ಹಲೋ ಸ್ನೇಹಿತರೇ, ಕೇಂದ್ರ ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇಲ್ಲಿದೆ ಸುವರ್ಣಾವಕಾಶ, BSNL ಕಂಪನಿಯಲ್ಲಿ ಬರೋಬ್ಬರಿ 558 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.
ಭಾರತ್ ಸಂಚಾರ ನಿಗಮ ಲಿಮಿಟೆಡ್(BSNL) ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಒಟ್ಟು 558 ಸೀನಿಯರ್ ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗಳು ಖಾಲಿ ಇದೆ, ಅರ್ಹ ಅಭ್ಯರ್ಥಿಗಳು ಇದಕ್ಕೆ ಅರ್ಜಿ ಸಲ್ಲಿಸಬಹುದು. ಕೇಂದ್ರ ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ.
Contents
ಹುದ್ದೆಯ ವಿವರ:
450 ಟೆಲಿಕಾಂ ಆಪರೇಶನ್ಸ್, 84 ಫೈನಾನ್ಸ್, 13 ಸಿವಿಲ್ & 11 ಎಲೆಕ್ಟ್ರಿಕಲ್ ಹುದ್ದೆಗಳು ಖಾಲಿಯಿದೆ.
ವಿದ್ಯಾರ್ಹತೆ:
ಟೆಲಿಕಾಂ ಆಪರೇಶನ್ಸ್ಗೆ EEE/ECE/CSE/IT/ಇನ್ಸ್ಟ್ರುಮೆಂಟೇಶನ್ ಎಂಜಿನಿಯರಿಂಗ್ನಲ್ಲಿ BE/B.Tech, ಫೈನಾನ್ಸ್ಗೆ CA, CMA, ಸಿವಿಲ್ಗೆ ಸಿವಿಲ್ ಎಂಜಿನಿಯರಿಂಗ್ನಲ್ಲಿ BE/B.Tech & ಎಲೆಕ್ಟ್ರಿಕಲ್ಗೆ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ನಲ್ಲಿ BE/B.Tech ಪೂರ್ಣಗೊಳಿಸಿರಬೇಕು.
ವಯೋಮಿತಿ:
ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಕನಿಷ್ಠ 21 ವರ್ಷ & ಗರಿಷ್ಠ 30 ವರ್ಷ ಮೀರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರಲಿದೆ.
ವೇತನ
ಮಾಸಿಕ ₹24,900-50,500
ಉದ್ಯೋಗದ ಸ್ಥಳ:
ಕರ್ನಾಟಕ ಸೇರಿದಂತೆ ಭಾರತ
ಅರ್ಜಿ ಶುಲ್ಕ:
ಅಭ್ಯರ್ಥಿಗಳು ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ.
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ & ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು BSNLನ ಅಧಿಕೃತ ವೆಬ್ಸೈಟ್ bsnl.co.inಗೆ ಭೇಟಿ ಮಾಡಿ.
ಇತರೆ ವಿಷಯಗಳು
ಮಹಿಳೆಯರಿಗಾಗಿ ಉಳಿತಾಯ ಯೋಜನೆ! ಇಲ್ಲಿ ಖಾತೆ ತೆರೆದರೆ ಸಿಗುತ್ತೆ ಆಕರ್ಷಕ ಬಡ್ಡಿ
ಅನ್ನದಾತರಿಗೆ ಕೇಂದ್ರದಿಂದ ಬಂಪರ್ ಸುದ್ದಿ.! ಈ ಯೋಜನೆಯಿಂದ ಸಿಗಲಿದೆ 90% ವರೆಗೂ ಸಬ್ಸಿಡಿ