ಹಲೋ ಸ್ನೇಹಿತರೇ, ನಮ್ಮ ಆರೋಗ್ಯ ಒಂದು ಚೆನ್ನಾಗಿದ್ದರೆ, ನಾವು ಏನನ್ನು ಬೇಕಾದರೂ ಮಾಡಬಹುದು. ಆರೋಗ್ಯವೇ ಭಾಗ್ಯ ಎಂದು ಹೇಳಿದರೆ ಕೂಡ ತಪ್ಪಾಗೋದಿಲ್ಲ. ಆದರೆ ಈಗಿನ ಕಾಲದಲ್ಲಿ ಎಲ್ಲವು ಪ್ರೈವೆಟೈಸೇಷನ್ ಆಗಿ, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವುದು ಕೂಡ ಹೆಚ್ಚು ದುಡ್ಡು ಖರ್ಚು ಮಾಡಿ ಪಡೆದುಕೊಳ್ಳುವ ಸೌಲಭ್ಯ ಆಗಿದೆ.
ಬಡವರಿಗೆ ಇದು ಸಿಗುವುದು ಕಷ್ಟವಾಗಿದೆ. ಹಾಗಾಗಿ ಸರ್ಕಾರವು ಬಡವರಿಗೆ ಅನುಕೂಲ ಆಗುವ ಹಾಗೆ ಉಚಿತ ಆರೋಗ್ಯ ಸೇವೆ ಒದಗಿಸುವ ಯೋಜನೆಯನ್ನು ಜಾರಿಗೆ ತಂದಿದೆ. ಇದು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ. ಇದು ಬಿಪಿಎಲ್ ಕಾರ್ಡ್ ಹೊಂದಿರುವವರಿಗಾಗಿ ಜಾರಿಗೆ ತಂದಿರುವ ಯೋಜನೆ ಆಗಿದ್ದು, 2018ರಲ್ಲೇ ನಮ್ಮ ರಾಜ್ಯದಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಯಿತು. ಈ ಒಂದು ಯೋಜನೆಯ ಮೂಲಕ ರಾಜ್ಯದ ಬಡಜನರಿಗೆ ಉಚಿತವಾಗಿ ಆರೋಗ್ಯ ಸೇವೆ ನೀಡುವ ಸೌಭಾಗ್ಯವನ್ನು ಸರ್ಕಾರ ಜಾರಿಗೆ ತಂದಿದೆ.
ರೇಷನ್ ಕಾರ್ಡ್ ಕಾರ್ಡ್ ಹೊಂದಿರುವ ಜನರು ಈ ಉಚಿತ ಚಿಕಿತ್ಸೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಈ ಯೋಜನೆಯಲ್ಲಿ ಕೆಲವು ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಕೂಡ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು.
ಆಸ್ಪತ್ರೆಯಲ್ಲಿ ಉತ್ತಮ ಗುಣಮಟ್ಟದ ಆರೋಗ್ಯ ಒದಗಿಸುವ ಯೋಜನೆ ಇದಾಗಿದ್ದು, ಆಸ್ಪತ್ರೆಗೆ ಅಡ್ಮಿಟ್ ಆಗಿರುವ ಖರ್ಚು, ಟ್ರೀಟ್ಮೆಂಟ್, ಮೆಡಿಸಿನ್, ಡಿಸ್ಚಾರ್ಜ್ ಆದ ನಂತರ ಕೊಡುವ ಚಿಕಿತ್ಸೆಯ ಖರ್ಚು, ಇದೆಲ್ಲವನ್ನು ಕೂಡ ಈ ಒಂದು ಕಾರ್ಡ್ ಭರಿಸುತ್ತದೆ ಎನ್ನುವುದು ನಿಮಗೆ ಗೊತ್ತಿರಲಿ. ಇದೊಂದು ಕಾರ್ಡ್ ನಿಮ್ಮ ಹತ್ತಿರ ಇದ್ದರೆ ಸಾಕು, ಇದರ ಮೂಲಕ ವರ್ಷಕ್ಕೆ 5 ಲಕ್ಷದಷ್ಟು ಫ್ರೀ ಟ್ರೀಟ್ಮೆಂಟ್ ಸಿಗುತ್ತದೆ. ವರ್ಷಕ್ಕೆ ಒಂದು ಕುಟುಂಬಕ್ಕೆ 1.50 ಲಕ್ಷ ರೂಪಾಯಿಗಳವರೆಗು ಚಿಕಿತ್ಸೆಯ ಸೌಲಭ್ಯ ಸಿಗುತ್ತದೆ.
ಇದನ್ನೂ ಸಹ ಓದಿ : ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತೆ 10 ದಿನ ಅವಕಾಶ.! ಅಪ್ಲೇ ಮಾಡಲು ಇದೆ ಕೊನೆ ಚಾನ್ಸ್
ಈ ಸೌಲಭ್ಯ ಪಡೆಯಲು ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಈ ಎರಡು ಇದ್ದರೆ ಸಾಕು. ಬಿಪಿಎಲ್ ರೇಷನ್ ಕಾರ್ಡ್ ಇರುವವರಿಗೆ 1.5 ಲಕ್ಷದವರೆಗೂ ಟ್ರೀಟ್ಮೆಂಟ್ ಪಡೆಯುವುದಕ್ಕೆ ಅನುಮತಿ ಇದೆ. ಸರ್ಕಾರದ ಈ ಅಪೂರ್ವ ಸೌಲಭ್ಯ ಉಪಯೋಗ ಪಡೆಯುವುದನ್ನು ನೀವು ಮಿಸ್ ಮಾಡಿಕೊಳ್ಳಬೇಡಿ.
ಅವಶ್ಯಕತೆ ಇರುವ ದಾಖಲೆಗಳು:
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಪ್ಯಾನ್ ಕಾರ್ಡ್
- ಕ್ಯಾಸ್ಟ್ ಸರ್ಟಿಫಿಕೇಟ್
- ಇನ್ಕಮ್ ಸರ್ಟಿಫಿಕೇಟ್
ಈ ಯೋಜನೆಯ ಸೌಲಭ್ಯ ಪಡೆಯಲು abdm.gov.in ಈ ಲಿಂಕ್ ಗೆ ಭೇಟಿ ನೀಡಬೇಕು. ಇಲ್ಲಿ ಆಯುಷ್ಮಾನ್ ಭಾರತ್ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಈ ಸೌಲಭ್ಯದಿಂದ ನೀವು ಪ್ರೈವೇಟ್ ಆಸ್ಪತ್ರೆ ಮತ್ತು ಸರ್ಕಾರಿ ಆಸ್ಪತ್ರೆ ಎರಡು ಕಡೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳಬಹುದು.
ಇತರೆ ವಿಷಯಗಳು:
ದಾವಣಗೆರೆ ಜಿಲ್ಲಾ ಪಂಚಾಯತಿ ನೇಮಕಾತಿ.! ಆಸಕ್ತ ಅಭ್ಯರ್ಥಿಗಳು ತಕ್ಷಣ ಅಪ್ಲೇ ಮಾಡಿ
ವಾಹನ ಸವಾರರೇ ಹುಷಾರ್..! ಇನ್ಮುಂದೆ ಈ ನಿಯಮ ಉಲ್ಲಂಘಿಸಿದ್ರೆ ಬೀಳುತ್ತೆ ಕೇಸ್..!
ಆಧಾರ್ ಕಾರ್ಡ್ ನಿಯಮದಲ್ಲಿ ಹೊಸ ಅಳವಡಿಕೆ..!