rtgh
Headlines

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಸಹಾಯಧನಕ್ಕೆ ಅರ್ಜಿ ಆಹ್ವಾನ..!

Arivu Education Loan
Share

ನಮಸ್ಜಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಕರ್ನಾಟಕದ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಪ್ರಸ್ತಕದ ಸಾಲಿಗೆ ಅರಿವು ಶೈಕ್ಷಣಿಕ ಸಾಲದ ಯೋಜನೆಯಡಿ CET, ನೀಟ್ ಮುಖಾಂತರ ವೃತ್ತಿಪರ ಕೋರ್ಸ್ಗಳಿಗೆ ಪ್ರವೇಶವನ್ನು ಪಡೆಯಬಯಸುವಂತಹ ವಿದ್ಯಾರ್ಥಿಗಳಿಗೆ ಸಾಲದ ಸೌಲಭ್ಯಕ್ಕಾಗಿ ಆನ್ಲೈನ್ ನ ಮೂಲಕವಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.

Arivu Education Loan

ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಜೈನ್ಸ್, ಕ್ರಿಶ್ಚಿಯನ್, ಬೌದ್ಧರು, ಪಾರ್ಸಿ, ಸಿಖ್ಖರು ಮತ್ತು ಆಂಗ್ಲೋ ಇಂಡಿಯನ್ ಸಮುದಾಯದ ವಿದ್ಯಾರ್ಥಿಗಳಿಂದ CET, ನೀಟ್ ಮುಖಾಂತರ ಎಂಬಿಬಿಎಸ್, ಬಿಡಿಎಸ್, ಬಿ.ಆಯುಷ್, ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್, ಬಿಇ, ಬ್ಯಾಚುಲರ್ ಆಫ್ ಟೆಕ್ನಾಲಜಿ ಕೋರ್ಸ್ ಫಾರ್ಮಸಿ, ಅಗ್ರಿಕಲ್ಚರಲ್ ಸೈನ್ಸ್, ವೆಟೆರಿನರಿ, ಫಾರ್ಮ್ ಸೈನ್ಸ್ ಕೋರ್ಸ್ಗಳಿಗೆ ಪ್ರವೇಶವನ್ನು ಹೊಂದುವಂತಹ ವಿದ್ಯಾರ್ಥಿಗಳಿಗೆ ನಿಗಮದಿಂದ ಒದಗಿಸುವ ಅರಿವು ಯೋಜನೆಯ ಮೂಲಕ ಸಾಲ ಸೌಲಭ್ಯವನ್ನು ನೀಡಲಾಗುವುದು.

ಅರ್ಜಿ ಸಲ್ಲಿಸುವವರು ನಿಗಮದ ವೆಬ್ಸೈಟ್ https://kmdconline.karnataka.gov.in ಗೆ ಭೇಟಿಯನ್ನು ನೀಡಿ ಅರ್ಜಿ ಸಲ್ಲಿಸಬಹುದು, ಭರ್ತಿ ಮಾಡಿ ಅದರ ಪ್ರಿಂಟ್ಕಾಪಿಯನ್ನು ಅಲ್ಪಸಂಖ್ಯಾತರ ಅಭಿವೃದ್ಧಿಯ ನಿಗಮದ ಜಿಲ್ಲಾಯ ವ್ಯವಸ್ಥಾಪಕರ ಕಚೇರಿಗೆ ಸಲ್ಲಿಸಬೇಕು.

ಇದನ್ನೂ ಸಹ ಓದಿ: ಇನ್ಮುಂದೆ ಈ ಯೋಜನೆಯಡಿ ಸಿಗಲಿದೆ 10 ಸಾವಿರ ರೂ. ಪಿಂಚಣಿ!

ಇದಕ್ಕೆ ಬೇಕಾದ ದಾಖಲೆಗಳು:

  • ಎಸ್ಎಸ್ಎಲ್ಸಿ ಅಂಕಪಟ್ಟಿ,
  • ಪಿಯುಸಿ ಅಂಕಪಟ್ಟಿ,
  • ಆಧಾರ್ಕಾರ್ಡ್,
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ,
  • ರೇಷನ್ಕಾರ್ಡ್,
  • ಅಭ್ಯರ್ಥಿ ಮತ್ತು ತಂದೆ, ತಾಯಿಯ 5 ಭಾವಚಿತ್ರಗಳು,
  • ಸಿಇಟಿ, ನೀಟ್ ಗೆ ಸಂಬಂಧಿಸಿದ ಪ್ರವೇಶ ಪತ್ರ ಹಾಗೂ ಇತರೆ ದಾಖಲೆಗಳು ಮತ್ತು ನೋಟರಿ (ಬಾಂಡ್ ಪೇಪರ್)

ಈ ಎಲ್ಲಾ ದಾಖಲೆಗಳನ್ನು ಸಲ್ಲಿಸಬೇಕು. ಅಲ್ಪಸಂಖ್ಯಾತರ ಅಭಿವೃದ್ಧಿಯ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯನ್ನು ಹೊರಡಿಸಲಾಗಿದೆ.

ಬಂದ್‌ ಆಗಲಿದ್ಯಾ ಉಚಿತ ಗ್ಯಾಸ್‌ ಕನೆಕ್ಷನ್..! LPG KYC ಬಗ್ಗೆ ಕೇಂದ್ರ ಸಚಿವರ ದೊಡ್ಡ ಘೋಷಣೆ

ಸರ್ಕಾರಿ ನೌಕರರಿಗೂ ಸಿಕ್ತು ಗ್ಯಾರೆಂಟಿ.! ಈ ವ್ಯಾಪ್ತಿಗೆ ಸೇರಿದವರಿಗೆ ಶೇ.50ರಷ್ಟು ಪಿಂಚಣಿ


Share

Leave a Reply

Your email address will not be published. Required fields are marked *