ಮತ್ತೆ ಹೆಚ್ಚಿಸಲಾಗಿದೆ 1 ವರ್ಷದಲ್ಲಿ ಸರಿ ಸುಮಾರು 50 ರಿಂದ 60 ರೂ.ವರೆಗೆ ಏರಿಕೆಯಾಗಿದೆ.

ಸರ್ಕಾರ ಈ ಹಿಂದೆ ಬಿಯರ್‌ ಮೇಲೆ ಶೇ.20ರಷ್ಟು ಹೆಚ್ಚುವರಿ ಸುಂಕ ವಿಧಿಸಿತ್ತು. ಆ ನಂತರ ಉತ್ಪಾದನಾ ವೆಚ್ಚ ಸರಿದೂಗಿಸಿಕೊಳ್ಳಲು ಬಿಯರ್‌ ಕಂಪನಿಗಳು ಫೆಬ್ರವರಿ ತಿಂಗಳಲ್ಲಿ ಬಿಯರ್‌ ಬೆಲೆ 10 ರೂ.ವರೆಗೆ ಏರಿಕೆ ಮಾಡಿತ್ತು.ಈಗ ಕಂಪನಿಗಳು ಕಚ್ಚಾ ವಸ್ತುಗಳ ಬೆಲೆ ಏರಿಕೆ ಕಾರಣ ನೀಡಿ ಬಿಯರ್‌ ದರ ಏರಿಕೆ ಮಾಡಿವೆ. ಈ ಮೂಲಕ 15 ತಿಂಗಳ ಅಂತರದಲ್ಲಿ ಬಿಯರ್‌ ಬೆಲೆ ಸುಮಾರು 50 ರಿಂದ 60 ರೂ. ವರೆಗೆ ಹೆಚ್ಚಳವಾದಂತಾಗಿದೆ.

ಇದನ್ನೂ ಸಹ ಓದಿ : ಒಂದೇ ದಿನಕ್ಕೆ ಚಿನ್ನದ ಬೆಲೆಯಲ್ಲಿ ₹10,000 ಇಳಿಕೆ.! ಬೆಳ್ಳಿ ದರ ಏರಿಕೆ

ಕೆಲವು ಕಂಪನಿಗಳ ಬಿಯರ್‌ ದರ ಕಳೆದ ಗುರುವಾರದಿಂದ ಏರಿಕೆಯಾಗಿದೆ. ಇನ್ನು ಕೆಲವು ಕಂಪನಿಗಳ ಪರಿಷ್ಕೃತ ದರ ಮಂಗಳವಾರ, ಬುಧವಾರದಿಂದ ಜಾರಿಯಾಗಲಿದೆ. ಎಲ್ಲ ಬ್ರ್ಯಾಂಡ್‌ಗಳ ಬಿಯರ್‌ ಬೆಲೆ ಪ್ರತಿ ಬಾಟಲಿಗೆ 10 ರಿಂದ 20 ರೂಪಾಯಿವರೆಗೆ ಹೆಚ್ಚಳವಾಗಿದೆ.

ರಾಜ್ಯ ಸರ್ಕಾರ ಮೊದಲಿಗೆ ಮದ್ಯದ ಮೇಲಿನ ಸುಂಕ ಏರಿಸಿತ್ತು. ನಂತರ ವಾಣಿಜ್ಯ ವಾಹನಗಳ ಮೇಲಿನ ಸಾರಿಗೆ ಸೆಸ್‌‍ ಅನ್ನು ಏರಿಕೆ ಮಾಡಿತ್ತು. ನಂತರ ಮುಂದ್ರಾಂಕ ಶುಲ್ಕವನ್ನು ಏರಿಕೆ ಮಾಡಿತ್ತು. ನಂತರ ಬಿತ್ತನೆ ಬೀಜದ ಬೆಲೆ ಶೇ50-60 ರಷ್ಟು ಹೆಚ್ಚಳ ಮಾಡಿತ್ತು. ಪೆಟ್ರೋಲ್‌ ಡೀಸೆಲ್‌ ಬೆಲೆ ಪ್ರತಿ ಲೀಟರ್‌ಗೆ 3 ರೂ. ಹೆಚ್ಚಳವಾಗಿತ್ತು. ತದನಂತರದಲ್ಲಿ ನಂದಿನಿ ಹಾಲಿನ ದರ 2 ರೂ. ಏರಿಕೆ ಮಾಡಿ ಈಗ ಮತ್ತೆ ಮದ್ಯದ ತೆರಿಗೆ ಮೇಲೆ ಕನ್ಣು ಹಾಕಿದೆ.

ಇತರೆ ವಿಷಯಗಳು:

ಮಳೆಹಾನಿ ಸಂತ್ರಸ್ತರಿಗೆ ಗುಡ್ ನ್ಯೂಸ್! ನೆರೆ ಪರಿಹಾರಕ್ಕೆ 777 ಕೋಟಿ ಹಣ ಬಿಡುಗಡೆ

ಈ ಜಿಲ್ಲೆಯ ಮಹಿಳೆಯರಿಗೆ ನಾಳೆಯೇ ಖಾತೆಗೆ ₹4,000 ಜಮಾ

ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಪ್ರಯಾಣಿಸಿ! ಇನ್ಮುಂದೆ ಬಸ್​ಗಳಲ್ಲಿ ನಡೆಯಲಿದೆ ಡಿಜಿಟಲ್ ಟಿಕೆಟಿಂಗ್


Share

Leave a Reply

Your email address will not be published. Required fields are marked *