ಹಲೋ ಸ್ನೇಹಿತರೆ, ಹಲವಾರು ಜನರು ಎಷ್ಟೋ ಬಾರಿ ನಮ್ಮ ಹೆಸರಲ್ಲಿ ಆಸ್ತಿ ಇದ್ದರೆ ತೊಂದರೆ ಆಗುತ್ತದೆ ಎಂದು ಪತ್ನಿ ಅಥವಾ ಮನೆಯ ಕುಟುಂಬದ ಇತರ ಸದಸ್ಯರ ಹೆಸರಲ್ಲಿ ಆಸ್ತಿ ಕೊಂಡುಕೊಳ್ಳುತ್ತಾರೆ ಆದರೆ ಆ ಒಂದು ಆಸ್ತಿಯ ನಿಜವಾದ ಹಕ್ಕುದಾರರು ಯಾರಾಗಲಿದ್ದಾರೆ ಎಂಬುದು ತಿಳಿಯುವುದಿಲ್ಲ ಈ ಬಗ್ಗೆ ಹೈ ಕೋರ್ಟ್ ಈ ನಿಯಮ ಏನು ಹೇಳುತ್ತದೆ? ನಿಯಮದಲ್ಲಿ ಏನಿರಲಿದೆ ಎಂಬ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಿದೆ ಕೊನೆವರೆಗೂ ಓದಿ.
ಯಾವುದೇ ತರಹದ ಆಸ್ತಿ ಖರೀದಿ ಮಾಡುವಾಗ ಅದಕ್ಕೆ ಅದರದ್ದೇ ಆದ ನಿಯಮಗಳು ಇರುತ್ತವೆ. ಆಸ್ತಿಗೆ ಸಂಬಂಧಿಸಿದಂತೆ ತೆರಿಗೆ ಕೂಡ ಇರಲಿದೆ, ಅದನ್ನು ಸಹ ಕಟ್ಟಬೇಕು. ತೆರಿಗೆ ಹೊರೆ ತಪ್ಪಿಸಲು ಹೆಂಡತಿ ಹೆಸರಲ್ಲಿ ಆಸ್ತಿ ಖರೀದಿ ಮಾಡಿದರೆ ಅದರ ಹಕ್ಕುದಾರರು ಯಾರು ಆಗಲಿದ್ದಾರೆ ಎಂಬ ಅನುಮಾನ ಎಲ್ಲರಿಗೂ ಮೂಡುತ್ತದೆ. ಹಾಗಾದರೆ ನಿಯಮದಲ್ಲಿ ಏನಿದೆ ಎಂಬುದನ್ನು ತಿಳಿದು ಮುನ್ನಡೆದರೆ ಎಲ್ಲ ಸಮಸ್ಯೆ ಪರಿಹಾರ ಕಾಣಲಿದೆ.
ಯಾವುದು ಈ ಕೇಸ್?
ಇತ್ತೀಚೆಗಷ್ಟೇ ಅಲಹಾಬಾದ್ ಹೈಕೋರ್ಟ್ ನಲ್ಲಿ ಮೃತ ತಂದೆಯ ಆಸ್ತಿಯ ಮಾಲಿಕತ್ವವನ್ನು ಕೋರಿ ಮಗ ಅರ್ಜಿ ಸಲ್ಲಿಸಿದ್ದಾರೆ. ಅದರ ಪ್ರಕಾರ ಪರಿಶೀಲನೆ ಮಾಡಿದ ನಂತರ ಆ ಒಂದು ಆಸ್ತಿಯೂ ಪತ್ನಿಯ ಹೆಸರಲ್ಲಿ ಖರೀದಿ ಮಾಡಿದ್ದಾರೆ ಎಂಬುದು ತಿಳಿದು ಬಂದಿದೆ. ಹಾಗಾಗಿ ಈ ಬಗ್ಗೆ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅಲಹಾಬಾದ್ ಹೈಕೋರ್ಟ್ ನ ಮುಖ್ಯ ನ್ಯಾಯ ಮೂರ್ತಿಗಳಾದ ಅರುಣ್ ಕುಮಾರ್ ಸಿಂಗ್ ದೇಶ್ವಾಲ್ ಅವರು ಈ ವಿಷಯದ ಬಗ್ಗೆ ತೀರ್ಪನ್ನು ನೀಡಿದ್ದಾರೆ.
ಇದನ್ನು ಓದಿ: ಉಚಿತ ಹೊಲಿಗೆ ಯಂತ್ರ ಅರ್ಜಿಗೆ ಕೊನೆಯ ದಿನಾಂಕ ಹತ್ತಿರ!
ಹೈಕೋರ್ಟ್ ನೀಡಿದ ತೀರ್ಪೇನು?
ಪತಿ ಆಸ್ತಿ ಖರೀದಿ ಮಾಡಿದ್ದರೆ ಆ ಆಸ್ತಿಯ ಹಕ್ಕು ಮನೆಯ ಇತರ ಎಲ್ಲಾ ಸದಸ್ಯರಿಗೂ ಕೂಡ ಇರಲಿದೆ. ಗೃಹಿಣಿಯಾಗಿದ್ದು ಸ್ವತಂತ್ರ ಆದಾಯ ಮೂಲ ಹೊಂದಿರದ ಪತ್ನಿಯ ಹೆಸರಲ್ಲಿ ಪತಿ ಖರೀದಿ ಮಾಡಿದ್ದರೆ ಅದು ಕುಟುಂಬದ ಆಸ್ತಿ ಎಂದು ಪರಿಗಣಿಸಬೇಕು ಎಂದು ಅಲಹಾಬಾದ್ ಹೈ ಕೋರ್ಟ್ ಈ ಬಗ್ಗೆ ತೀರ್ಪು ನೀಡಿದೆ. ಗೃಹಿಣಿ ಮತ್ತು ಕುಟುಂಬ ಯಾವುದೇ ಆದಾಯ ಮೂಲ ಹೊಂದಿರದ್ದರೆ ಆಗ ಅದು ಕುಟುಂಬ ಆಸ್ತಿ ಆಗಲಿದೆ ಎಂದು ತೀರ್ಪು ನೀಡಲಾಗಿದೆ.
ಈ ಕಾರಣಕ್ಕಾಗಿ ಈ ಒಂದು ಕೇಸ್ ನಲ್ಲಿ ಆ ಆಸ್ತಿ ಅವಿಭಕ್ತ ಕುಟುಂಬದ ಆಸ್ತಿ ಆಗುತ್ತದೆ ವಿನಃ ಆಕೆಗೆ ಸೇರಿದ ವೈಯಕ್ತಿಕ ಆಸ್ತಿ ಅಲ್ಲ ಎಂಬುದನ್ನು ತಿಳಿಸಿದೆ. ಅದೇ ರೀತಿ ಪತ್ನಿಯ ಹೆಸರಲ್ಲಿ ಇರುವ ಆಸ್ತಿ ಆಕೆಯ ಹಣದಿಂದ ಖರೀದಿ ಮಾಡಿದ್ದಾದರೆ ಅದಕ್ಕೆ ಸಾಕ್ಷಿ ಕೂಡ ಅಗತ್ಯವಾಗಿ ಬೇಕಾಗಲಿದೆ ಎಂದು ಹಳೆಯ ಕೆಲವು ಪ್ರಕರಣದ ಉಲ್ಲೇಖ ಕೂಡ ಮಾಡಲಾಗಿದೆ. ಏಕ ಸದಸ್ಯ ಪೀಠವು 1988ರ ಬೇನಾಮಿ ಆಸ್ತಿ ವಹಿವಾಟು ನಿಷೇಧ ಕಾಯ್ದೆ ಸೆಕ್ಷನ್ 2 (9) B ಅಡಿಯಲ್ಲಿ ಈ ತೀರ್ಪು ನೀಡಲಾಯಿತು. ಹಾಗಾಗಿ ಮೂರನೇ ವ್ಯಕ್ತಿಯ ಹೆಸರಿಗೆ ಆಸ್ತಿ ವರ್ಗಾವಣೆ ಆಗದಂತೆ ಇದು ಅವಿಭಕ್ತ ಕುಟುಂಬ ಆಸ್ತಿ ಎಂದು ಹೈಕೋರ್ಟ್ ತೀರ್ಪು ನೀಡಿದೆ.
ಇತರೆ ವಿಷಯಗಳು:
ಶಾಶ್ವತ ಮನೆ ಪಡೆಯಲು ಮತ್ತೊಂದು ಅವಕಾಶ! ಸಹಾಯಧನದಲ್ಲಿ ಮತ್ತಷ್ಟು ಹೆಚ್ಚಳ
ರೈತರಿಗೆ ಕೃಷಿ ಭಾಗ್ಯ ಯೋಜನೆಯಡಿ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ