ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ(ಜಿಟಿಟಿಸಿ) ಶಿವಮೊಗ್ಗ ಇಲ್ಲಿ ‘ಎಐಟಿಟಿ- ಎಸ್ಸಿಪಿ/ಟಿಎಸ್ಪಿ ಯೋಜನೆಯಡಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ/ಯುವತಿಯರಿಗೆ ಉಚಿತವಾಗಿ ಕೌಶಲ್ಯಾಭಿವೃದ್ದಿ ತರಬೇತಿಯನ್ನು ನೀಡಲು ಅರ್ಜಿಯನ್ನು ಆಹ್ವಾನಿಸಿದ್ಧಾರೆ.
ಐಟಿಐ ಆದವರಿಗೆ ಸಿಎನ್ಸಿ ಆಪರೇಟರ್-ವರ್ಟಿಕಲ್ ಮಷಿನ್ನಿಂಗ್ ಸೆಂಟರ್ 4 ತಿಂಗಳ ತರಬೇತಿ, ಹಾಗೂ ಡಿಪ್ಲೊಮ/ಬಿಇ ಆದವರಿಗೆ ಸಿಎನ್ಸಿ ಪ್ರೊಗ್ರಾಮರ್/ಪ್ರೊ-ಇ/ಆಟೋಕ್ಯಾಡ್ 4 ತಿಂಗಳ ತರಬೇತಿ, ಹಾಗೂ ಎಸ್ಎಸ್ಎಲ್ಸಿ ಆದವರಿಗೆ 4 ತಿಂಗಳ ಮಿಲ್ಲರ್/ಟರ್ನರ್ ಮತ್ತು 12 ತಿಂಗಳ ಅವಧಿಯ ಟೂಲ್ ರೂಂ ಮಷಿನಿಸ್ಟ್ ತರಬೇತಿಯನ್ನು ಕೊಡಲಾಗುತ್ತದೆ.
ತರಬೇತಿಯ ಸಮಯದಲ್ಲಿ 2500 ರೂಪಾಯಿ ಪ್ರತಿ ತಿಂಗಳು ಶಿಷ್ಯವೇತನವಾಗಿ ನೀಡಲಾಗುವುದು. ಆಸಕ್ತ ಅರ್ಹ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ ದಾಖಲಾತಿಗಳು, ವಯಸ್ಸು ಹಾಗೂ ವೈಯಕ್ತಿಕ ವಿವರಗಳೊಂದಿಗೆ ಜುಲೈ 27 ರೊಳಗೆ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿಯ ಕೇಂದ್ರ, ಪ್ಲಾಟ್ ನಂ ಸಿಎ-38, ನಿದಿಗೆ ಇಂಡಸ್ಟ್ರಿಯಲ್ ಏರಿಯಾ, ಮಾಚೇನಹಳ್ಳಿ, ಶಿವಮೊಗ್ಗ ಇಲ್ಲಿಗೆ ಅರ್ಜಿಯನ್ನು ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ:
08182-246054, ಮೊ.ಸಂ 9448307027, 9449286543 ನ್ನು ಸಂಪರ್ಕಿಸಬಹುದೆಂದು ಜಿಟಿಟಿಸಿ ಪ್ರಾಚಾರ್ಯರು ಮಾಹಿತಿಯನ್ನು ತಿಳಿಸಿದ್ದಾರೆ.
ಇತರೆ ವಿಷಯಗಳು:
ಇಂದಿನಿಂದ ಶಾಲಾ ಕಾಲೇಜುಗಳಿಗೆ 3 ದಿನ ರಜೆ ಘೋಷಣೆ!
ಅರಿವು ಯೋಜನೆಯಡಿ ವಿದ್ಯಾರ್ಥಿಗಳಿಗೆ ಅರ್ಜಿ ಆಹ್ವಾನ!